ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಬ್ಯೂಟಿಫುಲ್ ಮನಸಿನ ಬೆಡಗಿ

ಲೂಸಿಯಾ ಸಿನಿಮಾದ ಶ್ವೇತಾ ಆಗಿ ಚಂದನವನಕ್ಕೆ ಕಾಲಿಟ್ಟ ಶ್ರುತಿ ಹರಿಹರನ್ ಮನೋಜ್ಞ ನಟನೆಯ ಮೂಲಕ ಮನೆ ಮಾತಾದಾಕೆ. ಮಲಯಾಳಂ ಸಿನಿಮಾ “ಸಿನಿಮಾ ಕಂಪೆನಿ” ಯಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಬ್ಯೂಟಿಫುಲ್ ಮನಸ್ಸಿನ ಹುಡುಗಿ ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಕನ್ನಡದ ಜೊತೆಗೆ ತಮಿಳು, ಮಲಯಾಳಂ ಸಿನಿ ರಂಗದಲ್ಲಿ ನಟನಾ ಛಾಪನ್ನು ಪಸರಿಸಿರುವ ಶ್ರುತಿ ಹರಿಹರನ್ ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರವಾದರೂ, ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಗೆದ್ದರು. ಸ್ಟಾರ್ ನಟರುಗಳ […]
ಲವರ್ ಬಾಯ್ ಆಗಿ ತೆರೆ ಮೇಲೆ ಬರಲಿದ್ದಾರೆ ಕಿರುತೆರೆಯ ರಣಧೀರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ಗಿಣಿರಾಮ ಧಾರಾವಾಹಿಯಲ್ಲಿ ಖಳನಾಯಕ ರಣಧೀರ ಆಗಿ ಅಭಿನಯಿಸುತ್ತಿರುವ ರಾಮ್ ಪವನ್ ಶೇಟ್ ಅವರು ಇದೀಗ ಲವರ್ ಬಾಯ್ ಆಗಿ ರಂಜಿಸಲು ತಯಾರಾಗಿದ್ದಾರೆ. ಇಷ್ಟು ದಿನಗಳ ಕಾಲ ಖಡಕ್ ವಿಲನ್ ಆಗಿ ತೆರೆ ಮೇಲೆ ಅಬ್ಬರಿಸುತ್ತಿದ್ದ ರಾಮ್ ಪವನ್ ಶೇಟ್ ಇದೇ ಮೊದಲ ಬಾರಿಗೆ ಲವರ್ ಬಾಯ್ ಆಗಿ ವೀಕ್ಷಕರ ಮುಂದೆ ಬರಲಿದ್ದಾರೆ. ಅಂದ ಹಾಗೇ ರಾಮ್ ಪವನ್ ಶೇಟ್ ಲವರ್ ಬಾಯ್ ಆಗಿ ನಟಿಸುತ್ತಿರುವುದು ಕಿರುತೆರೆಯಲ್ಲಿ ಅಲ್ಲ, […]
ಡಿ ಗ್ಲಾಮರಸ್ ಅವತಾರದಲ್ಲಿ ಬರಲಿದ್ದಾರೆ ಆಯನ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಆಯನ ಇದೀಗ ಮಗದೊಂದು ಕಮರ್ಷಿಯಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಪೃಥ್ವಿ ಅಂಬರ್ ನಾಯಕ ನಟರಾಗಿ ನಟಿಸಲಿರುವ 80ರ ಕಾಲಘಟ್ಟದ ಕಥೆಯನ್ನೊಳಗೊಂಡ ದೂರದರ್ಶನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಆಯನ. ದೂರದರ್ಶನ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಆಯನ ” ನಾನು ಈ ಸಿನಿಮಾದಲ್ಲಿ ಡಿ ಗ್ಲಾಮರಸ್ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ಹಳ್ಳಿಯ ವಿದ್ಯಾವಂತ ಹುಡುಗಿ ಮೈತ್ರಿಯಾಗಿ ನಾನು ಕಾಣಿಸಿಕೊಳ್ಳಲಿದ್ದೇನೆ. ಟೈಲರಿಂಗ್ ಕಲಿಯುತ್ತಿರುತ್ತೇನೆ” ಎಂದು ಹೇಳುತ್ತಾರೆ. “ಮೊದಲ ಬಾರಿಗೆ ಹಳ್ಳಿಗೆ […]
ಅಭಿಮಾನಿಗಳಿಗೆ ವಿಭಿನ್ನ ಖುಷಿ ನೀಡಿದ ಕಿಚ್ಚ ಸುದೀಪ್

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಸಿನಿಮಾ ಕಲಾವಿದರು ರೀಲ್ಸ್ ಮಾಡುವುದು ಹಳೆಯ ವಿಷಯ. ನಟಿಮಣಿಯರಂತೂ ಹೇಳುವುದು ಬೇಡ, ಆಗಾಗ ತಮ್ಮ ನೆಚ್ಚಿನ ಹಾಡಿಗೋ, ಡೈಲಾಗ್ ಗೋ ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ನಟರ ವಿಷಯಕ್ಕೆ ಬಂದರೆ ಅವರು ಇದರಲ್ಲಿ ಕಾಣಿಸಿಕೊಳ್ಳವುದು ಕಡಿಮೆಯೇ ಅರ್ಥಾತ್ ಬಹಳ ಅಪರೂಪ. ಇದೀಗ ನಿಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರು ರೀಲ್ಸ್ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸುದೀಪ್ ರೀಲ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ಸಕತ್ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ […]
ತೃಪ್ತಿ ನೀಡುವ ಪಾತ್ರದಲ್ಲಷ್ಟೇ ನಟಿಸುತ್ತೇನೆ – ಅನುಷಾ ರೈ

ಅನುಷ ರೈ ಸ್ಯಾಂಡಲ್ ವುಡ್ ನ ಲೇಟೆಸ್ಟ್ ನಾಯಕಿ. ಈಗ ನೆರೆಯ ತೆಲುಗು ಚಿತ್ರರಂಗದ ಪ್ರವೇಶ ಮಾಡುತ್ತಿದ್ದಾರೆ. ಸಾಯಿ ಸುನಿಲ್ ನಿಮ್ಮಲ ನಿರ್ದೇಶನದ ನೆಲ್ಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜೂನ್ ನಲ್ಲಿ ಆರಂಭವಾಗಲಿದೆ. ತನ್ನ ಹೊಸ ಪಯಣದ ಕುರಿತು ಕಾತರರಾಗಿರುವ ಅನುಷಾ ಮಾತನಾಡಿದ್ದಾರೆ. ” ಒಬ್ಬ ನಟಿಯಾಗಿ ಯಾವುದೇ ಇಂಡಸ್ಟ್ರಿಯಲ್ಲಿಯೂ ನಟಿಸಲು ಮುಕ್ತವಾಗಿದ್ದೇನೆ. ನಾನು ನಟಿಸುವ ಪಾತ್ರ ಮೊದಲು ನನಗೆ ತೃಪ್ತಿ ನೀಡಬೇಕು. ನಂತರ ಅದು ಪ್ರೇಕ್ಷಕರನ್ನು ತಲುಪುತ್ತದೆ. ನೆಲ್ಸನ್ ಸಿನಿಮಾದಲ್ಲಿ ಸಸ್ಪೆನ್ಸ್ […]
ಹತ್ತು ವರ್ಷದ ಬಳಿಕ ಸದ್ದು ಮಾಡುತ್ತಿರುವ ಲಕ್ಕಿ

ರಾಕಿಂಗ್ ಸ್ಟಾರ್ ಬಿರುದಾಕಿಂತ ಕನ್ನಡ ಸಿನಿಮಾರಂಗ ಹ್ಯಾಂಡ್ ಸಮ್ ನಟ ಯಶ್ ಅಭಿನಯದ ಲಕ್ಕಿ ಸಿನಿಮಾ ನೆನಪಿಲ್ಲದವರಾರು ಹೇಳಿ? ಸ್ಟೈಲಿಶ್ ಲುಕ್ ಮೂಲಕ ಲಕ್ಕಿಯಾಗಿ ಸಿನಿಪ್ರಿಯರ ಮನ ಗೆದ್ದ ಯಶ್ ಹೆಣ್ ಮಕ್ಕಳ ಮನ ಕದ್ದದ್ದು ಕೂಡಾ ಲಕ್ಕಿಯಾಗಿ! ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ, ಡಾ.ಸೂರಿ ನಿರ್ದೇಶನದ ಲಕ್ಕಿ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಹತ್ತು ವರ್ಷಗಳೇ ಕಳೆದಿದೆ. ಮೋಹಕ ತಾರೆ ರಮ್ಯಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೋಡಿಯ ಮೊದಲ ಸಿನಿಮಾ ಇದಾಗಿದ್ದು ನವಿರಾದ ಪ್ರೇಮಕತೆಯು […]
ದೃಷ್ಟಿ ವಿಕಲಚೇತನ ವೇಶ್ಯೆಯ ಪಾತ್ರದಲ್ಲಿ ಮಯೂರಿ ಕ್ಯಾತರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಆಗೊ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಯೂರಿ ಕ್ಯಾತರಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು. ಕೃಷ್ಣಲೀಲಾ ಸಿನಿಮಾದಲ್ಲಿ ಲೀಲಾ ಆಗಿ ನಟಿಸುವ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಹಾರಿದ ಮಯೂರಿ ಅಲ್ಲಿಯೂ ಸೈ ಎನಿಸಿಕೊಂಡ ಬೆಡಗಿ. ಮುಂದೆ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯ 2, 8MM ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಮಯೂರಿ ಮದುವೆ, […]
ಹರ್ಷಿಕಾ ಪೂಣಚ್ಚಗೆ ಅಭಿನಂದನೆ ಸಲ್ಲಿಸಿದ ಜೂಹಿ ಚಾವ್ಲಾ… ಯಾಕೆ ಗೊತ್ತಾ?

ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಸಿನಿಮಾಗಳ ಪೈಕಿ ಪ್ರೇಮಲೋಕವೂ ಒಂದು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಜೋಡಿಯಾಗಿ ಅಭಿನಯಿಸಿದ್ದ ಪ್ರೇಮಲೋಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿದ್ದು ಇದೀಗ ಇತಿಹಾಸ. ಸಿನಿಮಾ ಒಂದು ರೀತಿಯಲ್ಲಿ ಹಿಟ್ ಆದರೆ ಅದರ ಹಾಡುಗಳಂತೂ ಎವರ್ ಗ್ರೀನ್. ಈಗಲೂ ಪ್ರೇಮಲೋಕದ ಹಾಡುಗಳನ್ನು ಸಂಗೀತ ಪ್ರಿಯರು ಗುನುಗುನಿಸದೇ ಇರುವುದಿಲ್ಲ. ಅಷ್ಟರ ಮಟ್ಟಿಗೆ ಆ ಸಿನಿಮಾ, ಅದರ ಹಾಡುಗಳು ಜನಪ್ರಿಯತೆ ಪಡೆದಿತ್ತು. ಅಂದ ಹಾಗೇ […]
‘ಕೆಜಿಎಫ್ ಚಾಪ್ಟರ್ 3’ಯಲ್ಲಿ ರಾಣ, ಹೃತಿಕ್ ರೋಷನ್!!!

‘ಕೆಜಿಎಫ್ ಚಾಪ್ಟರ್ 2’ ಸದ್ಯ ಪ್ರಪಂಚದ ಹಲವೆಡೆ ಚಿತ್ರಮಂದಿರಗಳನ್ನು ಆಳುತ್ತಿದೆ. ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತ, ಯಶಸ್ವಿಯಾಗಿ 50ನೇ ದಿನದ ಕಡೆಗೆ ಹೊರಟಿದೆ. ಚಾಪ್ಟರ್ 2 ನಂತರ ಚಾಪ್ಟರ್ 3 ಬರಲಿದೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿ ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿತ್ತು. ಈ ಮೂರನೇ ಅಧ್ಯಾಯದ ಬಗೆಗಿನ ಉತ್ಸಾಹ ಎಲ್ಲಿವರೆಗಿತ್ತೆಂದರೆ, ಅಭಿಮಾನಿಗಳು ಹೊಸ ಹೊಸ ಪೋಸ್ಟರ್, ಟೀಸರ್ ಹಾಗು ಟ್ರೈಲರ್ ಗಳನ್ನೂ ತಾವೇ ಎಡಿಟ್ ಮಾಡಿ ಬಿಡುಗಡೆಗೊಳಿಸುವಷ್ಟು. ಈ ಬಗೆಯ ‘ಫ್ಯಾನ್-ಮೇಡ್’ ವಿಡಿಯೋಗಳು ಸದ್ಯ ಯೂಟ್ಯೂಬ್ ನಲ್ಲಿ […]
ಹೇಗಿರಲಿದೆ ಶಿವಣ್ಣ-ಭಟ್ಟರ ಮುಂದಿನ ಸಿನಿಮಾ??

‘ವಿಕಟಕವಿ’ ಯೋಗರಾಜ್ ಭಟ್ ಅವರು ಕನ್ನಡದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಸುಮಾರು ಎರಡು ದಶಕಗಳಿಂದ ಕನ್ನಡಿಗರನ್ನ ರಂಜಿಸುತ್ತಾ ಬಂದಿರೋ ಭಟ್ರು, ಅಂದಿನಿಂದ ಇಂದಿನವರೆಗೂ ತಮ್ಮದೇ ವಿಶೇಷ ಶೈಲಿಯನ್ನೂ, ವಿಶೇಷ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮಾತಿನಲ್ಲೇ ಮನೆ ಕಟ್ಟಿ, ಮಾತಿನಲ್ಲೇ ಪ್ರೀತಿ ಕಟ್ಟಿ, ಅದೇ ಮಾತಿನಲ್ಲೇ ಅತಿಸೂಕ್ಷ್ಮ ವಿಷಯಗಳನ್ನು ಹೇಳುವಂತಹ ಭಟ್ಟರ ಸಿನಿಮಾಗಳು ಮನಸ್ಸಿಗೆ ಮುದ ನೀಡುವಂತದ್ದು.ಇದೀಗ ಯೋಗರಾಜ್ ಭಟ್ ಅವರು ತಮ್ಮ ಶೈಲಿಗೂ ಭಿನ್ನವಾದ ಹೊಸ ಚಿತ್ರವೊಂದನ್ನು ಆರಂಭಿಸಲಿದ್ದಾರೆ. ಈ ಹೊಸ ಚಿತ್ರ ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆ […]

