ಎಕ್ಸ್ ಕ್ಯೂಸ್ ಮೀ.. ಸುದೀರ್ಘ ಗ್ಯಾಪ್ ನಂತರ ಮರಳುತ್ತಿದ್ದಾರೆ ಸುನೀಲ್ ರಾವ್

ಬಾಲ ಕಲಾವಿದ ಆಗಿ ಮೋಡಿ ಮಾಡಿದ್ದ ಸುನೀಲ್ ರಾವ್ ಅವರಿಗೆ ಬ್ರೇಕ್ ನೀಡಿದ್ದು ಎಕ್ಸ್ ಕ್ಯೂಸ್ ಮಿ ಸಿನಿಮಾ. ಮುಂದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಸುನೀಲ್ ರಾವ್ ಮತ್ತೆ ನಟನೆಯ ಮೂಲಕ ಸದ್ದು ಮಾಡುತ್ತಿದ್ದಾರೆ. ಬರೋಬ್ಬರಿ 12 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಸುನೀಲ್ ರಾವ್ ತುರ್ತು ನಿರ್ಗಮನ ಸಿನಿಮಾದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ. ಹೇಮಂತ್ ಕುಮಾರ್ ನಿರ್ದೇಶನದ ವಿಭಿನ್ನ ಕಥಾಹಂದರವನ್ನೊಳಗೊಂಡ ತುರ್ತು ನಿರ್ಗಮನ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರು ಅದನ್ನು ಮೆಚ್ಚಿಕೊಂಡಿದ್ದರು. ಇನ್ನು […]
ಬಾಲಿವುಡ್ ನಲ್ಲಿ ಸದ್ದು ಮಾಡಲಿದೆಯಾ ಹೊಂಬಾಳೆ ಫಿಲಂಸ್

ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತಾಗಿದೆ. ರಿಲೀಸ್ ಆಗಿ ಒಂದು ವರ್ಷ ಕಳೆದರೂ ಸಿನಿಮಾದ ಕ್ರೇಜ್ ಇನ್ನೂ ಹೋಗಿಲ್ಲ. ಈ ಸಿನಿಮಾದ ಯಶಸ್ಸಿಗೆ ಕಾರಣ ಏನೇ ಇರಬಹುದು ಅಥವಾ ಯಾರೇ ಇರಬಹುದು. ಆದರೆ ಇದೆಲ್ಲ ಸಾಧ್ಯವಾಗಿದ್ದು ಹೊಂಬಾಳೆ ಫಿಲ್ಮ್ಸ್ ಮೂಲಕ. ಪರಭಾಷೆಗಳಲ್ಲಿಯೂ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಹೊಂಬಾಳೆ ಈಗ ಬಾಲಿವುಡ್ ಗೂ ಕಾಲಿಡುತ್ತಿದೆ. ಅಲ್ಲಿಯೂ ಚಿತ್ರ ನಿರ್ಮಾಣ ರೆಡಿಯಾಗಿದೆ. ಬಾಲಿವುಡ್ ನ ಸ್ಟಾರ್ ನಟನ ಜೊತೆ ಮಾತುಕತೆ ನಡೆಸಿದೆ. ಹೀಗಂತ […]
ಹಳ್ಳಿ ಹುಡುಗನಾಗಿ ರಂಜಿಸಲಿದ್ದಾರೆ ಪೃಥ್ವಿ ಅಂಬರ್

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 1980ನೇ ಇಸವಿಯಲ್ಲಿ ನಡೆದ ಕಥೆಯನ್ನು ಆಧರಿಸಿದ ದೂರದರ್ಶನ ಸಿನಿಮಾದಲ್ಲಿ ಹಳ್ಳಿಯ ಸಾಧಾರಣ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸುಕೇಶ್ ಶೆಟ್ಟಿ ಈ ಹಿಂದೆ ಟ್ರಂಕ್ ಸಿನಿಮಾದಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. “ನನಗೆ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳ ಆಫರ್ ಬರುತ್ತಿವೆ. ಈ ಸಿನಿಮಾದ ಕಥೆ ನನಗೆ […]
ಮೆಂಟಲಿ ಚಾಲೆಂಜ್ಡ್ ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಜಯ್ ಡಿಸೋಜಾ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆಕಾಶದೀಪ ಧಾರಾವಾಹಿಯಲ್ಲಿ ನಾಯಕ ಆಕಾಶ್ ಆಗಿ ಅಭಿನಯಿಸಿದ್ದ ಜಯ್ ಡಿಸೋಜಾ ಮತ್ತೆ ಮರಳಿ ಬಂದಿದ್ದಾರೆ. ಆಕಾಶದೀಪ ಧಾರಾವಾಹಿಯ ನಂತರ ಎಲ್ಲೂ ಕಾಣಿಸಿಕೊಳ್ಳದ ಜಯ್ ಡಿಸೋಜಾ ಇದೀಗ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಕನ್ನಡ ಧಾರಾವಾಹಿಯಲ್ಲಿ ಅಲ್ಲ, ಬದಲಿಗೆ ತಮಿಳು ಧಾರಾವಾಹಿಯಲ್ಲಿ. ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಮಿಂಚಿರುವ ಜಯ್ ಡಿಸೋಜಾ ಇದೀಗ ತಮಿಳು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳಿನ ಸಿಪಿಕ್ಕುಲ್ ಮುತ್ತು ಧಾರಾವಾಹಿಯಲ್ಲಿ ಜಯ್ ನಾಯಕರಾಗಿ ಮೋಡಿ ಮಾಡಿದ್ದಾರೆ. […]
ಹೊಸ ಹವಾ ಸೃಷ್ಟಿ ಮಾಡಲಿದೆ ಚಾರ್ಲಿ 777 ಸಿನಿಮಾದ ಇಮೋಜಿ

ಇಮೋಜಿ.. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೇಳಿ ಬರುತ್ತಿರುವ ಸರ್ವೇ ಸಾಮಾನ್ಯ ಪದ ಇದು. ಬಹುತೇಕ ಜನರಿಗೆ ಇಮೋಜಿ ಎಂದರೆ ಏನು ಎಂದು ತಿಳಿದಿಲ್ಲ. ಇ ಎಂದರೆ ಅಕ್ಷರ ಮೋಜಿ ಎಂದರೆ ಚಿತ್ರ. ಅಕ್ಷರಗಳು ಚಿತ್ರರೂಪದಲ್ಲಿ ನಮಗೆ ಕಂಡಾಗ ಅದನ್ನು ಇಮೋಜಿ ಎಂದು ಕರೆಯುತ್ತೇವೆ. ಅಂದ ಹಾಗೇ ಈಗ್ಯಾಕೆ ಇಮೋಜಿ ಪದವನ್ನು ಬಳಸುತ್ತಿದ್ದೇವೆ ಎಂದು ಅಂದುಕೊಳ್ಳುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಉಂಟು ಮಾಡಿದ ಹವಾ ಅಷ್ಟಿಷ್ಟಲ್ಲ. ಇದರ ಜೊತೆಗೆ ರಾಕಿ ಭಾಯ್ […]
ಪರಮ್ ವಾಹ್ ಸ್ಟುಡಿಯೋಸ್ ಸೇರಲಿದ್ದಾರೆ ‘ನಮ್ಮನೆ ಯುವರಾಣಿ’.

‘ನಮ್ಮನೆ ಯುವರಾಣಿ’ ಧಾರವಾಹಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿ ಅದು. ಆರಂಭದಿಂದ ಇಲ್ಲಿಯವರೆಗೂ ಹಲವಾರು ಅಭಿಮಾನಿಗಳನ್ನು ಈ ಧಾರಾವಾಹಿ ಪಡೆದಿದೆ. ಇದರಲ್ಲಿನ ನಟರು ಸಹ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ನಾಯಕಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಅಮರ್ ಅವರು ಕನ್ನಡ ಕಿರುತೆರೆಯ ಅಚ್ಚುಮೆಚ್ಚು. ಸದ್ಯ ಅವರು ಹಿರಿತೆರೆಯಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುವತ್ತ ಸಾಗುತ್ತಿದ್ದಾರೆ. ಕನ್ನಡಿಗರ ಕಣ್ಮಣಿಯಾಗಿರುವ ಅಂಕಿತಾ, ಸದ್ಯ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಸಂಸ್ಥೆಯಾದ ‘ಪರಮ್ […]
ಕೆಜಿಎಫ್ ನಲ್ಲಿ ‘ಅಂಧ’, ಈಗ ಹೊಸ ಚಿತ್ರದ ನಾಯಕ!

‘ಕೆಜಿಎಫ್’ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿವೆ. ಇವುಗಳಲ್ಲಿ ಕೆಲಸ ಮಾಡಿದವರು ಕೂಡ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ದೇಶದಾದ್ಯಂತ ಬೇಡಿಕೆಯಲ್ಲಿದ್ದಾರೆ. ನಾಯಕ ಯಶ್ ಅವರ ಮುಂದಿನ ಚಿತ್ರಕ್ಕೆ ಪ್ರಪಂಚದಾದ್ಯಂತದ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ರೀತಿ ಸಿನಿಮಾದ ಸಹಕಲಾವಿದರೊಬ್ಬರು ಹೊಸ ಚಿತ್ರದ ನಾಯಕರಾಗಲಿದ್ದಾರೆ. ಅದ್ಯಾರೆಂದು ತಿಳಿದರೆ ಅಚ್ಚರಿಯಾಗುವುದಂತೂ ಖಂಡಿತ. ಈ ಕಲಾವಿದರು ಬೇರಾರು ಅಲ್ಲದೇ, ಕೆಜಿಎಫ್ ನಲ್ಲಿನ ಅಂಧನ ಪಾತ್ರವಹಿಸಿದ್ದ ಕೃಷ್ಣ ಜಿ ರಾವ್. ಕೇವಲ ಕೆಲವು ಕ್ಷಣಗಳಿಗಷ್ಟೇ ಸೀಮಿತವಾಗಿದ್ದ ಕುರುಡನ ಪಾತ್ರ ಇವರದ್ದಾಗಿದ್ದರೂ, ಕೆಜಿಎಫ್ ಚಿತ್ರದಲ್ಲಿ ಇವರು […]
ತೆಲುಗು ಕಿರುತೆರೆಗೆ ಕಾಲಿಟ್ಟ ಕನ್ನಡದ ಹ್ಯಾಂಡ್ ಸಮ್ ನಟ ಇವರೇ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕ ಮಿಥುನ್ ಆಗಿ ಅಭಿನಯಿಸಿದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಸ್ವಾಮಿನಾಥನ್ ಅನಂತರಾಮನ್. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸ್ವಾಮಿನಾಥನ್ ಗೂ ಮೊದಲಿನಿಂದಲೂ ನಟನಾಗಬೇಕು ಎಂಬ ಹಂಬಲ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಯಕೆ. ಅದೇ ಕಾರಣದಿಂದ ದೊರೆತ ಕೆಲಸಕ್ಕೆ ವಿದಾಯ ಹೇಳಿ ನಟನೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಈತ ಹೆಣ್ ಮಕ್ಕಳ ಪಾಲಿನ ಚಾಕಲೇಟ್ ಹೀರೋ. ಪದವಿ ಓದುವ ಸಮಯದಲ್ಲಿಯೇ ಟೆಲಿಫಿಲಂಗಳಲ್ಲಿ […]
ಹೇಗಿರಲಿದೆ ಅಪ್ಪು ನಿರ್ಮಾಣದ ಮುಂದಿನ ಸಿನಿಮಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿದ್ದರೂ ಸಹ, ಅವರು ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆಗಳು ನಮ್ಮನ್ನೆಂದಿಗೂ ಅಗಲುವುದಿಲ್ಲ. ಅದರಲ್ಲಿ ಒಂದು ಅವರ ನಿರ್ಮಾಣ ಸಂಸ್ಥೆಯಾದ ‘ಪಿ ಆರ್ ಕೆ ಪ್ರೊಡಕ್ಷನ್ಸ್’. ಈಗಾಗಲೇ ಹಲವಾರು ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಈ ಸಂಸ್ಥೆ, ಸದ್ಯ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನೇತೃತ್ವದಲ್ಲಿ ಮುಂದುವರಿಯುತ್ತಿದೆ. ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮುಂದಿನ ಚಿತ್ರ ‘ಆಚಾರ್ ಅಂಡ್ ಕೋ’. ‘ಪಿ ಆರ್ ಕೆ’ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರೋ ಹತ್ತನೇ […]
ಬಿಡುಗಡೆಗೆ ಸನಿಹವಾಗುತ್ತಿದ್ದಂತೆ ಹೆಸರು ಬದಲಿಸಿಕೊಂಡ ‘ಪೃಥ್ವಿರಾಜ್’

ಅಕ್ಷಯ್ ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಪೃಥ್ವಿರಾಜ್’. ಮುಘಲರ ವಿರುದ್ಧ ವೀರವೇಶದಿಂದ ಹೋರಾಡಿ, ಭಾರತೀಯರು ಹೆಮ್ಮೆಯಿಂದ ತನ್ನ ಹೆಸರನ್ನು ನೆನಪಿಸಿಕೊಳ್ಳುವಂತೆ ಮಾಡಿದ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗುತ್ತಿದೆ. ಇದೇ ಜೂನ್ 3ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಸದ್ಯ ತನ್ನ ಶೀರ್ಷಿಕೆಯ ಕಾರಣದಿಂದ ಸುದ್ದಿಯಲ್ಲಿದೆ. ಹಿಂದಿ ಚಿತ್ರರಂಗದಲ್ಲಿ ಸುಮಾರು 50 ವರ್ಷಗಳಿಂದ ಸಿನಿಮಾಗಳನ್ನು ಮಾಡುತ್ತಾ, ಹಲವರು ಅದ್ಭುತ ಚಿತ್ರಗಳನ್ನು ನೀಡಿರೋ ಸಿನಿ ನಿರ್ಮಾಣ ಸಂಸ್ಥೆ, ‘ಯಶ್ ರಾಜ್ […]

