‘ಡಿ ಬಾಸ್’ಗಿನ್ನು ‘ಕದನ ವಿರಾಮ’!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದಲ್ಲಿ ಅತಿದೊಡ್ಡ ಅಭಿಮಾನಿ ಬಳಗದ ಒಡೆಯ. ಮಾಸ್ ಗು ಕ್ಲಾಸ್ ಗು ಬಾಸ್ ಎನಿಸಿಕೊಂಡು ಅಭಿಮಾನಿಗಳ ಎದೆಯಲ್ಲಿ ‘ಡಿ ಬಾಸ್’ ಎಂದೇ ಉಳಿದುಕೊಂಡಿರುವ ದರ್ಶನ ಅವರ ಅಭಿಮಾನಿಗಳ, ಅಭಿಮಾನದ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆಯಿಲ್ಲ. ಸದ್ಯ ‘ಡಿ ಬಾಸ್’ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸ ಸಿನಿಮಾವೊಂದು ಘೋಷಿತವಾಗೋ ಸುದ್ದಿ ಕೇಳಿಬರುತ್ತಿದೆ. ಈ ಸುದ್ದಿ ಸತ್ಯವಾಗಿದ್ದೇ ಆದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿವುದಂತೂ ಖಂಡಿತ. ಸದ್ಯ ದರ್ಶನ್ ಅವರು ‘ಕ್ರಾಂತಿ’ ಸಿನಿಮಾದ […]
ಪ್ರಶಾಂತ್ ನೀಲ್ ಅವರ ಸಿನಿಮಾ ಪ್ರಪಂಚ!!

ಪ್ರಶಾಂತ್ ನೀಲ್ ಸದ್ಯ ಭಾರತದ ಅತಿ ದೊಡ್ಡ ಸ್ಟಾರ್ ನಿರ್ದೇಶಕ ಎಂದರೆ ತಪ್ಪಾಗದು. ‘ಉಗ್ರಂ’ನಿಂದ ಆರಂಭಿಸಿ, ಇದೀಗ ಕೆಜಿಎಫ್ ಸರಣಿಯಿಂದ ಕನ್ನಡ, ಕರ್ನಾಟಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಎಲ್ಲ ಸಿನಿಪ್ರೇಕ್ಷಕರ ಅಭಿಮಾನ ಗಳಿಸಿದ್ದಾರೆ. ಇವರ ಮುಂದಿನ ಚಿತ್ರಗಳು ಯಾವುದು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಈ ಚಿತ್ರಗಳ ಬಗೆಗೆ ಹೊಸದೇ ಕುತೂಹಲಗಳು ಕೆರಳುವಂತೆ ಮಾಡುತ್ತಿದ್ದಾರೆ ಪ್ರಶಾಂತ್. ಕೆಜಿಎಫ್ ಒಂದು ಸರಣಿ ಚಿತ್ರ. ಎರಡು ಅಧ್ಯಾಯಗಳಲ್ಲಿ, ಎರಡು ಭಾಗಗಳಾಗಿ ಬಿಡುಗಡೆಗೊಂಡು ಎಲ್ಲರ ಮನಸೆಳೆದಿದೆ. ನೀಲ್ ಸದ್ಯ ಪ್ರಭಾಸ್ ಅವರೊಂದಿಗೆ ತಮ್ಮ ಮುಂದಿನ […]
ವೈಲ್ಡ್ ಲೈಫ್ ಫೋಟೋಗ್ರಾಫರ್ ಆದ ರೀಷ್ಮಾ ನಾಣಯ್ಯ

ಪ್ರೀತಂ ಗುಬ್ಬಿ ನಿರ್ದೇಶನದ ಹೊಸ ಸಿನಿಮಾ ಬಾನದಾರಿಯಲಿ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿರುವ ವಿಚಾರ ಸಿನಿ ಪ್ರಿಯರಿಗೆ ತಿಳಿದೇ ಇದೆ. ಇದೀಗ ಚಿತ್ರ ತಂಡ ರೀಷ್ಮಾ ನಾಣಯ್ಯ ಅವರ ಫಸ್ಟ್ ಲುಕ್ ನ್ನು ರಿಲೀಸ್ ಮಾಡಿದೆ. ರೀಷ್ಮಾ ಈ ಸಿನಿಮಾದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತನ್ನ ಮೂರನೇ ಸಿನಿಮಾ ಕುರಿತು ಮಾತನಾಡಿರುವ ರೀಷ್ಮಾ “ವೈಲ್ಡ್ ಲೈಫ್ ಫೋಟೋಗ್ರಫರ್ ಕಾದಂಬರಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸದಾ ನಗುನಗುತ್ತಾ ಧನಾತ್ಮಕ ಚಿಂತನೆಯ ಹುಡುಗಿಯಾಗಿರುತ್ತಾಳೆ. ನಾನು ಫೋಟೋಗ್ರಫಿ ಕೋರ್ಸ್ ಮಾಡಿರುವುದರಿಂದ […]
“ರಾ ರಾ ರಕ್ಕಮ್ಮ” ಎನ್ನಲಿದ್ದಾರೆ ‘ವಿಕ್ರಾಂತ್ ರೋಣ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ದಿನಕ್ಕೊಂದು ದೊಡ್ಡ ದೊಡ್ಡ ಸುದ್ದಿಗಳಿಂದ ಜನರನ್ನ ಸೆಳೆಯುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಒಂದೊಂದೇ ಹೊಸ ಹೊಸ ಅಪ್ಡೇಟ್ ಗಳ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಇದೀಗ ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆಗೊಳಿಸಲು ಹೊರಟಿದ್ದಾರೆ. ಅನೂಪ್ ಎಸ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ, ನಿರೂಪ್ ಭಂಡಾರಿ, ನೀತ ಅಶೋಕ್, ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಇವರೆಲ್ಲರ ಜೊತೆಗೆ ಬಾಲಿವುಡ್ […]
“777 ಚಾರ್ಲಿ” ತೆರೆಯ ಕಡೆಗೆ, “ಸಪ್ತ ಸಾಗರದಾಚೆ ಎಲ್ಲೋ” ಜನರ ಕಡೆಗೆ.

ರಕ್ಷಿತ್ ಶೆಟ್ಟಿಯವರ ಸಿನಿದಾರಿಯಲ್ಲಿ ಸದ್ಯ ಹಲವಾರು ಸಿನಿಮಾಗಳಿವೆ. ಜನರೆದುರಿಗೆ ತಂದಿಟ್ಟ ಚಿತ್ರಗಳು ಒಂದಷ್ಟಾದರೆ, ಇನ್ನು ಪೇಪರ್ ಮೇಲೆ ಇರುವ ಚಿತ್ರಗಳೇ ಎಷ್ಟಿವೆಯೋ! ಸದ್ಯ ಅವರ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು. ಇದೇ ಜೂನ್ 10ರಂದು ಪ್ರಪಂಚದಾದ್ಯಂತ ತೆರೆಕಾಣುತ್ತಿದೆ. ಇದೀಗ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ಅಭಿಮಾನಿಗಳಿಗೆ ಹೊಸ ಸಂತಸ ನೀಡಲು ಸಿದ್ಧವಾಗಿದೆ. ‘777 ಚಾರ್ಲಿ’ಯ ನಂತರ ರಕ್ಷಿತ್ ಶೆಟ್ಟಿ ನಟಿಸುತ್ತಿರುವುದು, ಹೇಮಂತ್ ಎಂ ರಾವ್ ಅವರ ಸೃಷ್ಟಿಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ. ಚಾರ್ಲಿ […]
ತೆರೆಯ ಕಡೆಗೆ ಬರುತ್ತಿದೆ ‘ಕೆಜಿಎಫ್’ ರಾಣಿಯ ಮುಂದಿನ ಚಿತ್ರ.

ಕೆಜಿಎಫ್ ಚಾಪ್ಟರ್ 2 ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಸಾವಿರ ಮನಸ್ಸುಗಳ ಜೊತೆಗೆ ಸಾವಿರ ಕೋಟಿಯನ್ನೂ ದಾಟಿ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಭಾಗವಾಗಿದ್ದ ಪ್ರತಿಯೊಬ್ಬರಿಗೂ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದಂತು ಸತ್ಯ. ಇದೀಗ ಕೆಜಿಎಫ್ ನ ರಾಣಿ, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರ ಮುಂದಿನ ಚಿತ್ರದ ಬಿಡುಗಡೆಗೆ ಮುಹೂರ್ತ ಇಡಲಾಗಿದೆ. ಕೆಜಿಎಫ್ ಅಂತಹ ದೊಡ್ಡ ಚಿತ್ರದ ನಂತರ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಿದ್ದು ಸಹ ಅಷ್ಟೇ ದೊಡ್ಡ ಸಿನಿಮಾ. ತಮಿಳಿನ […]
ಇದುವೇ ಪ್ರಶಾಂತ್ ನೀಲ್ ಮುಂದಿನ ಚಿತ್ರ!!!

ಭಾರತದ ಪ್ರದೇಶಗಳಲ್ಲಿ ಕೆಜಿಎಫ್ ಎಂಬ ಒಂದು ಹೊಸ ಪ್ರದೇಶವೇ ಸೇರಿಹೋಗುವ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು. ಅವರ ಸೃಷ್ಟಿಯ ‘ಕೆಜಿಎಫ್’ ಇದೀಗ ಪ್ರಪಂಚವನ್ನೇ ಆಳುತ್ತಿದೆ ಎಂದರೆ ತಪ್ಪಾಗದು. ಬಿಡುಗಡೆಯಾಗಿ ತಿಂಗಳು ಮುಗಿದು ಒಟಿಟಿ ಯಲ್ಲಿ ಕೂಡ ಲಭ್ಯವಾಗುತ್ತಿದ್ದರೂ, ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಸದ್ದಿಗೆ ಸೆಡ್ಡು ಹೊಡೆದವರೇ ಇಲ್ಲ. ಇದೀಗ ಪ್ರಶಾಂತ್ ನೀಲ್ ತಮ್ಮ ಮುಂದಿನ ಚಿತ್ರ ಯಾವುದೆಂಬುದನ್ನು ಘೋಷಿಸಿದ್ದಾರೆ. ನಮ್ಮ ಕನ್ನಡದ ಹೆಮ್ಮೆ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ನಿರ್ಧಾರವಾಗಿರುವುದು ಜೂನಿಯರ್ ಎನ್ಟಿಆರ್ ಅವರ […]
ಮತ್ತೆ ಮೋಡಿ ಮಾಡಲಿದ್ದಾರೆ ಮಾಧವನ್

ಖ್ಯಾತ ನಟ ಆರ್ ಮಾಧವನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ “ರಾಕೆಟ್ರಿ: ದಿ ನಂಬಿ ಎಫೆಕ್ಟ್”ಚಿತ್ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅದ್ದೂರಿ ಸ್ವಾಗತ ಪಡೆದುಕೊಂಡಿದೆ. ಈ ಚಿತ್ರ ಫ್ರೆಂಚ್ ರಿವೇರಾದಲ್ಲಿ ಪ್ರದರ್ಶನ ಕಾಣಲಿದ್ದು ಆಗಲೇ ಎಲ್ಲಾ ಸೀಟ್ ಗಳು ವೇಗವಾಗಿ ಭರ್ತಿಯಾಗುತ್ತಿವೆ. ಮೂಲಗಳ ಪ್ರಕಾರ “ರಾಕೆಟ್ರಿ : ದಿ ನಂಬಿ ಎಫೆಕ್ಟ್”ಚಿತ್ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಈ ವರ್ಷ ಎಲ್ಲರೂ ಎದುರು ನೋಡುತ್ತಿರುವಂತಹ ಚಿತ್ರವಾಗಿದೆ. ಸಿನಿಮಾ ಪ್ರದರ್ಶನ ಮೊದಲೇ ಎಲ್ಲರ ಆಸಕ್ತಿಯನ್ನು ಹೆಚ್ಚಿಸಿದೆ. ಇದು ವೆಬ್ ಸೈಟ್ ನಲ್ಲಿ ಪಟ್ಟಿ […]
ಕಥೆಗಳಿಗೆ ನನ್ನ ಮೊದಲ ಆದ್ಯತೆ – ಸಂಜನಾ ಆನಂದ್

ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಇಂದು ಇಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದರುಗಳಿಗೇನು ಕಡಿಮೆಯಿಲ್ಲ. ಆ ಸಾಲಿಗೆ ಸೇರಿರುವ ಕೊಡಗಿನ ಕುವರಿಯ ಹೆಸರು ಸಂಜನಾ ಆನಂದ್. ಬಂದ ಅವಕಾಶವನ್ನು ಬೇಡ ಎನ್ನದೇ ಅಸ್ತು ಎಂದು ನಟನಾ ಜಗತ್ತಿಗೆ ಕಾಲಿಟ್ಟ ಸಂಜನಾ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕ ಪ್ರಭುವಿನ ಮನಸ್ಸಿಗೆ ಕನ್ನ ಹಾಕಿದ ಚೆಲುವೆ. ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಮಡಿಕೇರಿ ಮೂಲಕ ಸಂಜನಾ ಇಂದು ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಪದವಿಯ ನಂತರ ಡೆಲ್ […]
ಕನ್ನಡ ಮಾತನಾಡುವುದು ಖುಷಿ ತಂದಿದೆ – ಸಾಯಿ ಪಲ್ಲವಿ

ಪ್ರೇಮಂ ಖ್ಯಾತಿಯ ನಟಿ ಸಾಯಿ ಪಲ್ಲವಿ ತಮ್ಮ ಮುಂದಿನ ಚಿತ್ರ ಗಾರ್ಗಿ ಗಾಗಿ ಕನ್ನಡ ಕಲಿತು ಸುದ್ದಿಯಲ್ಲಿದ್ದಾರೆ. ಗಾರ್ಗಿ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹೀಗಾಗಿ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡಿದ್ದು ಈ ದೃಶ್ಯವನ್ನು ಚಿತ್ರ ತಂಡ ಹಂಚಿಕೊಂಡಿತ್ತು. ಕನ್ನಡ ಕಲಿತ ಅನುಭವವನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. “ತಮಿಳು ಮಾತನಾಡುವ ಹುಡುಗಿಯೊಬ್ಬಳು ಕನ್ನಡ ಮಾತನಾಡುವಂತೆ ಇದು ಇರುವುದಿಲ್ಲ. ಅಪ್ಪಟ ಕನ್ನಡ ಹುಡುಗಿಯಂತೆ ಡಬ್ ಮಾಡಿದ್ದೇನೆ. ಕನ್ನಡ ಮಾತನಾಡುವುದು ಖುಷಿ ನೀಡುತ್ತದೆ. ಲ,ಣ,ನ ಅಕ್ಷರಗಳನ್ನು ಉಪಯೋಗಿಸುವಾಗ ಸವಾಲೆನಿಸಿತು. […]

