‘ಮೇಡ್ ಇನ್ ಚೈನಾ’ ಕಥೆ ಹೇಳಲು ಹೊರಟಿರೋ ನಾಗಭೂಷಣ.

ಕೊರೋನ ಎಂಬ ಒಂದು ಕಾಯಿಲೆ ಅದೆಷ್ಟೋ ಜನರ ಬದುಕು ಬದಲಿಸಿತ್ತು. ಅದರಲ್ಲೂ ಸಿನಿಮಾರಂಗಕ್ಕೆ ದೊಡ್ಡ ಹೊಡೆತಗಳನ್ನೇ ನೀಡಿತ್ತು. ಈ ಸಂಧರ್ಭದಲ್ಲಿ ಬಹುವಾಗಿ ಬಳಕೆಯಾದದ್ದು ಆನ್ಲೈನ್ ಸೇವೆಗಳು. ದೂರದೂರ ಇದ್ದವರು ವಿಡಿಯೋ ಕಾಲ್ ಗಳೂ ಆನ್ಲೈನ್ ಮೀಟಿಂಗ್ ಗಳ ಮೂಲಕ ವೈಯಕ್ತಿಕ ಹಾಗು ವ್ಯವಹಾರಿಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಸದ್ಯ ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಒಂದು ಬರುತ್ತಿದೆ. ಅದುವೇ ‘ಬಡವ ರಾಸ್ಕಲ್’ ಸಿನಿಮಾ ಖ್ಯಾತಿಯ ನಾಗಭೂಷಣ ನಟನೆಯ ‘ಮೇಡ್ ಇನ್ ಚೈನಾ’. ಈ ಹಿಂದೆ ಇನ್ನೊಂದು ಕೊರೋನ […]
ರಗಡ್ ಅವತಾರದಲ್ಲಿ ಅಭಿಷೇಕ್ ಅಂಬರೀಶ್

ನಿರ್ದೇಶಕ ಕೃಷ್ಣ ಅವರ ಹೊಸ ಸಿನಿಮಾ ಕಾಳಿ ಯ ಪೋಸ್ಟರ್ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಅಭಿಷೇಕ್ ಅಂಬರೀಶ್ ಅವರ ರಗಡ್ ಲುಕ್. ಸಿನಿಮಾದ ಟೈಟಲ್ ಕೇಳಿಯೇ ಆಕರ್ಷಿತರಾದ ಸಿನಿ ಪ್ರಿಯರು ಇದೀಗ ಪೋಸ್ಟರ್ ನೋಡಿ ಪೂರ್ತಿ ಫಿದಾ ಆಗಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ನಟನೆಯ ಮೂರನೇ ಸಿನಿಮಾವಾಗಿದ್ದು ಇದರಲ್ಲಿ ಹಳ್ಳಿ ಹುಡುಗನಾಗಿ ನಿಮ್ಮನ್ನು ರಂಜಿಸಲು ಬರಲಿದ್ದಾರೆ. ಸಿನಿಮಾದಲ್ಲಿ ಕಾಲೇಜು ಹುಡುಗನಾಗಿರುವ ಇವರು ಪೋಸ್ಟರ್ ನಲ್ಲಿ ಲುಂಗಿ ಉಟ್ಟು ಸಿನಿಪ್ರಿಯರ ಮನ ಸೆಳೆದಿದ್ದಾರೆ. […]
ಬೇರೆ ಚಿತ್ರರಂಗಗಳಲ್ಲೂ ಪ್ರಶಂಸೆ ಪಡೆಯುತ್ತಿದೆ ‘777 ಚಾರ್ಲಿ’

‘777 ಚಾರ್ಲಿ’ ಎಲ್ಲರ ಮನೆಮಾತಾಗಿದೆ. ಕಲಿಯುಗದ ಧರ್ಮರಾಜನ ಕಥೆ ಹೇಳೋ ಈ ಸಿನಿಮಾದಲ್ಲಿನ ಧರ್ಮ ಹಾಗು ಚಾರ್ಲಿಯ ಪಾತ್ರಕ್ಕೆ ಎಲ್ಲರು ಮನಸೋತಿದ್ದಾರೆ. ಪಂಚ ಭಾಷೆಗಳಲ್ಲಿ ಬಿಡುಗಡೆಯಗಿರುವ ಈ ಪಾನ್-ಇಂಡಿಯನ್ ಸಿನಿಮಾಗೆ ಎಲ್ಲ ಭಾಗದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೇವಲ ಪ್ರೇಕ್ಷಕರಷ್ಟೇ ಅಲ್ಲದೇ ಈ ಸಾಲಿಗೆ ಸೆಲೆಬ್ರಿಟಿಗಳೂ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಹಾಗು ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿಯವರಿಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಬಾಲಿವುಡ್ ನ ಸ್ಟಾರ್ ನಟ ಜಾನ್ ಅಬ್ರಾಹಂ ತನ್ನ ಸಾಮಾಜಿಕ […]
ಪ್ರಮೋದ್ ಗೆ ಜೋಡಿಯಾಗಲಿದ್ದಾರೆ ‘ಲವ್ ಮೊಕ್ಟೇಲ್ 2’ ಬೆಡಗಿ

‘ಪ್ರೀಮಿಯರ್ ಪದ್ಮಿನಿ’ ಹಾಗು ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿನ ತಮ್ಮ ಅಭಿನಯದಿಂದ ಕನ್ನಡ ಸಿನಿರಸಿಕರ ಮನದಲ್ಲಿ ಖಾಯಂ ಜಾಗ ಮಾಡಿಕೊಂಡಿರುವ ನಟ ಪ್ರಮೋದ್. ಸದ್ಯ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಇವರು 2017ರ ‘ರಾಜರು’ ಸಿನಿಮಾ ಖ್ಯಾತಿಯ ಗಿರೀಶ್ ಮೂಲಿಮನಿ ಅವರ ಹೊಸ ಸಿನಿಮಾವೊಂದರ ಎರಡು ನಾಯಕರಲ್ಲಿ ಒಬ್ಬರಾಗಿ ನಟಿಸುತ್ತಿದ್ದಾರೆ. ಇವರ ಪಾತ್ರಕ್ಕೆ ನಾಯಕಿ ಯಾರೆಂದು ಚಿತ್ರರಂಗ ಬಹಿರಂಗಪಡಿಸಿದ್ದು, ‘ಲವ್ ಮೊಕ್ಟೇಲ್ 2’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ, ಮಲಯಾಳಂ ಬೆಡಗಿ ರಾಚೆಲ್ ಡೇವಿಡ್ ಈ ಪಾತ್ರಕ್ಕೆ ಜೀವ […]
ನಾಯಕನಾಗಿ ಭಡ್ತಿ ಪಡೆದ ಚಿಕ್ಕಣ್ಣ

ಕನ್ನಡ ಚಿತ್ರರಂಗದಲ್ಲಿ ಹಲವಾರು ಹಾಸ್ಯ ಕಲಾವಿದರು ಜನರನ್ನ ನಕ್ಕು ನಗಿಸಿದ್ದಾರೆ. ಬರುವಂತಹ ಭಾಗಶಃ ಎಲ್ಲ ಸಿನಿಮಾಗಳಲ್ಲೂ ಹಾಸ್ಯನಟನಿಗೊಂದು ಮುಖ್ಯ ಪಾತ್ರ ಇದ್ದೆ ಇರುತ್ತದೆ. ಪ್ರಸ್ತುತ ಹಲವಾರು ಹಾಸ್ಯ ನಟರು ಕನ್ನಡ ಚಿತ್ರಗಳಲ್ಲಿ ಚಾಲ್ತಿಯಲ್ಲಿದ್ದಾರೆ. ಆದರೆ ಈಗಿನ ಸಿನಿಮಾಗಳಿಗೆಲ್ಲದಕ್ಕೂ ಬೇಕಾದ ಬಹುಬೇಡಿಕೆಯ ಹಾಸ್ಯನಟ ಚಿಕ್ಕಣ್ಣ ಅವರು. ಅಪಾರ ಅಭಿಮಾನಿ ಬಳಗವನ್ನೇ ಹೊಂದಿರೋ ಇವರು ಇದೀಗ ನಾಯಕನಟನಾಗಿ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ. ಶರಣ್ ಹಾಗು ಚಿಕ್ಕಣ್ಣ ಜೋಡಿ ಸ್ಯಾಂಡಲ್ವುಡ್ ನಲ್ಲಿ ಬಹುಪ್ರಸಿದ್ಧ. ಈ ಜೋಡಿಯ ಪ್ರಮುಖ ಹಿಟ್ ಚಿತ್ರ ‘ಅಧ್ಯಕ್ಷ’. […]
ದೆವ್ವದ ಜೊತೆ ಡುಯೆಟ್ ಆಡ್ತಾರಾ ಅನೀಶ್!!

‘ಅಕಿರಾ’ ಸಿನಿಮಾದಿಂದ ಸ್ಯಾಂಡಲ್ವುಡ್ ನಲ್ಲಿ ತಮ್ಮ ಹೆಸರನ್ನು ದಪ್ಪ ಹೆಸರಿನಲ್ಲಿ ಬರೆಸಿರೋ ನಟ ಅನೀಶ್, ಕನ್ನಡದ ಭರವಸೆ ಹುಟ್ಟಿಸಿರೋ ಯುವನಟರುಗಳಲ್ಲಿ ಒಬ್ಬರು. ಸುಮಾರು ಒಂದು ದಶಕದಿಂದ ಚಂದನವನದಲ್ಲಿ ನಿರತರಾಗಿರುವ ಇವರು, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೀಗ ಅವರ ನಟನೆಯ 10ನೇ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಎಲ್ಲೆಡೆ ಭರ್ಜರಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಎ ಆರ್ ಶಾನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬೆಂಕಿ’ ಸಿನಿಮಾ ಅನೀಶ್ ಅಭಿನಯದ 10ನೇ ಸಿನಿಮಾ ಆಗಿರಲಿದೆ. ತಮ್ಮದೇ ‘ವಿಂಕ್ ವಿಸಿಲ್ ಪ್ರೊಡಕ್ಷನ್ಸ್’ ಬ್ಯಾನರ್ […]
ನವರಸ ನಾಯಕನಿಂದ ಪ್ರಶಂಸೆ ಪಡೆದ ರಕ್ಷಿತ್ ಶೆಟ್ಟಿ…

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳ ಪೈಕಿ 777 ಚಾರ್ಲಿ ಕೂಡಾ ಒಂದು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಕಾಂಬಿನೇಷನ್ ನ ಈ ಸಿನಿಮಾವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ಇದೊಂದು ಭಾವನಾತ್ಮಕವಾದ ಸಿನಿಮಾವಾಗಿದ್ದು ಪ್ರಾಣಿಪ್ರಿಯರಿಗಂತೂ ಬಹಳ ಬೇಗ ಇದು ಕನೆಕ್ಟ್ ಆಗುತ್ತದೆ. ಸಿನಿಪ್ರಿಯರ ಜೊತೆಗೆ ಸೆಲೆಬ್ರಿಟಿಗಳ ತನಕ ಪ್ರತಿಯೊಬ್ಬರು ಚಾರ್ಲಿ ಯನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ನೋಡಿ ಕಣ್ಣೀರು ಸುರಿಸಿದ್ದರು. “777 ಚಾರ್ಲಿ ಸಿನಿಮಾ ನಿಜಕ್ಕೂ […]
ಶುಗರ್ ಲೆಸ್ ತಂಡದಿಂದ ಸಿಹಿಸುದ್ದಿ!

ಕೆ.ಎಂ. ಶಶಿಧರ್ ನಿರ್ಮಾಣ ಹಾಗೂ ನಿರ್ದೇಶನದ, ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಮುಖ್ಯಭೂಮಿಕೆಯಲ್ಲಿರುವ ಶುಗರ್ ಲೆಸ್ ಚಿತ್ರ ಬಿಡುಗಡೆಗೆ ತಯಾರಾಗಿದೆ. ಮುಂದಿನ ತಿಂಗಳು ಅಂದರೆ ಜುಲೈ 8 ರಂದು ಶುಗರ್ ಲೆಸ್ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಚನೆ ಮಾಡುತ್ತಿದೆ. ಶುಗರ್ ಲೆಸ್ ಸಿನಿಮಾ ಬಿಡುಗಡೆಯಾಗುವುದಕ್ಕಾಗಿ ಚಿತ್ರತಂಡವೂ ಕೂಡಾ ಕಾತರದಿಂದ ಕಾಯುತ್ತಿದ್ದು, ಇದರ ನಡುವೆ ಮಗದೊಂದು ಸಿಹಿ ಸುದ್ದಿ ಹೊರಬಂದಿದ್ದು ಚಿತ್ರತಂಡ ಡಬಲ್ ಖುಷಿಯಲ್ಲಿದೆ. ಶುಗರ್ ಲೆಸ್ ಸಿನಿಮಾದ ರಿಮೇಕ್ ಹಕ್ಕುಗಳು ಮಾರಾಟವಾಗಿದೆ. ಹೌದು, ಈ […]
ಕಿರುತೆರೆಯಿಂದ ಹಿರಿತೆರೆಗೆ ನಾಯಕನಾಗಿ ಹಾರುತ್ತಿರುವ ನಟ

ಕನ್ನಡ ಕಿರುತೆರೆಯಲ್ಲಿ ಹಲವಾರು ಪ್ರತಿಭಾವಂತ ನಟ-ನಟಿಯರು ತಮ್ಮ ಹೆಸರುಗಳನ್ನು ಅಚ್ಚಾಗಿ ಉಳಿಸಿರುತ್ತಾರೆ. ತಮ್ಮ ನಟನೆ ಅಭಿನಯಗಳಿಂದ ಜನಮನಗೆದ್ದು, ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಾಗಿ ಹಿರಿತೆರೆ ಪ್ರವೇಶಿಸುತ್ತಾರೆ. ಸದ್ಯ ಈ ಸಾಲಿಗೆ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಅಭಿ ದಾಸ್ ಸೇರಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಯಶಸ್ವಿ ಧಾರಾವಾಹಿ ‘ಗಟ್ಟಿಮೇಳ’ದಲ್ಲಿ ವಿಕ್ಕಿ ಪಾತ್ರದರಿಯಾಗಿ ಮನೆಮಾತಾಗಿರುವ ಇವರು, ಇದೀಗ ಹೊಸ ಚಿತ್ರವೊಂದರ ನಾಯಕನಟರಾಗಿ ಘೋಷಿತರಾಗಿದ್ದಾರೆ. ಇವರಿಗೆ ನಾಯಕಿಯಾಗಿ ಅದೇ ಧಾರಾವಾಹಿಯಲ್ಲಿ ‘ಸಾಹಿತ್ಯ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶರಣ್ಯ ಶೆಟ್ಟಿ ನಟಿಸಲಿದ್ದಾರೆ. […]
ಕ್ರೇಜಿ ಸ್ಟಾರ್ ಮಗನ ‘ಪ್ರೀ-ರಿಲೀಸ್’ ಇವೆಂಟ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳೇ ಕಳೆದಿವೆ. ಇದೀಗ ಅವರ ಪುತ್ರರಿಬ್ಬರೂ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಇವರ ಮೊದಲನೇ ಮಗನಾದ ಮನೋರಂಜನ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡನೇ ಮಗನಾದ ವಿಕ್ರಮ್ ರವಿಚಂದ್ರನ್ ಅವರ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಹನಾ ಮೂರ್ತಿ ಅವರು ನಿರ್ದೇಶಿಸಿರುವ ‘ತ್ರಿವಿಕ್ರಮ’ ಸಿನಿಮಾ ವಿಕ್ರಮ್ ಅವರ ಮೊದಲನೇ ಚಿತ್ರ. ಸದ್ಯ ಈ ಚಿತ್ರ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆ, ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಗೆ ಭರ್ಜರಿ ಸಿದ್ಧತೆಗಳು […]

