ಅಜಿತ್ ಜೊತೆಗೆ ನಟಿಸಲಿದ್ದಾರಾ ಈ ಸ್ಟಾರ್ ನಟಿ

ಮಲೆಯಾಳಂ ಚಿತ್ರರಂಗದ ಫೇಮಸ್ ನಟಿ ಮಂಜು ವಾರಿಯರ್ ತಮಿಳು ನಟ ಅಜಿತ್ ಜೊತೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅಸುರನ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಂಜು ಈಗ ಅಜಿತ್ ಸಿನಿಮಾಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಅವರ ಅಭಿನಯದ ವಾಲ್ಮೈ ಚಿತ್ರ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಜಿತ್ ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಸಿನಿಮಾಗೆ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಬೋನಿ ಕಪೂರ್ […]

ಮಮ್ಮುಟ್ಟಿ ಜೊತೆ ಹರೀಶ್ ರಾಜ್

ಕನ್ನಡ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಹರೀಶ್ ರಾಜ್ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆ ನಟಿಸುವ ಅವಕಾಶ ಗಳಿಸಿದ್ದಾರೆ. ಹೀಗಾಗಿ ಖುಷಿಯಾಗಿದ್ದಾರೆ ನಟ ಹರೀಶ್ ರಾಜ್. ಶೂಟಿಂಗ್ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಮಲೆಯಾಳಂ ಸಿನಿಮಾ ಸಿಬಿಐ 5 ಇದರಲ್ಲಿ ಮನಾಲ್ ಸಾಮ್ ಪಾತ್ರದಲ್ಲಿ ನಟಿಸಿರುವುದು ಅದ್ಭುತ ಅನುಭವ. ಮಮ್ಮುಟ್ಟಿ ಸರ್ ಜೊತೆ ನಟಿಸಲು ಕಾತರನಾಗಿದ್ದೇನೆ”ಎಂದಿದ್ದಾರೆ. ಶೂಟಿಂಗ್ ಸಮಯದಲ್ಲಿ ಬಹಳ ಎಂಜಾಯ್ ಮಾಡಿರುವಂತೆ ಕಾಣುವ […]

ದ್ವಿಪಾತ್ರದಲ್ಲಿ ಭಾವನಾ ಮೆನನ್

ಜಾಕಿ ಸಿನಿಮಾದ ಮೂಲಕ ಚಂದನವನದಲ್ಲಿ ಫೇಮಸ್ಸು ಆದ ಭಾವನಾ ಕೊಂಚ ಗ್ಯಾಪ್ ನ ನಂತರ ಮತ್ತೆ ನಟನೆಯತ್ತ ಮರಳಿರುವುದು ಸಿನಿ ಪ್ರಿಯರಿಗೆ ಹೊಸ ವಿಚಾರವೇನಲ್ಲ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ – 2 ರಲ್ಲಿ ನಟಿಸಿರುವ ಈಕೆ ಈಗ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಆ ಸಿನಿಮಾದಲ್ಲಿ ಭಾವನಾ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿಗಂತ್ ಆಲಿಯಾಸ್ ರಕ್ಷಣ್ ನಿರ್ದೇಶನದ “ಪಿಂಕ್ ನೋಟು” ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಭಾವನಾ ಮೆನನ್ ಅಭಿನಯಿಸಲಿದ್ದು ಮಧ್ಯಮ ವರ್ಗದ ಕುಟುಂಬದ […]

‘777 ಚಾರ್ಲಿ’ ಬಗ್ಗೆ ಮೋಹಕ ತಾರೆ ಹೇಳಿದ್ದೇನು?

ಸ್ಯಾಂಡಲ್ವುಡ್ ಕ್ವೀನ್ ಎಂದೇ ಕನ್ನಡಿಗರ ಮನದಲ್ಲಿ ರಾರಾಜಿಸುತ್ತಿರುವ ಮೋಹಕ ತಾರೆ ರಮ್ಯ ಅವರು ಒಂದಷ್ಟು ಕಾಲ ಸಿನಿರಂಗದಿಂದ ಹೊರಗುಳಿದಿದ್ದವರು. ಇದೀಗ ಎಲ್ಲೆಡೆ ಸಕ್ರೀಯರಾಗಿರುವ ಅವರು ಕನ್ನಡ ಚಿತ್ರಗಳನ್ನ, ಚಿತ್ರ ಸಂಬಂಧಿ ವಿಷಯಗಳನ್ನ ಬೆಂಬಲಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಹಾಗು ಸಿನಿಮಾಗಾಳ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುವ ನಟಿ, ಇದೀಗ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ‘777 ಚಾರ್ಲಿ’ ಬಗ್ಗೆ ಮಾತನಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯ ಮೂಲಕ ವಿವಿಧ ಚಿತ್ರಗಳ ಬಗೆಗೆ ಮಾತನಾಡುವ ರಮ್ಯಾ, ಈ ಹಿಂದೆ […]

ಈಗಲೂ RRR ಚಿತ್ರಕ್ಕೆ ಕಾಯುತ್ತಿರುವವರಿಗೆ ಇದೀಗ ಸಂತಸದ ಸುದ್ದಿ.

ಭಾರತ ಚಿತ್ರರಂಗದ ದಾಖಲೆಗಳ ಹಾಲೆಯಲ್ಲಿ ತನ್ನ ಹೆಸರನ್ನ ದೊಡ್ಡ ಅಕ್ಷರಗಳಲ್ಲಿ ಅಚ್ಚೋತ್ತಿಸಿಕೊಂಡಿರೋ ಸಿನಿಮಾ RRR. ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಎಲ್ಲಿಯೂ ನಿಲ್ಲದೆ, ಹಿಂತಿರುಗಿ ನೋಡದೆ ಮುನ್ನುಗ್ಗುತ್ತಲೇ ಇದೆ. ಪ್ರಪಂಚಾದಾದ್ಯಂತದ ಚಿತ್ರಮಂದಿರಗಳಿಂದ ಸಾವಿರ ಕೋಟಿಯನ್ನ ಎಂದೋ ಬಾಚಿರುವ ಚಿತ್ರ, ಇದೀಗ ಎರಡು ಸಾವಿರದೆಡೆಗೆ ದಾಪುಗಾಲು ಹಾಕುತ್ತಿದೆ. ಈ ನಡುವೆ ಚಿತ್ರಮಂದಿರ ಮಾತ್ರವಲ್ಲದೆ ಬೇರೆಡೆಯೂ ಜನರನ್ನ ಸೆಳೆಯಲು ಹೊರಟಿದೆ RRR. ಅಂದರೆ, ಚಿತ್ರ ಇದೀಗ ಒಟಿಟಿ ರಿಲೀಸ್ ಗೆ ಸಜ್ಜಾಗಿದೆ. ಭಾರತದ ಪಂಚಭಾಷೆಗಳಲ್ಲಿ ಬಿಡುಗಡೆ ಕಂಡಿರುವ RRR, ಎಲ್ಲಾ ಭಾಷೆಗಳಲ್ಲೂ ಸೂಪರ್ […]

ಮುಸ್ಲಿಂ ಮಹಿಳೆಯ ತಲ್ಲಣವನ್ನು ಬಿಚ್ಚಿಡಲಿದೆ ಸಾರಾ ವಜ್ರ

ಕನ್ನಡ ಸಿನಿಮಾರಂಗದಲ್ಲಿ ಕಾದಂಬರಿ ಆಧಾರಿತವಾದ ಚಿತ್ರಗಳು ಹೊಸದೇನಲ್ಲ. ಈಗ ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತವಾದ ಸಿನಿಮಾ ಇದೇ ತಿಂಗಳು ತೆರೆ ಮೇಲೆ ಬರುತ್ತಿದೆ. ಇನ್ನು ಕಾದಂಬರಿಯ ಲೇಖಕಿ ಸಾರಾ ಅವರ ಹೆಸರನ್ನೂ ಕೂಡಾ ಈ ಚಿತ್ರಕ್ಕೆ ಇಡಲಾಗಿದೆ. ಗಡಿನಾಡ ಲೇಖಕಿ ಸಾರಾ ಅಬೂಬಕರ್ ಮುಸ್ಲಿಂ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ತಮ್ಮ ಬರವಣಿಗೆಯ ಮೂಲಕ ತೆರೆದಿಟ್ಟ ದಿಟ್ಟ ಮಹಿಳೆ. ಅವರ ಹಲವು ಕಥ, ಕಾದಂಬರಿಗಳು ಮುಸ್ಲಿಂ ಹೆಣ್ಣು ಮಗಳ ತಲ್ಲಣಗಳನ್ನು ಬಿಚ್ಚಿಡುತ್ತದೆ. […]

ಒಂದೇ ಸಿನಿಮಾದಲ್ಲಿ ಸ್ಟಾರ್ ನಟರು

ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆಯನ್ನು ಭೇಟಿಯಾಗಿದ್ದು ಅವರೊಂದಿಗಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೇ ಅನುಪಮ್ ಖೇರ್ ಅವರು ದೀಪಿಕಾ ಪಡುಕೋಣೆಯನ್ನು ದುಬೈ ಏರ್ ಪೋರ್ಟ್ ನಲ್ಲಿ ಭೇಟಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಜೊತೆಗಿನ ಫೋಟೋವನ್ನು ಹಂಚಿಕೊಂಡ ಅನುಪಮ್ ಖೇರ್ “ದುಬೈ ಏರ್ ಪೋರ್ಟ್ ನಲ್ಲಿ ಪ್ರತಿಭಾವಂತ ನಟಿ ದೀಪಿಕಾ ಪಡುಕೋಣೆ ಅವರನ್ನು ಭೇಟಿಯಾದದ್ದು ಖುಷಿಯಾಗಿದೆ. ದೀಪಿಕಾ ಅವರ ಯಶಸ್ಸು ನನಗೆ ದುಪ್ಪಟ್ಟು ಖುಷಿ ತಂದಿದೆ. ಹಾಗೂ ನಟನಾ […]

ಬುಲ್ ಬುಲ್ ಬೆಡಗಿ ನಟನಾ ಜರ್ನಿ

ಚಂದನವನದ ಡಿಂಪಲ್ ಕ್ವೀನ್ ರಚಿತ ರಾಮ್ ಮೈಲಿಗಲ್ಲು ಸಾಧಿಸಿದ ಸಂಭ್ರಮದಲ್ಲಿ ಇದ್ದಾರೆ. ಗುಳಿ ಕೆನ್ನೆಯ ಬೆಡಗಿ ಚಿತ್ರರಂಗದಲ್ಲಿ ಒಂಭತ್ತು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಚಿತಾ ರಾಮ್. ತನ್ನ ಮೊದಲ ಚಿತ್ರ ಬುಲ್ ಬುಲ್ ನ ಪೋಸ್ಟರ್ ನ್ನು ಹಂಚಿಕೊಳ್ಳುವ ಮೂಲಕ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ ರಚಿತಾ ರಾಮ್. ಬುಲ್ ಬುಲ್ ನಲ್ಲಿ ನಾಯಕಿ ಕಾವೇರಿಯಾಗಿ ನಟಿಸಿದ್ದ ರಚಿತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದರು. “ಸುದೀರ್ಘ ಪಯಣದಲ್ಲಿ ಮೊದಲ ಹೆಜ್ಜೆ. […]

‘ಅವತಾರ ಪುರುಷ’ನ ಅವತರಣಿಕೆ

ಸಿಂಪಲ್ ಸುನಿ ಎಂಬ ಹೆಸರು ಕೇಳಿದ ತಕ್ಷಣ ಸಿನಿಪ್ರಿಯರಿಗೆ ನೆನಪಾಗುವುದು, ಸಿಂಪಲ್ ಸನ್ನಿವೇಶಗಳಲ್ಲೂ ನಗು ತರಿಸುವ ಅವರ ಸಂಭಾಷಣೆಗಳು, ಅಷ್ಟೇ ಸಿಂಪಲ್ ಆಗಿ ಮನದಲ್ಲೇ ಉಳಿದುಕೊಳ್ಳೋ ಲವ್ ಸ್ಟೋರಿಗಳು. ಆದರೆ ಈ ಬಾರಿಯ ‘ಅವತಾರ ಪುರುಷ’ನಲ್ಲಿ ಕಂಡದ್ದು ಹೊಸ ಸುನಿ ಅವರನ್ನ ಅನ್ನಿಸೋದು ಖಂಡಿತ. ಶರಣ್ ಹಾಗು ಸುನಿ ಅವರ ಜೋಡಿ ಪ್ರೇಕ್ಷಕರ ಮನಸಿನಲ್ಲಿ ಒಂದು ಸುತ್ತಿನ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಒಂದು ಕುಟುಂಬ. ಅದರಲ್ಲೊಬ್ಬ ಕಳೆದು ಹೋಗಿರೋ ಮಗ ಕರ್ಣ. ಆ ಹುಡುಗ ಕಾಣೆಯಾದಾಗಿನಿಂದ ಮನೆ […]

ಹೊಸ ಭಡ್ತಿ ಪಡೆದ ಕೊಡಗಿನ ಕುವರಿ

ಬಹುಭಾಷಾ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಮಂಜಿನ ನಗರಿಯ ಚೆಲುವೆ ಹರ್ಷಿಕಾ ಪೂಣಚ್ಚ ಇದೀಗ ರಿಪೋರ್ಟರ್ ಆಗಿ ಭಡ್ತಿ ಪಡೆದಿದ್ದಾರೆ. ಅರೇ, ಹರ್ಷಿಕಾ ನಟನೆಯಿಂದ ಬ್ರೇಕ್ ಪಡೆದುಕೊಂಡರಾ ಅಂಥ ಆಲೋಚಿಸುತ್ತಿದ್ದೀರಾ? ಹರ್ಷಿಕಾ ಪೂಣಚ್ಚ ರಿಪೋರ್ಟರ್ ಆಗಿ ಬದಲಾದುದೇನೋ ನಿಜ. ಆದರೆ ರಿಯಲ್ ನಲ್ಲಿ ಅಲ್ಲ, ರೀಲ್ ನಲ್ಲಿ! ಗುರುಮೂರ್ತಿ ಸುನಾಮಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ಮಾರಕಾಸ್ತ್ರ”ಕ್ಕೆ ಕೊಡಗಿನ ಕುವರಿ ಸಹಿ ಹಾಕಿದ್ದಾರೆ. ಕೋಮಲ ನಟರಾಜ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಹೊಸ ಪ್ರತಿಭೆ ಆನಂದ್ ಆರ್ಯ ಅವರಿಗೆ ನಾಯಕಿಯಾಗಿ […]