ತಮ್ಮ ಮುಂದಿನ ಸಿನಿಮಾ ಘೋಷಿಸಿದ ‘ಹೊಂಬಾಳೆ ಫಿಲಂಸ್’

ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ಸದ್ಯ ಜಗದ್ವಿಖ್ಯಾತವಾಗಿದೆ. ವಿಜಯ್ ಕಿರಗಂದೂರ್ ಅವರ ಸಾರಥ್ಯದಲ್ಲಿ ಓಡುತ್ತಿರುವ ಈ ಸಂಸ್ಥೆ, ತನ್ನ ಸಿನಿಮಾಗಳಿಗೆ ದೇಶ-ವಿದೇಶಗಳಲ್ಲೂ ಪ್ರೇಕ್ಷಕರು ಕಾಯುವಂತೆ ಮಾಡಿದೆ. ‘ಕೆಜಿಎಫ್’ನ ಸರಣಿ ಸಿನಿಮಾಗಳನ್ನು ಅದ್ದೂರಿಯಾಗಿ ಪೂರ್ಣಗೊಳಿಸಿ, ಯಶಸ್ಸು ಕಂಡು ಎಲ್ಲರ ಮೆಚ್ಚುಗೆಗೆ ಭಾಜನರಾಗಿದ್ದಾರೆ. ಸದ್ಯ ‘ಹೊಂಬಾಳೆ’ ತಮ್ಮ ಮುಂದಿನ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ‘ಹೊಂಬಾಳೆ ಫಿಲಂಸ್’ ಇದೀಗ ಕನ್ನಡ ಮಾತ್ರವಲ್ಲದೆ ಬೇರೆಭಾಷೆಯ ಚಿತ್ರರಂಗಗಳಿಂದಲೂ ಪಾನ್-ಇಂಡಿಯನ್ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ […]
ಮುಗ್ದತೆ ಮತ್ತು ಮಾನವೀಯತೆಯ ಪ್ರತಿಬಿಂಬ 777 ಚಾರ್ಲಿ

777 ಚಾರ್ಲಿ ದೇಶದಾದ್ಯಂತ ಬಿಡುಗಡೆಯಾಗಿದ್ದು ಮನೆ ಮನೆಯಲ್ಲೂ ಈಗ ಚಾರ್ಲಿದೆ ಮಾತು, ಅವಳದ್ದೇ ಕಥೆ. ಭಾವನೆಗಳು ಬರಿ ಮನುಷ್ಯರಿಗಲ್ಲ ನಾಯಿಗೂ ಇರುತ್ತೆ ಅನ್ನೋದನ್ನ ಚಾರ್ಲಿ ತನ್ನ ನಟನೆಯಲ್ಲೇ ಸಾಭೀತುಪಡಿಸಿದ್ದಾಳೆ . ಒಂದು ನಾಯಿಯನ್ನು ಕಥಾ ಪಾತ್ರವಾಗಿ ಇಟ್ಕೊಂಡು ಈ ರೀತಿಯಲ್ಲೂ ಸಿನೆಮಾ ಮಾಡಬಹುದು ಅನ್ನೋದನ್ನ ಕಿರಣರಾಜ್ ತೋರಿಸಿದ್ದಾರಂದ್ರೆ ತಪ್ಪಾಗಲಿಕಿಲ್ಲ. ನಾಯಿ ಮತ್ತು ಮನುಷ್ಯನ ನಡುವಿನ ಭಾವನೆಗಳ ಪಯಣವನ್ನು ನಿರ್ದೇಶಕ ಕಿರಣರಾಜ್ ಅವರು ಅದ್ಭುತವಾಗಿ ಹೃದಯಕ್ಕೆ ನಾಟುವಂತೆ ತೋರಿಸಿದ್ದಾರೆ. ಈ ಜರ್ನಿ ಧರ್ಮ ಚಾರ್ಲಿದೇ ಆದ್ರೂ ಅವ್ರ ಪ್ರತಿ […]
ಚಾರ್ಲಿ ಕಂಡ ಹೊಸ ಬೆಳವಣಿಗೆಗಳು!! ಟ್ವಿಟರ್ ಇಮೋಜಿ, ಪೈರಸಿಯ ಹೋರಾಟ!!

ಕಿರಣ್ ರಾಜ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಹಾಗು ‘ಚಾರ್ಲಿ’ ಎಂಬ ನಾಯಿ ಮುಖ್ಯಪಾತ್ರದಲ್ಲಿ ನಟಿಸಿರುವ ‘777 ಚಾರ್ಲಿ’ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿರೋ ಈ ಸಿನಿಮಾ ಇದೀಗ ಎಲ್ಲ ಭಾಷೆಗಳಲ್ಲೂ ತನ್ನ ಪ್ರಚಾರದ ಕಾರ್ಯಗಳನ್ನು ಭರದಿಂದ ನಿರ್ವಹಿಸುತ್ತಿದೆ. ಈ ನಡುವೆ ‘777 ಚಾರ್ಲಿ’ ಸಿನಿಮಾ ಹಾಗು ಚಾರ್ಲಿ ನಾಯಿ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಚಿತ್ರತಂಡ ಪ್ರಚಾರದ ಅಂಗವಾಗಿ ಕನ್ನಡದ ಸೆಲೆಬ್ರಿಟಿಗಳಿಗೆ, ಪತ್ರಕರ್ತರಿಗೆ, ಶ್ವಾನಪ್ರೀಯರಿಗೆ ಮುಂತಾದವರಿಗೆ ಪ್ರೀಮಿಯರ್ ಶೋಗಳನ್ನು ಏರ್ಪಡಿಸಿತ್ತು. ಸಿನಿಮಾ ಕಂಡ […]
“777 ಚಾರ್ಲಿ ಸಿನಿಮಾ ಸುಲಭದ ಕೆಲಸವಾಗಿರಲಿಲ್ಲ”-ರಕ್ಷಿತ್ ಶೆಟ್ಟಿ

ಪ್ರಸ್ತುತ ಎಲ್ಲೆಡೆ ಸುದ್ದಿಯಲ್ಲಿರೋ ಸಿನಿಮಾ ಎಂದರೆ ‘777 ಚಾರ್ಲಿ’. ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಈ ಸಿನಿಮಾಗೆ ರಕ್ಷಿತ್ ಅವರೇ ನಿರ್ಮಾಪಕರು. ತಮ್ಮ ‘ಪರಮ್ ವಾಹ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿರುವ ರಕ್ಷಿತ್ ಸದ್ಯ ಪ್ರಚಾರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂದು(ಜೂನ್ 10) ಚಿತ್ರಮಂದಿರಗಳಿಗೆ ಅಧಿಕೃತವಾಗಿ ಲಗ್ಗೆಯಿಡುತ್ತಿರೋ ‘777 ಚಾರ್ಲಿ’ ಈಗಾಗಲೇ ಆಯೋಜಿಸಿದ್ದ ಪ್ರೀಮಿಯರ್ ಶೋಗಳಿಂದಲೇ ಎಲ್ಲೆಡೆ ಮೆಚ್ಚುಗೆಯ ಮಾತುಗಳನ್ನು ಪಡೆಯುತ್ತಿದೆ. ಇದೀಗ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಕ್ಷಿತ್ […]
ವಿಕ್ರಾಂತ್ ರೋಣ ಮೆಚ್ಚಿದ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?

ಕಿಚ್ಚ ಸುದೀಪ್ ನಟನೆಯ, ಅನೂಪ್ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣವು ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡುವುದರಲ್ಲಿ ಎರಡು ಮಾತಿಲ್ಲ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದ ಬಿಡುಗಡೆಗಾಗಿ ಸಿನಿ ಪ್ರಿಯರು ಅದರಲ್ಲೂ ಕಿಚ್ಚನ ಅಭಿಮಾನಿಗಳಂತೂ ತುದಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇನ್ನು ವಾರದ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರುವ ಚಂದನವನದ ಚೆಂದದ ನಟ ರಮೇಶ್ ಅರವಿಂದ್ ಅವರು ಇದೀಗ ವಿಕ್ರಾಂತ್ ರೋಣ ಸಿನಿಮಾದ ವಿಮರ್ಶೆ ಮಾಡಿದ್ದಾರೆ. ಮಾತ್ರವಲ್ಲ ವಿಕ್ರಾಂತ್ […]
ಕನ್ನಡಗರಿಗೆ ಧನ್ಯವಾದ ಹೇಳಿದ ಕಮಲ್ ಹಾಸನ್… ಯಾಕೆ ಗೊತ್ತಾ?

ಕಮಲ್ ಹಾಸನ್ ಇದೀಗ ಸಂಭ್ರಮದಲ್ಲಿದ್ದಾರೆ. ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ವಿಕ್ರಮ್ ಸಿನಿಮಾ ಕರ್ನಾಟಕದಲ್ಲಿಯೂ ಸಾಕಷ್ಟು ಗಳಿಕೆ ಮಾಡಿದ್ದು ಇದೀಗ ಕನ್ನಡಿಗರಿಗೆ ಧನ್ಯವಾದ ಹೇಳಿದ್ದಾರೆ.ಅದು ಕೂಡಾ ಕನ್ನಡದಲ್ಲಿ. ಹೌದು, ಕನ್ನಡದಲ್ಲಿ ವಿಡಿಯೋ ಮಾಡುವ ಮೂಲಕ ತಮ್ಮ ಸಿನಿಮಾ ಗೆಲ್ಲಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ ಕಮಲ್ ಹಾಸನ್.“ಕನ್ನಡ ಸಿನಿಮಾ ವೀಕ್ಷಕರು ಒಂದು ಉತ್ತಮ ಸಿನಿಮಾವನ್ನು ಯಾವಾಗಲೂ ಬೆಂಬಲಿಸುತ್ತಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಉತ್ತಮ ನಟರನ್ನು ಕೂಡಾ ಅವರು ಬೆಂಬಲಿಸುತ್ತಾರೆ. […]
ಒಟಿಟಿ ಕಡೆಗೆ ಹೊರಟ ‘ಅವತಾರ ಪುರುಷ’

‘ಸ್ಯಾಂಡಲ್ವುಡ್ ಅಧ್ಯಕ್ಷ’ ಶರಣ್ ಹಾಗು ತಮ್ಮದೇ ವಿಶೇಷ ಅಭಿಮಾನಿ ಬಳಗ ಹೊಂದಿರೋ ನಿರ್ದೇಶಕ ಸಿಂಪಲ್ ಸುನಿ ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ ‘ಅವತಾರ ಪುರುಷ’. ಬಿಡುಗಡೆಗೂ ಮುನ್ನವೇ ತನ್ನ ವಿಭಿನ್ನ ರೀತಿಯ ಹಾಡುಗಳು ಹಾಗು ಟ್ರೈಲರ್ ನಿಂದ ಜನಪ್ರಿಯವಾಗಿದ್ದ ಸಿನಿಮಾ ಮೇ 6ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿತ್ತು. ಸುನಿ ಅವರ ಹಾಸ್ಯದ ಎಳೆಯಲ್ಲೇ ವಾಮಾಚಾರದ ಬಗೆಗಿನ ಕಥೆ ಹೇಳಿದ್ದ ಸಿನಿಮಾ ಜನರ ಮುಖದಲ್ಲಿ ನಗು ತರಿಸುತ್ತ ಜನಮನ್ನಣೆ ಪಡೆದಿತ್ತು. ಚಿತ್ರಮಂದಿರಗಳಲ್ಲಿ ಭರ್ಜರಿ 25ದಿನಗಳನ್ನ ಪೂರೈಸಿದ ಸಿನಿಮಾ […]
ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೊಸ ‘ಹೋಪ್’ ಜೊತೆಗೆ ಬರುತ್ತಿದ್ದಾರೆ ಶ್ವೇತ ಶ್ರಿವಾಸ್ತವ.

ಕನ್ನಡ ಚಿತ್ರರಂಗದಲ್ಲಿ ತಾಯಿಯಾದ ನಂತರ ಮರಳಿ ನಾಯಕನಟಿಯಾಗಿ ನಟಿಸಿದ ನಟಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಈ ಸಾಲಿಗೆ ಸೇರುತ್ತಿರೋ ಈಗಿನ ನಟಿ ಎಂದರೆ ‘ಸಿಂಪಲ್ ಬೆಡಗಿ’ ಎಂದೇ ಖ್ಯಾತರಾಗಿರುವ ಶ್ವೇತ ಶ್ರಿವಾಸ್ತವ. ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾದಿಂದ ಜನಪ್ರಿಯರಾಗಿದ್ದ ಇವರು ತಾಯಿಯಾದ ಬಳಿಕ ನಟನೆಯಿಂದ ವಿರಾಮ ಪಡೆದಿದ್ದರು. ಇದೀಗ ಮರಳಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಇದೀಗ ಶ್ವೇತ ಅವರ ಹೊಸ ಸಿನಿಮಾ ತೆರೆಕಡೆಗೆ ಹೊರಟಿದೆ. […]
ಮಾಡೆಲ್ ನಿಂದ ನಟನೆಯವರೆಗೆ ಕೃಷ್ಣಾ ಪಯಣ
ಕಲಾವಿದರ ಕುಟುಂಬದ ಕುಡಿಯಾಗಿರುವ ಕೃಷ್ಣಾ ಭಟ್ ಇಂದು ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಟನೆಯ ಮೇಲೆ ಅವರಿಗಿರುವ ಒಲವು ಹಾಗೂ ಸತತ ಪರಿಶ್ರಮವೇ ಮುಖ್ಯ ಕಾರಣ. ಸವರ್ಣ ದೀರ್ಘ ಸಂಧಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪರಿಚಿತರಾದ ಕೃಷ್ಣಾ ಭಟ್ ಇತ್ತೀಚೆಗೆ ಬಿಡುಗಡೆಯಾಗಿರುವ ತೆಲುಗಿನ ಸರ್ಕಾರಿ ವಾರಿ ಪಾಟು ಸಿನಿಮಾದಲ್ಲಿ ಪೋಷಕ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಕೃಷ್ಣಾ ಭಟ್ ಪ್ರಾಯಶಃ ಎನ್ನುವ […]
ಮೂರು ನಿರೀಕ್ಷಿತ ಕನ್ನಡ ಸಿನಿಮಾಗಳು ಒಂದೇ ದಿನ ತೆರೆಗೆ!!

ಕನ್ನಡ ಚಿತ್ರರಂಗ ಪ್ರತೀ ವಾರಾಂತ್ಯಕ್ಕೂ ಸಾಲು ಸಾಲು ಸಿನಿಮಾಗಳನ್ನು ಬೆಳ್ಳಿತೆರೆಗೆ ಕಳಿಸುತ್ತಿದೆ. ಒಂದಷ್ಟು ಚಿತ್ರಗಳು ಭರ್ಜರಿ ಯಶಸ್ಸು ಕಂಡರೆ, ಇನ್ನು ಕೆಲವು ಚಿತ್ರಗಳು ಬಿಡುಗಡೆಯಾದದ್ದೇ ಯಾರಿಗೂ ತಿಳಿಯದೇ ಹೋಗುತ್ತದೆ. ಹೀಗಿರುವಾಗ ಮೂರೂ ಬಹುನಿರೀಕ್ಷಿತ ಹಾಗು ಸುದ್ದಿಯಲ್ಲಿರುವ ಸಿನಿಮಾಗಳು ಒಂದೇ ದಿನ ಬಿಡುಗಡೆಯಗುವುದೆಂದರೆ!! ಹೌದು ಈಗ ಅದೇ ಆಗುತ್ತಿದೆ. ಇದೇ ಬರುವ ಜುಲೈ 1ರಂದು ಎಲ್ಲೆಡೆ ಪರಿಚಿತವಾಗಿರುವ ಹಾಗು ತನ್ನದೇ ಆದ ನಿರೀಕ್ಷಕರನ್ನು ಹೊಂದಿರುವ ಮೂರು ಸಿನಿಮಾಗಳು ಬಿಡುಗಡೆಯಗುತ್ತಿವೆ. ಅದರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಸಿನಿಮಾ […]

