‘777 ಚಾರ್ಲಿ’ ನೋಡಿ ಭಾವುಕರಾದ ಕನ್ನಡ ನಾಡಿನ ದೊರೆ.

ಪ್ರಾಯಷಃ ಸದ್ಯ ‘777 ಚಾರ್ಲಿ’ ಸಿನಿಮಾವನ್ನು ಹೊಗಳದೆ, ಸಿನಿಮಾ ನೋಡಿ ಕಣ್ಣ ತುಂಬಿಕೊಳ್ಳದೆ ಇರೋ ಸಿನಿರಸಿಕರೇ ಇಲ್ಲ ಎನ್ನಬಹುದು. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಎಲ್ಲರನ್ನೂ ಕಾಡುತ್ತಾ ಎಲ್ಲೆಡೆ ಹೆಸರು ಮಾಡುತ್ತಿದೆ. ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಒಬ್ಬ ವ್ಯಕ್ತಿ ಹಾಗು ನಾಯಿಯ ನಡುವಿನ ಅವಿನಾಭಾವ ಸಂಭಂದವನ್ನು, ಆ ನಾಯಿ ನೀಡೋ ಅಪಾರ ಪ್ರೀತಿಯನ್ನು ತೆರೆಮೇಲೆ ತೋರಿಸುತ್ತದೆ. ಸದ್ಯ ಸಿನಿಮಾ ನೋಡಿ ಭಾವುಕರಾದವರ ಸಾಲಿಗೆ ಕನ್ನಡನಾಡಿನ ದೊರೆ, ಮುಖ್ಯಮಂತ್ರಿ […]

‘ಹರಿಕಥೆ ಅಲ್ಲ ಗಿರಿಕಥೆ’ ಹೇಳಹೊರಟಿರೋ ರಿಷಬ್ ಶೆಟ್ಟಿ ಹಾಗು ತಂಡ.

ಸ್ಯಾಂಡಲ್ವುಡ್ ನಲ್ಲಿ ಭರವಸೆ ಮೂಡಿಸಿ, ತಮ್ಮದೇ ಅಭಿಮಾನಿ ಬಳಗವನ್ನ ಪಡೆದಿರೋ ಕೆಲವೇ ಕೆಲವು ನಟ-ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಅವರು ಒಬ್ಬರು. ಒಂದಾದ ಮೇಲೆ ಒಂದರಂತೆ ಸಾಲು ಸಾಲು ಉತ್ತಮ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡುತ್ತಿರುವ ಇವರು, ಇದೀಗ ‘ಹರಿಕಥೆ ಅಲ್ಲ ಗಿರಿಕಥೆ’ ಹೇಳಹೊರಟಿದ್ದಾರೆ. ಆದರೆ ಈ ಬಾರಿ ಅವರದ್ದು ಕೇವಲ ನಟನ ಪಾತ್ರ. ನಿರ್ದೇಶನದ ಜವಾಬ್ದಾರಿಯನ್ನು ಅವರ ತಂಡದವರೇ ಆದ ಅನಿರುಧ್ ಮಹೇಶ್ ಹಾಗು ಕರಣ್ ಅನಂತ್ ವಹಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಪಾತ್ರಗಳ ಪರಿಚಯವನ್ನ ಪೋಸ್ಟರ್ ಗಳ […]

“ನಾನಿದನ್ನೆಲ್ಲ ಮಾಡುತ್ತಿರುವುದೇ ನನ್ನ ಕನಸಿನ ‘ಪುಣ್ಯಕೋಟಿ’ಗಾಗಿ”: ರಕ್ಷಿತ್ ಶೆಟ್ಟಿ.

ಕರಾವಳಿಯ ಕುವರ, ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿರುವ ನಟ-ನಿರ್ದೇಶಕ-ನಿರ್ಮಾಪಕ ರಕ್ಷಿತ್ ಶೆಟ್ಟಿಯವರು ತಮ್ಮ ಹೊಸ ಸಿನಿಮಾ ‘777 ಚಾರ್ಲಿ’ಯ ಯಶಸ್ಸಿನ ಸಂತಸದಲ್ಲಿದ್ದಾರೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಪ್ರಸ್ತುತ ಪ್ರಪಂಚದಾದ್ಯಂತ ಚಿತ್ರಮಂದಿರಗಳನ್ನು ಆಳುತ್ತಿದೆ ಎಂದರೂ ಪ್ರಾಯಷಃ ತಪ್ಪಾಗದು. ಈ ನಡುವೆ ಹಲವಾರು ಯೂಟ್ಯೂಬ್ ಚಾನೆಲ್ ಗಳಿಗೆ, ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ರಕ್ಷಿತ್ ಶೆಟ್ಟಿ, ತಮ್ಮ ಮುಂದಿನ ಸಿನಿಮಾಗಳ ಬಗ್ಗೆ, ತಮ್ಮ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ಯೂಟ್ಯೂಬ್ ನಲ್ಲಿ ರಕ್ಷಿತ್ ಶೆಟ್ಟಿ ಅವರ […]

ಒಂದಲ್ಲ ಎರಡಲ್ಲ, ಹಲವು ಭಾಷೆಗಳಲ್ಲಿ ‘ಕಬ್ಜ’

ರಿಯಲ್ ಸ್ಟಾರ್ ಉಪೇಂದ್ರ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಎರಡನೇ ಬಾರಿ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’. ಪ್ರಖ್ಯಾತ ನಿರ್ದೇಶಕರಾದ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ 1970ರ ದಶಕದ ಭೂಗತ ಲೋಕದ ಕಥೆಗಳನ್ನು ಹೇಳಲು ಹೊರಟಿದೆ. ಇದೊಂದು ಪಾನ್ ಇಂಡಿಯನ್ ಸಿನಿಮಾವಾಗಿದ್ದು ಝೆಡ್ ಎಲ್ಲ ಭಾಷೆಗಳ ಸ್ಟಾರ್ ಗಳೂ ಸಿನಿಮಾದ ತಾರಗಣದಲ್ಲಿರಲಿದ್ದಾರೆ. ಸುದೀಪ್ ಹಾಗೂ ಉಪೇಂದ್ರ ಅವರ ಜೊತೆ, ಶ್ರೀಯ ಶರಣ್, ಜಗಪತಿ ಬಾಬು, ಕಬೀರ್ ದುರ್ಹಾನ್ ಸಿಂಗ್, […]

ವಿಭಿನ್ನ ಪ್ರಯತ್ನದತ್ತ ಮುಖ ಮಾಡಿದ ರಂಗಿತರಂಗ ಬೆಡಗಿ

ರಂಗಿತರಂಗ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ನಾರಾಯಣ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ರಂಗಿತರಂಗದ ನಂತರ ಯೂ ಟರ್ನ್, ಬಿಬಿ5, ಕಾಫಿ ತೋಟ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಅಸತೋಮಾ ಸದ್ಗಮಯ, ಮುಂದಿನ ನಿಲ್ಡಾಣ, ಶಿವಾಜಿ ಸುರತ್ಕಲ್, ಚೇಸ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಲಿದ್ದಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿರುವ ರಾಧಿಕಾ ನಾರಾಯಣ್ ಮನೋಜ್ಞ […]

ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆ ಕಂಡ ನಟ, ಡಾಲಿ ಧನಂಜಯ.

ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರೋ ಯುವನಟರ ಸಾಲಿನಲ್ಲಿ ಮೊದಲು ಬರುವವರು, ‘ನಟರಾಕ್ಷಸ’ ಡಾಲಿ ಧನಂಜಯ. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಡಾಲಿ, ಹೀರೋಗೂ ಸೈ, ವಿಲನ್ ಗು ಸೈ. ಸದ್ಯ ಪುರ್ಸೊತ್ತೇ ಇಲ್ಲದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಇವರು, ತಮ್ಮ ಸಾಲು ಸಾಲು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅರ್ಧ ಮುಗಿದ ಈ 2022ನ್ನು ಮೇಲ್ನೋಟಕ್ಕೆ ಒಮ್ಮೆ ನೋಡಿದರೆ, ಈ ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆ ಕಂಡಂತಹ ಕನ್ನಡದ ನಟ ಎನಿಸಿಕೊಳ್ಳುತ್ತಾರೆ ಡಾಲಿ. 2021ರ ವರ್ಷಾಂತ್ಯಕ್ಕೆ […]

ಕನ್ನಡದ ಸ್ವಂತ ‘RRR’

RRR ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ತೆಲುಗಿನ ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾವಾಗಿದ್ದ ರಾಜಮೌಳಿ ಅವರ ನಿರ್ದೇಶನದ RRR ಸಿನಿಮಾ. ಎಲ್ಲೆಡೆ ಗುಲ್ಲೆಬ್ಬಿಸಿ, ಚಿತ್ರಮಂದಿರಗಳನ್ನ ಜನರಿಂದ ತುಂಬುವಂತೆ ಮಾಡಿ, ಹಲವು ದಾಖಲೆಗಳನ್ನು ಬರೆದಂತ ಸಿನಿಮಾ ಆಗಿತ್ತು RRR. ನಮ್ಮ ಕನ್ನಡದಲ್ಲೂ ಒಂದು RRR ಇದೆ. ಆದರೆ ಅದು ಸಿನಿಮಾವಲ್ಲ. ಬದಲಾಗಿ ಸಿನಿಮಾ ಮಾಡುವ ಮೂರು ಅತಿ ಚಾಣಾಕ್ಷರು. ಸಿನಿರಸಿಕರು ಸದ್ಯ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಅವರನ್ನು ಕನ್ನಡದ RRR ಎಂದು ಸಂಭೋದಿಸುತ್ತಿದ್ದಾರೆ. […]

ಬರ್ತ್ ಡೇ ಬಾಯ್ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾಗಳು.

ಕನ್ನಡ ಕಿರುತೆರೆಯಿಂದ ತಮ್ಮ ನಟನಾ ಪಯಣ ಆರಂಭಿಸಿ ಸದ್ಯ ಬೆಳ್ಳಿತೆರೆಯ ಭರವಸೆಯ ಯುವನಟರಲ್ಲಿ ಒಬ್ಬರಾಗಿದ್ದಾರೆ. ನಟನೆಯಿಂದ ಆರಂಭಿಸಿ ಇದೀಗ ‘ಲವ್ ಮೊಕ್ಟೇಲ್’ ಸಿನಿಮಾಗಳಿಂದ ಒಬ್ಬ ಒಳ್ಳೆಯ ನಿರ್ದೇಶಕನಾಗಿಯೂ ಕನ್ನಡಿಗರ ಮನದಲ್ಲಿ ಉಳಿದುಕೊಂಡಿದ್ದಾರೆ. ಇಂದು(ಜೂನ್ 12) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಡಾರ್ಲಿಂಗ್ ಕೃಷ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. • ಲವ್ ಬರ್ಡ್ಸ್ಸದ್ಯ ‘ಲವ್ ಮೊಕ್ಟೇಲ್ 2’ ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿರುವ ಕೃಷ್ಣ ಹಾಗು ಮಿಲನ ಕೃಷ್ಣ ದಂಪತಿಗಳು ಮತ್ತೊಮ್ಮೆ ಜೋಡಿಯಾಗಿ ತೆರೆಮೇಲೆ ಬರಲು ಸಿದ್ದರಾಗುತ್ತಿದ್ದಾರೆ. ಪಿ […]

‘ಡಾನ್ ಜಯರಾಜ್’ ಅವರನ್ನ ಬಿಡುಗಡೆಗೊಳಿಸಲು ಹೊರಟ ಡಾಲಿ!!

ಡಾಲಿ ಧನಂಜಯ ಅವರು ಸದ್ಯ ಕನ್ನಡದಲ್ಲಿ ಅತ್ಯಂತ ಯಶಸ್ವಿ ಹಾಗು ಅತ್ಯಂತ ಬ್ಯುಸಿ ಆಗಿರುವ ನಟರುಗಳಲ್ಲಿ ಒಬ್ಬರು. ಸದ್ದಿಲ್ಲದೆ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಇವರು, ಬಿಡುಗಡೆಗೊಂಡ ತಮ್ಮ ಸಿನಿಮಾಗಳಲ್ಲಿ ಯಶಸ್ಸು ಕೂಡ ಕಾಣುತ್ತಿದ್ದಾರೆ. ಸದ್ಯ ಇವರ ಅಭಿನಯದ ಮತ್ತೊಂದು ಸಿನಿಮಾ ತೆರೆಮೇಲೆ ಬರಲು ಮುಹೂರ್ತ ಗೊತ್ತು ಮಾಡಿಕೊಂಡಿದೆ. ಬೆಂಗಳೂರು ಅಂಡರ್ ವರ್ಲ್ಡ್ ನ ಮೊದಲ ದೊರೆ ‘ಎಂ ಪಿ ಜಯರಾಜ್’ ಅವರ ಬಗೆಗೆ ಎಲ್ಲರು ತಿಳಿದಿರುವವರೇ. ಅವರ ಜೀವನಗಾಥೆ ಇದೀಗ ಸಿನಿಮಾವಾಗಿ ಮೂಡಿಬರುತ್ತಿದೆ. ಲೇಖಕ ಅಗ್ನಿ ಶ್ರೀಧರ್ […]

ರಾಕಿಂಗ್ ಸ್ಟಾರ್ ಗೆ ಪೂಜಾ ಹೆಗ್ಡೆ ನಾಯಕಿ??

ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಪ್ರಪಂಚದಾದ್ಯಂತ ಅಭಿಮಾನಿಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಎಲ್ಲೆಡೆ ‘ರಾಕಿ ಭಾಯ್’ ಎಂದೇ ಕರೆಸಿಕೊಳ್ಳುತ್ತಾ ಜನರ ಮನದಲ್ಲಿ ಅದೇ ಹೆಸರಿನಿಂದ ಅಚ್ಚಾಗಿ ಉಳಿದಿದ್ದಾರೆ. ಕೆಜಿಎಫ್ ಚಿತ್ರಗಳ ಯಶಸ್ಸಿನ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಅಧಿಕೃತವಾದ ಘೋಷಣೆ ಎಲ್ಲಿಯೂ ಹೊರಬೀಳದಿದ್ದರೂ, ಒಂದಷ್ಟು ನಿಜಕ್ಕೆ ಸನಿಹವಾದ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ಯಶ್ ತಮ್ಮ 19ನೇ ಸಿನಿಮಾಗಾಗಿ ಕನ್ನಡದ ‘ಮಫ್ತಿ’ ಸಿನಿಮಾ ಖ್ಯಾತಿಯ […]