ನನ್ನ ಗೆಲುವು ಜನರ ಒಪ್ಪಿಗೆಯ ಮೇಲಿದೆ – ಸೋನು ಗೌಡ

ವಿಕ್ರಮ್ ಪ್ರಭು ಅವರ ನಿರ್ಮಾಣ ಹಾಗೂ ನಿರ್ದೇಶನಡಿಯಲ್ಲಿ ಮೂಡಿಬಂದಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಮುಂದಿನ ತಿಂಗಳು ಅಂದರೆ ಜುಲೈ 8 ರಂದು ತೆರೆ ಕಾಣಲಿದೆ. ಮದುವೆಯ ವ್ಯವಸ್ಥೆಯ ಕುರಿತ ಕಥಾ ಹಂದರವನ್ನೊಳಗೊಂಡ ವೆಡ್ಡಿಂಗ್ ಗಿಫ್ಟ್ ನ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ವೆಡ್ಡಿಂಗ್ ಗಿಫ್ಟ್ ನಲ್ಲಿ ನಟಿ ಸೋನು ಗೌಡ ನಾಯಕಿಯಾಗಿ ನಟಿಸಿದ್ದು ಇದರಲ್ಲಿ ಅವರು ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ಸಿನಿಮಾದ ಬಗ್ಗೆ ಮಾತನಾಡಿರುವ ಸೋನು […]

ಹೊಸ ಚಿತ್ರಕ್ಕಾಗಿ ‘ಡಾಲಿ ಪಿಕ್ಚರ್ಸ್’ ಜೊತೆ ಕೈ ಜೋಡಿಸಿದ ‘ಕೆ ಆರ್ ಜಿ’.

ಕನ್ನಡದಲ್ಲಿ ಹೊಸ ರೀತಿಯ ಸಿನಿಮಾಗಳು ಬರುತ್ತಿರುವುದು ಬಹುಪಾಲು ಹೊಸ ನಿರ್ಮಾಣ ಸಂಸ್ಥೆಗಳಿಂದಲೇ. ಇಂತಹ ಹೊಸ ಸಿನಿಮಾ ಪ್ರೊಡಕ್ಷನ್ ಹೌಸ್ಗಳಲ್ಲಿ ಮುಂಚೂಣಿಯಲ್ಲಿರುವವರಲ್ಲಿ ‘ಡಾಲಿ ಪಿಕ್ಚರ್ಸ್’ ಹಾಗು ‘ಕೆ ಆರ್ ಜಿ ಸ್ಟುಡಿಯೋಸ್’ ಕೂಡ ಸೇರಿಕೊಳ್ಳುತ್ತಾರೆ. ಕನ್ನಡದ ಖ್ಯಾತ ನಟ ಡಾಲಿ ಧನಂಜಯ ಅವರ ಮಾಲೀಕತ್ವದ ‘ಡಾಲಿ ಪಿಕ್ಚರ್ಸ್’ ಸದ್ಯ ಅವರದೇ ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಯಶಸ್ಸನ್ನ ಕಂಡಿದೆ. ಹಾಗೆಯೇ ಕಾರ್ತಿಕ್ ಹಾಗು ಯೋಗಿ ಜಿ ರಾಜ್ ನೇತೃತ್ವದ ‘ಕೆ ಆರ್ ಜಿ ಸ್ಟುಡಿಯೋಸ್’ ಧನಂಜಯ ಅವರೇ ನಾಯಕರಾಗಿ […]

ಮಾಜಿ ಪತ್ನಿಗೆ ಗೆಲುವನ್ನು ಅರ್ಪಿಸಿದ ಅಮೀರ್ ಖಾನ್.. ಯಾಕೆ ಗೊತ್ತಾ?

ಬಾಲಿವುಡ್ ನಟ ಅಮೀರ್ ಖಾನ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದ್ದು ಲಗಾನ್ ಸಿನಿಮಾ. ಆ ಸಿನಿಮಾ ಬಿಡುಗಡೆಯಾಗಿ ಇಪ್ಪತ್ತೊಂದು ವರ್ಷ ಕಳೆದಿದೆ. ತನ್ನನ್ನು ಸೂಪರ್ ಸ್ಟಾರ್ ಮಾಡಿರುವ ಈ ಚಿತ್ರ ಇಪ್ಪತ್ತೊಂದು ವರ್ಷ ಪೂರೈಸಿದ ಸಂತಸದಲ್ಲಿರುವ ಅಮೀರ್ ಖಾನ್ ಈ ಗೆಲುವನ್ನು ತನ್ನ ಮಾಜಿ ಪತ್ನಿ ರೀನಾ ದತ್ತ ಅವರಿಗೆ ಅರ್ಪಿಸಿದ್ದಾರೆ. ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸದ್ದು ಮಾಡಿರುವ ಲಗಾನ್ ಸಿನಿಮಾ ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಸಿನಿಮಾ ಎಂದರೆ ತಪ್ಪಾಗಲಾರದು. ಜೂನ್ 15, 2001 […]

ಸುಪ್ರಿತಾ ಸತ್ಯನಾರಾಯಣ ಹೊಸ ಸಿನಿಮಾದ ಹೊಸ ಸುದ್ದಿ.

ಕನ್ನಡ ಕಿರುತೆರೆಯ ‘ಸೀತಾ ವಲ್ಲಭ’ ಹಾಗು ‘ಸರಸು’ ಧಾರವಾಹಿಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಾಗಿ ಉಳಿದಿರುವ ನಟಿ ಸುಪ್ರಿತಾ ಸತ್ಯನಾರಾಯಣ್. ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿರುವ ಇವರು ಇದೀಗ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಹಲವಾರು ಚಿತ್ರದಲ್ಲಿ ನಟಿಸುತ್ತಿರುವ ಇವರ ಒಂದು ವಿಭಿನ್ನ ಸಿನಿಮಾ ‘ರುಗ್ನ’. ಸುನಿಲ್ ಎಸ್ ಭಾರಧ್ವಜ್ ನಿರ್ದೇಶನದ ಈ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಪ್ರಿತಾ ಸತ್ಯನಾರಾಯಣ್ ಹಾಗು ಉದಯ್ ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ರುಗ್ನ’ ಚಿತ್ರದ ಟ್ರೈಲರ್ ಜೂನ್ 16ರಂದು […]

ಶಿವಣ್ಣ-ರಜನಿ ಕಾಂಬಿನೇಶನ್ ಗೆ ಟೈಟಲ್ ಫಿಕ್ಸ್

ಸೂಪರ್ ಸ್ಟಾರ್ ರಜನಿಕಾಂತ್ ಹಾಗು ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಜೊತೆಯಾಗಿ ನಟಿಸಲಿದ್ದಾರೆ, ಇದೊಂದು ಪಕ್ಕ ಆಕ್ಷನ್-ಡ್ರಾಮಾ ರೀತಿಯ ಸಿನಿಮಾ ಆಗಿರಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ರೋಮಾಂಚನ ಹುಟ್ಟಿಸಿತ್ತು. ಸಿನಿಮಾದ ಬಗೆಗಿನ ಮುಂದಿನ ಅಪ್ಡೇಟ್ ಗೆ ಎಲ್ಲರು ಕಾಯುತ್ತಿದ್ದರು. ಈಗ ಈ ಚಿತ್ರಕ್ಕೆ ಶೀರ್ಷಿಕೆ ಇಟ್ಟಾಗಿದೆ. ರಜನಿಕಾಂತ್ ಅವರ 169ನೇ ಚಿತ್ರವಾಗಿದ್ದರಿಂದ ಇಲ್ಲಿವರೆಗೂ ಈ ಸಿನಿಮಾವನ್ನ ‘ತಲೈವರ್169’ ಎಂದು ಕರೆಯುತ್ತಿದ್ದರು. ಇನ್ನು ಮುಂದೆ ‘ಜೈಲರ್’ ಎಂದು ಕರೆಯಲಾಗುತ್ತದೆ. ತಮಿಳಿನ ‘ಡಾಕ್ಟರ್’ ಹಾಗು ‘ಬೀಸ್ಟ್’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ನೆಲ್ಸನ್ […]

‘ಕಿರಿಕ್ ಪಾರ್ಟಿ 2’ ನಲ್ಲಿ ಏನಾಗಲಿದೆ ಕರ್ಣನ ಕಥೆ!! ರಕ್ಷಿತ್ ಶೆಟ್ಟಿ ಮಾತು.

2016ರ ವರ್ಷಾಂತ್ಯದಲ್ಲಿ ತೆರೆಕಂಡಂತಹ ಬ್ಲಾಕ್ ಬಸ್ಟರ್ ಚಿತ್ರ ‘ಕಿರಿಕ್ ಪಾರ್ಟಿ’. ರಕ್ಷಿತ್-ರಿಷಬ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಈ ಸಿನಿಮಾ, ಒಬ್ಬ ಟೀನೇಜ್ ಇಂಜಿನಿಯರಿಂಗ್ ವಿದ್ಯಾರ್ಥಿಯ ನಾಲ್ಕು ವರ್ಷದ ಕಥೆಯನ್ನು ಬೆಳ್ಳಿಪರದೆ ಮೇಲೆ ಚಿತ್ರಿಸಿತ್ತು. ಯುವಕರಿಂದ ಹಿಡಿದು ಎಲ್ಲ ವರ್ಗದ ಪ್ರೇಕ್ಷಕರಿಂದಲೂ ಅದ್ಭುತ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ ಯಶಸ್ವಿ ಕಲೆಕ್ಷನ್ ಗಳಿಸಿತ್ತು. ಬೇರೆ ಭಾಷೆಗೆ ರಿಮೇಕ್ ಕೂಡ ಆಗಿತ್ತು. ಇದೀಗ ಈ ತಂಡ ಸಿನಿಮಾದ ಮುಂದಿನ ಭಾಗ ಮಾಡಲು ಹೊರಟಿದ್ದಾರೆ. ಹಾಗಾದರೆ ಇಂಜಿನಿಯರಿಂಗ್ ಮುಗಿಸಿರೋ ಕರ್ಣನ ಬದುಕಿನಲ್ಲಿ […]

‘ವಿಕ್ರಾಂತ್ ರೋಣ’ನ ಲೋಕದ ಝಲಕ್ ಗೆ ಮುಹೂರ್ತ ಫಿಕ್ಸ್.

ಭಾರತದಾದ್ಯಂತ ಸದ್ಯ ಕನ್ನಡದ ಪಾನ್-ಇಂಡಿಯನ್ ಸಿನಿಮಾಗಳು ಸದ್ದು ಮಾಡುತ್ತಿವೆ. ‘ಕೆಜಿಎಫ್ ಚಾಪ್ಟರ್ 2’ನ ಸದ್ದು ಇನ್ನು ಮುಗಿದಿಲ್ಲ. ಈಗ ‘777 ಚಾರ್ಲಿ’ ಎಲ್ಲರ ಮನ ಕದಿಯುತ್ತಿದೆ. ಈ ಸಾಲಿನಲ್ಲಿರುವ ಕನ್ನಡದ ಮುಂದಿನ ಪಾನ್-ಇಂಡಿಯನ್ ಸಿನಿಮಾ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’. ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರ ನಿರ್ದೇಶನದ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ನಟಿಸಿರುವ ಈ ಸಿನಿಮಾದ ಹೊಸ ಅಪ್ಡೇಟ್ ಅನ್ನು ಚಿತ್ರತಂಡ ಹೊರಹಾಕಿದೆ. ಪಂಚ ಭಾರತೀಯ ಭಾಷೆಗಳು ಹಾಗು ಇಂಗ್ಲೀಷ್ ನಲ್ಲೂ ಕೂಡ ಬಿಡುಗಡೆಯಾಗಲಿರೋ […]

ತಮ್ಮ ಮೂರನೇ ಸಿನಿಮಾ ಘೋಷಿಸಿದ ‘ಕೆ ಆರ್ ಜಿ ಸ್ಟುಡಿಯೋಸ್’.

‘ಹೊಂಬಾಳೆ ಫಿಲಂಸ್’ನ ಸಹೋದರನಂತಿರುವ ಸಿನಿಮಾ ನಿರ್ಮಾಣ ಸಂಸ್ಥೆ ‘ಕೆ ಆರ್ ಜಿ ಸ್ಟುಡಿಯೋಸ್’. ಈಗಾಗಲೇ ಹಲವು ಅದ್ಭುತ ಸಿನಿಮಾಗಳನ್ನು ರಾಜ್ಯದಾದ್ಯಂತ ವಿತರಣೆ ಮಾಡಿರುವ ಇವರು, ಇದೀಗ ಸಿನಿಮಾ ನಿರ್ಮಾಣದತ್ತ ಕಣ್ಣು ಹಾಯಿಸಿದ್ದಾರೆ. ಡಾಲಿ ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಇವರ ಮೊದಲ ನಿರ್ಮಾಣ. ಈ ಚಿತ್ರದಿಂದ ಅತೀವ ಯಶಸ್ಸನ್ನು ‘ಕೆ ಆರ್ ಜಿ’ ಪಡೆದಿತ್ತು. ತದನಂತರ ಡಾಲಿಯೊಂದಿಗೇ ‘ಹೊಯ್ಸಳ’ ಎಂಬ ಸಿನಿಮಾವನ್ನು ಘೋಷಿಸಿದ್ದರು. ಇದೀಗ ತಮ್ಮ ಮೂರನೇ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸೀದಾ ಒಟಿಟಿಗೇ ಬಂದಂತಹ […]

ಆರಂಭವಾಗ್ತಿದೆ ‘ಸಿಂಧೂರ ಲಕ್ಷ್ಮಣ’.

ಕನ್ನಡ ನಾಡಿನಲ್ಲಿ ತಮ್ಮ ಧೈರ್ಯ ಮೆರೆದ ಹಲವಾರು ಯುವ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅದರಲ್ಲಿ ಪ್ರಮುಖರೊಬ್ಬರೆಂದರೆ ಉತ್ತರ ಕರ್ನಾಟಕ ಭಾಗದ ಸಿಂಧೂರ ಲಕ್ಷ್ಮಣ. ಸದ್ಯ ಮಹಾರಾಷ್ಟ್ರದಲ್ಲಿರುವ ಸಂಗ್ಲಿ ಗ್ರಾಮದಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಗೊಂಡು ತಮ್ಮ 22ನೇ ವಯಸ್ಸಿಗೇ ಪ್ರಾಣತೊರೆದವರು. ಇವರ ಬಗ್ಗೆ ಕನ್ನಡದಲ್ಲಿ ಹೊಸ ಸಿನಿಮಾವೊಂದು ಬರುತ್ತಿರುವುದು ಎಲ್ಲರಿಗೂ ತಿಳಿದಿರೋ ವಿಷಯ. ‘ಸಿಂಧೂರ ಲಕ್ಷ್ಮಣ’ ಎಂಬ ಹೆಸರಿನಿಂದಲೇ ಬಹುನಿರೀಕ್ಷಿತವಾಗಿರುವ ಈ ಸಿನಿಮಾ ಸದ್ಯ ತನ್ನ ಕಥೆಯನ್ನು ಒಂದುಗೂಡಿಸಿಕೊಳ್ಳುತ್ತಿದೆ. ‘ರಾಬರ್ಟ್’ ಸಿನಿಮಾಗೆ ಬಂಡವಾಳ ಹೂಡಿದ್ದ ಉಮಾಪತಿ ಶ್ರೀನಿವಾಸ್ […]

ಮನರಂಜನೆ ನೀಡಲು ಬರಲಿದ್ದಾರೆ ಬಡ್ಡೀಸ್

ಕಾಲೇಜು ಬದುಕಿನ ಕಥೆಯನ್ನೊಳಗೊಂಡ ಸಿನಿಮಾಗಳು ಬರುತ್ತಿರುವುದು ಹೊಸತೇನಲ್ಲ. ಆದರೆ ಪ್ರತಿ ಸಿನಿಮಾದಲ್ಲಿ ಹೊಸತೊಂದು ಅಂಶವಿರುವುದಂತೂ ನಿಜ. ಇದೀಗ ಅದೇ ಕಾಲೇಜು, ಅದೇ ಸ್ನೇಹದ ಕುರಿತಾದ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅದುವೇ ಬಡ್ಡೀಸ್. ಗುರು ತೇಜ್ ಶೆಟ್ಟಿ ನಿರ್ದೇಶನದ ಬಡ್ಡೀಸ್ ಸಿನಿಮಾ ಇದೇ ಜೂನ್ 24 ರಂದು ಬಿಡುಗಡೆಯಾಗಲಿದೆ. ಬರೋಬ್ಬರಿ 15 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಗುರು ತೇಜ್ ಶೆಟ್ಟಿ ಈ ಸಿನಿಮಾದ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. “ಬಡ್ಡೀಸ್.. ಸಿನಿಮಾದ […]