ಸೂಪರ್ ವುಮೆನ್ ಅವತಾರದಲ್ಲಿ ಬಾಲಿವುಡ್ ಬೆಡಗಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇನ್ಸ್ಟಾ ಗ್ರಾಂ ನಲ್ಲಿ ಸೂಪರ್ ವುಮೆನ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರ ನಿಕಮ್ಮಾ ದ ಘೋಷಣೆ ಕೂಡಾ ಈ ಸಂದರ್ಭದಲ್ಲಿ ಆಕೆ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರವನ್ನು ವಿಡಿಯೋ ಮೂಲಕ ಘೋಷಿಸಿರುವ ಶಿಲ್ಪಾ “ನಾವು ಈಗ ಹೊಚ್ಚ ಹೊಸ ಅವತಾರದಲ್ಲಿ ಮಾತನಾಡುತ್ತಿದ್ದೇವೆ. ಯಾರು ನಿಜವಾದ ಅವನಿ? ಸ್ವಲ್ಪ ಪ್ರೀತಿಯನ್ನು ತೋರಿಸಿ. ಹೆಚ್ಚಿನದಕ್ಕಾಗಿ ಈ ಜಾಗವನ್ನು ವೀಕ್ಷಿಸಿ‌. ಮರೆಯದಿರಿ. ಮೇ 17ರಂದು ನಿಕಮ್ಮಾ ಟ್ರೇಲರ್ ಬಿಡುಗಡೆ ಆಗಲಿದೆ” ಎಂದು […]

21 ಅವರ್ಸ್’ಗೆ ಅಭಿನಯ ಚಕ್ರವರ್ತಿಯ ಆತಿಥ್ಯ.

ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಬ್ಯುಸಿ ಆಗಿರುವ ನಟ ಯಾರು ಎಂದು ಯಾವುದೇ ಕನ್ನಡ ಸಿನಿಮಾಭಿಮಾನಿಯಲ್ಲಿ ಕೇಳಿದರೆ, ಅವರು ನೀಡೋ ಹೆಸರುಗಳ ಪಟ್ಟಿಯಲ್ಲಿ ಮೊದಲು ಕಾಣೋ ಹೆಸರು ಡಾಲಿ ಅಲಿಯಾಸ್ ಧನಂಜಯ. ಒಂದರ ಬೆನ್ನಿಗೆ ಇನ್ನೊಂದರಂತೆ ಹಲವು ಅದ್ಭುತ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಧನಂಜಯ್ ಅವರು ಇದೀಗ ತಮ್ಮ ಮುಂದಿನ ಚಿತ್ರ ’21 ಅವರ್ಸ್’ ಬಿಡುಗಡೆಯ ಭರದಲ್ಲಿದ್ದಾರೆ. ಟ್ರೈಲರ್ ನಿಂದ ಕನ್ನಡಿಗರಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರತಂಡಕ್ಕೆ ಇದೀಗ ಕಿಚ್ಚ ಸುದೀಪ್ ಅವರಿಂದ ಆತಿಥ್ಯ ದೊರಕಿದೆ. ಜೈ ಶಂಕರ್ […]

ಪೇಟಾ ಇಂಡಿಯಾ ದಿಂದ ಪ್ರಶಸ್ತಿ ಪಡೆದ ಪೂಜಾ ಭಟ್… ಯಾಕೆ ಗೊತ್ತಾ?

ಬಾಲಿವುಡ್ ನಟಿ ಹಾಗೂ ನಿರ್ದೇಶಕಿ ಪೂಜಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈಗ ಪೇಟಾ ಇಂಡಿಯಾ ಅವರಿಗೆ ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸುವುದಿಲ್ಲ ಎಂಬ ಪ್ರತಿಜ್ಞೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದ ಭಾರತದ ಮೊದಲ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಪೇಟಾ ಇಂಡಿಯಾ ಕಳುಹಿಸಿರುವ ಪತ್ರದ ಫೋಟೋ ಹಂಚಿಕೊಂಡಿದ್ದಾರೆ. “ಡಿಯರ್ ಭಟ್ , ಫಿಶ್ ಐ ನೆಟ್ವರ್ಕ್ ಪರವಾಗಿ ಸಿನಿಮಾಗಳಲ್ಲಿ ಪ್ರಾಣಿಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ದೇಶದ ಮೊದಲ […]

ವಿಕ್ರಾಂತ್ ರೋಣನಿಗೆ ಸಾಥ್ ನೀಡಿದ ಬಾಲಿವುಡ್ ಸ್ಟಾರ್ ನಟ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ ರೋಣ ಜುಲೈ 28ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. 3ಡಿಯಲ್ಲಿ ರಿಲೀಸ್ ಆಗಲಿರುವ ವಿಕ್ರಾಂತ ರೋಣ ಚಿತ್ರವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಪ್ರಸ್ತುತ ಪಡಿಸಲಿದ್ದಾರೆ. ಅನೂಪ್ ಭಂಡಾರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಶೇರ್ ಮಾಡಿದ್ದಾರೆ.”ವಿಕ್ರಾಂತ ರೋಣ ಎಸ್ ಕೆ ಎಫ್ ಜೊತೆ ಸಹಯೋಗ ಮಾಡಲು ಹೆಮ್ಮೆ ಪಡುತ್ತದೆ. ಭಾರತದ ದೊಡ್ಡ ನಟ ಸಲ್ಮಾನ್ ಖಾನ್ ವಿಕ್ರಾಂತ ರೋಣ ಸಿನಿಮಾವನ್ನು […]

ಸದ್ದು ಮಾಡುತ್ತಿದೆ ಚಾರ್ಲಿ ಟ್ರೇಲರ್

ರಕ್ಷಿತ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅಭಿನಯದ ಚಾರ್ಲಿ 777 ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ನಿರ್ದೇಶಕ ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಜೂನ್ 10ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಚಿತ್ರತಂಡ ಟ್ರೇಲರ್ ನ ಲಿಂಕ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನಟ ರಕ್ಷಿತ್ ಶೆಟ್ಟಿ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ “ನಮ್ಮ ವರುಷಗಳ ಪಯಣವನ್ನು ನಿಮಗಾಗಿ ಸಣ್ಣ ತುಣುಕನ್ನಾಗಿ ವಿಂಗಡಿಸಲಾಗಿದೆ. ಇದು ಜೂನ್ […]

ಕೊನೆಗೂ ನಿಗದಿಯಾಯ್ತು ಗಾಳಿಪಟ ಹಾರುವ ದಿನ

ಗಾಳಿಪಟ 2 ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಲಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಲೂಸಿಯಾ ಪವನ್ ನಟಿಸಿದ್ದಾರೆ. ಆಗಸ್ಟ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ. 2008ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡ ಗಾಳಿಪಟ ಚಿತ್ರದ ಭಾಗ ಎರಡು ಇದಾಗಿದ್ದು ಸಿನಿಮಾ ಬಿಡುಗಡೆಯ ಕುರಿತಾಗಿ ನಿರ್ದೇಶಕ ಯೋಗರಾಜ್ ಭಟ್ ” ಒಂದಿಷ್ಟು ಮೊಹಬ್ಬತ್ ಜೊತೆಗೆ ಒಂದಿಷ್ಟು […]

ಸ್ಮೈಲ್ ಶ್ರೀನು ಬೆನ್ನು ತಟ್ಟಿದ ಹಿರಿಯ ನಿರ್ದೇಶಕ ಕೆ.ಆರ್.ಆರ್

ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ಹಾಡು ಹಾಗೂ ಗ್ಲಿಂಪ್ಸ್ ಸಖತ್ ಸದ್ದು ಮಾಡುತ್ತಿವೆ. ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ತೆಲುಗಿನ ಖ್ಯಾತ ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವ್ ‘ಓ ಮೈ ಲವ್’ ಗ್ಲಿಂಪ್ಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವಾರು ನಿರ್ದೇಶಕರಿಗೆ, ಯುವ ಪ್ರತಿಭೆಗಳಿಗೆ ಗಾಡ್ ಫಾದರ್ ಆಗಿರುವ ಕೆ.ರಾಘವೇಂದ್ರ ರಾವ್, ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆ […]

ಮನಬಿಚ್ಚಿ ಮಾತನಾಡಿದ ಕಾರ್ತಿಕ್ ಆರ್ಯನ್

ಸದ್ಯ ಭೂಲ್ ಭುಲಯ್ಯ 2 ಚಿತ್ರದ ಪ್ರಚಾರದಲ್ಲಿ ತೊಡಗಿರುವ ನಟ ಕಾರ್ತಿಕ್ ಆರ್ಯನ್ ಅವರಿಗೆ ನೀವು ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಉದ್ಯಮದ ಹೊರಗಿನಂತೇ ಭಾವಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಕಾರ್ತಿಕ್ ಯಾವ ಪ್ರೊಡಕ್ಷನ್ ಹೌಸ್ ನಿಂದಲೂ ಅವರಿಗೆ ಹಾಗೆ ಅನಿಸಿಲ್ಲವಂತೆ. ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಖುಷಿಯಾಗಿದ್ದಾರಂತೆ. “ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಮಿಸ್ ಕಮ್ಯುನಿಕೇಶನ್ ಗಳು ನಡೆಯುತ್ತವೆ. ಇದು ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ನಡೆಯುತ್ತವೆ. ಕೆಲವೊಮ್ಮೆ ಇದು ಒಳ್ಳೆಯದು ಹಾಗೂ ಕೆಲವೊಮ್ಮೆ ಇದರಿಂದಾಗಿ ನೀವು ಕೆಲಸ […]

ಆ ಒಂದು ಸಿನಿಮಾದ ಬಗ್ಗೆ ಮಾತನಾಡಿದ ರಣವೀರ್ ಸಿಂಗ್ ಹೇಳಿದ್ದೇನು ಗೊತ್ತಾ?

ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಚೊಚ್ಚಲ ಚಿತ್ರ ಬ್ಯಾಂಡ್ ಬಜಾ ಬಾರಾತ್ ಸಿನಿಮಾದ ಬಿಟ್ಟೂ ಶರ್ಮಾ ಪಾತ್ರಕ್ಕಾಗಿ ದೆಹಲಿಯ ಸಂಪ್ರದಾಯವನ್ನು ಕಲಿತುಕೊಳ್ಳಲು ದೆಹಲಿ ಯುನಿವರ್ಸಿಟಿಯ ಸುತ್ತಲೂ ಹೇಗೆ ತಿರುಗಿದ್ದರು ಎಂಬುದನ್ನು ಟಿವಿ ಶೋನಲ್ಲಿ ಬಹಿರಂಗ ಪಡಿಸಿದ್ದಾರೆ. ಸದ್ಯ ಕಾಮಿಡಿ ಡ್ರಾಮಾ ಜಯೇಶ್ ಭಾಯಿ ಜೋರ್ ದಾರ್ ಸಿನಿಮಾದಲ್ಲಿ ನಟಿಸುತ್ತಿರುವ ರಣವೀರ್ ಚಿತ್ರದ ಪ್ರಚಾರಕ್ಕಾಗಿ ಸಹನಟಿ ಶಾಲಿನಿ ಪಾಂಡೆ ಜೊತೆ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. “ನಾನು ಬ್ಯಾಂಡ್ ಬಜಾ ಬಾರಾತ್ ಸಿನಿಮಾಕ್ಕೆ ಆಡಿಷನ್ ನೀಡಿದೆ. ದಿಲ್ಲಿ ಮೂಲದ […]

ವಿಭಿನ್ನ ಸಿನಿಮಾದಲ್ಲಿ ನಟಿಸಲಿದ್ದಾರೆ ನೀನಾಸಂ ಸತೀಶ್

ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಸತೀಶ್ ನೀನಾಸಂ ಈಗ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲೂಸಿಯಾ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಹೊಸ ಛಾಪು ಮೂಡಿಸಿರುವ ನೀನಾಸಂ ಸತೀಶ್ ಸದ್ಯ ಕನ್ನಡ ಸಿನಿಮಾ ರಂಗದ ಬ್ಯುಸಿ ನಟರಲ್ಲಿ ಒಬ್ಬರು ಹೌದು. ಇಂತಿಪ್ಪ ಸತೀಶ್ ಈಗ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಲೈಫು ಇಷ್ಟೇನೆ, ಪಂಚರಂಗಿ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸತೀಶ್ ಅವರಿಗೆ ಲೂಸಿಯಾ ಚಿತ್ರ ಬ್ರೇಕ್ ನೀಡಿತು. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ […]