ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ವಿಭಿನ್ನ ಸಿನಿಮಾ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ನಿವೇದಿತಾ ನಿರ್ಮಾಣದ ವೆಬ್ ಸಿರೀಸ್ “ಹನಿಮೂನ್” ಇದೀಗ ಬಿಡುಗಡೆಯಾಗಲಿದೆ ಅಂದ ಹಾಗೇ ವರ್ಷಗಳ ಹಿಂದೆಯೇ ಹನಿಮೂನ್ ವೆಬ್ ಸಿರೀಸ್ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಬಿಡುಗಡೆಯಾಗುವುದು ಮುಂದೆ ಹೋಗಿದ್ದು, ಇದೀಗ ಬಿಡುಗಡೆಯಾಗುತ್ತಿರುವುದು ವೀಕ್ಷಕರಿಗೆ ಸಂತಸ ತಂದಿದೆ. ಅಂದ ಹಾಗೇ ವೂಟ್ ಸೆಲೆಕ್ಟ್ ಎನ್ನುವ ಓಟಿಟಿ ಯಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗಲಿರುವ ಈ ವೆಬ್ ಸಿರೀಸ್ ನಲ್ಲಿ ನಾಗಭೂಷಣ್ ಹಾಗೂ ಸಂಜನಾ […]
ದಾಖಲೆ ಮೊತ್ತಕ್ಕೆ ಮಾರಾಟವಾದ ವಿಕ್ರಾಂತ್ ರೋಣ ರೈಟ್ಸ್

ಕನ್ನಡ ಸಿನಿರಂಗ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕೆಜಿಎಫ್ ಚಿತ್ರದ ನಂತರ ಈಗ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ ರೋಣ ಚಿತ್ರ ಎಲ್ಲೆಡೆ ಹವಾ ಎಬ್ಬಿಸಿದೆ. ಕರ್ನಾಟಕ ಮಾತ್ರವಲ್ಲದೆ ವಿಶ್ವದಾದ್ಯಂತ ಈ ಚಿತ್ರ ಬೇಡಿಕೆ ಪಡೆದುಕೊಂಡಿದ್ದು 3ಡಿಯಲ್ಲಿ ಬರುತ್ತಿರುವುದರಿಂದ ಸಿನಿಪ್ರಿಯರ ಗಮನ ಸೆಳೆದಿದೆ. ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಕುತೂಹಲ ಮೂಡಿಸಿದೆ. ಕರ್ನಾಟಕ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲಿಯೂ ಭಾರಿ ಬೇಡಿಕೆ ಹೊಂದಿರುವ ವಿಕ್ರಾಂತ ರೋಣ ಚಿತ್ರ ಮೂಲಗಳ ಪ್ರಕಾರ […]
ಹಿರಿತೆರೆಯ ಹೊಸ ಖಳನಾಯಕಿ ಈಕೆ

ಮನೋಜ್ಞ ನಟನೆಯ ಮೂಲಕ ವೀಕ್ಷಕರನ್ನು ಸೆಳೆದಿರುವ ಸುಕನ್ಯಾ ಗಿರೀಶ್ ತಮ್ಮ ಮೂರನೇ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ “ಸಮರ್ಥ್” ಚಿತ್ರದಲ್ಲಿ ಪ್ರವೀರ್ ಶೆಟ್ಟಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ರಾಜು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿರುವ ಸುಕನ್ಯಾ “ನನ್ನ ಪಾತ್ರ ನೆಗೆಟಿವ್ ಶೇಡ್ ಹೊಂದಿದೆ ಹಾಗೂ ನಂತರ ನಾನು ಧನಾತ್ಮಕ ವ್ಯಕ್ತಿಯಾಗಿ ಬದಲಾಗುತ್ತೇನೆ. ಹೀಗಾಗಿ ತುಂಬಾ ಭಾವನೆಗಳನ್ನು ಹೊಂದಿದೆ. ಇದು ನನ್ನನ್ನು ಸಬ್ಜೆಕ್ಟ್ ಇಷ್ಟಪಡುವಂತೆ ಮಾಡಿತು. ಅಚ್ಯುತ್ ಕುಮಾರ್ […]
ವಿಚ್ಛೇದನದ ಬೆನ್ನಲ್ಲೇ ಗರ್ಭಿಣಿಯಾದ ಸುದ್ದಿ ನೀಡಿದ ಸಮಂತಾ

ಸಮಂತಾ ರುತು ಪ್ರಭು ನಟನೆಯ ಯಶೋಧಾ ಚಿತ್ರದ ಮೊದಲ ಝಲಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಮಂತಾ ಯಶೋಧಾ ಎಂಬ ಗರ್ಭಿಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಬಿಡುಗಡೆಯಾಗಿರುವ ಈ ವಿಡಿಯೋ ತುಣುಕು ಉತ್ತಮ ಹಿನ್ನೆಲೆ ಸಂಗೀತ ಹೊಂದಿದ್ದು ವೀಕ್ಷಕರಿಗೆ ಕುತೂಹಲಕಾರಿ ವಿಶುವಲ್ ಹೊಂದಿದೆ. ಮಹಿಳಾ ಪ್ರಧಾನ ಚಿತ್ರದಂತೆ ಕಾಣುತ್ತಿರುವ ಈ ಚಿತ್ರ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರವನ್ನು ಹರೀಶ್ ಶಂಕರ್ ಹಾಗೂ ಹರೀಶ್ ನರನ್ ಬರೆದು ನಿರ್ದೇಶಿಸಿದ್ದಾರೆ. ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಮಲೆಯಾಳಂ […]
ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ ಸ್ಟಾರ್ ನಟರು

ಭಾರತ ಚಿತ್ರರಂಗದ ದಿಗ್ಗಜ ಸ್ಟಾರ್ ಗಳಾದ ಸುದೀಪ್ ಹಾಗು ಅಜಯ್ ದೇವಗನ್ ನಡುವಿನ ಟ್ವೀಟ್ ವಾರ್ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಭಾಷೆಯ ಭೇದಭಾವಗಳ ಬಗ್ಗೆ ಒಂದಷ್ಟು ಗಾಢವಾಗಿಯೇ ಮಾತನಾಡಿದ್ದರು ಇಬ್ಬರು ನಟರು. ಹಿಂದಿ ರಾಷ್ಟ್ರ ಭಾಷೆ ಹೇರಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತ ಕನ್ನಡದ ಪರ ದನಿಯೆತ್ತಿದ್ದ ಸುದೀಪ್ ಅವರಿಗೆ ಎಲ್ಲೆಡೆಯಿಂದ ಬೆಂಬಲಗಳು ಬಂದಿದ್ದವು. ಹಿಂದಿಯೇ ನಮ್ಮ ರಾಷ್ಟ್ರಭಾಷೆ ಎಂದು ಅದರ ಪರವಾಗಿ ಮಾತನಾಡಿದ್ದ ಅಜಯ್ ದೇವಗನ್ ಒಂದಷ್ಟು ವಿರೋಧಗಳನ್ನು ಅನುಭವಿಸಿದ್ದರು. ದಕ್ಷಿಣ ಭಾರತದ ದೊಡ್ಡ ವ್ಯಕ್ತಿಗಳೆಲ್ಲ ಹಿಂದಿ […]
ಶ್ರೀನಿಧಿ ಶೆಟ್ಟಿಯವರ ವಿಶೇಷ ವಿಶ್

ಕೆಜಿಎಫ್ 2 ಯಶಸ್ಸಿನಲ್ಲಿ ಇರುವ ನಟಿ ಶ್ರೀನಿಧಿ ಶೆಟ್ಟಿ ಈಗ ಎಲ್ಲಾ ಭಾಷೆಗಳ ಅಭಿಮಾನಿಗಳನ್ನು ಹೊಂದಿದ್ದಾರೆ. ರೀನಾ ದೇಸಾಯಿ ಪಾತ್ರದಿಂದ ಕೇರಳದಲ್ಲಿಯೂ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಶ್ರೀನಿಧಿ ಮೋಹನ್ ಲಾಲ್ ಅವರ ಲೂಸಿಫರ್ ಚಿತ್ರದ ಅಭಿಮಾನಿ ಆಗಿದ್ದು ಈ ಚಿತ್ರದ ಸೀಕ್ವೆಲ್ ಎಂಪುರಾನ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಮೋಹನ್ ಲಾಲ್ ಅವರ ಲೂಸಿಫರ್ ಚಿತ್ರವನ್ನು ಪರದೆ ಮೇಲೆ ನೋಡಿದ ತಕ್ಷಣ ಆ ಸಿನಿಮಾ ಅವರಿಗೆ ಇಷ್ಟ ಆಯಿತು. ಕೆಜಿಎಫ್ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ನಟ ಪೃಥ್ವಿ ರಾಜ್ […]
ಸಂಭ್ರಮದಲ್ಲಿ ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಈಗ ಸಂಭ್ರಮದಲ್ಲಿದ್ದಾರೆ. ಪ್ರಿಯಾಂಕಾ ಅವರು ಇಂಡಸ್ಟ್ರಿಯಲ್ಲಿ 25 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿದ್ದಾರೆ. ಸದ್ಯ ತಮ್ಮ 50ನೇ ಸಿನಿಮಾ ಡಿಟೆಕ್ಟಿವ್ ತೀಕ್ಷ್ಣ ದಲ್ಲಿ ಇನ್ವೆಸ್ಟಿಗೇಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತ್ರಿವಿಕ್ರಮ ರಘು ನಿರ್ದೇಶನ ಮಾಡುತ್ತಿದ್ದಾರೆ. “ಈ ಸಿನಿಮಾ ಹಲವು ಕಾರಣಗಳಿಗೆ ವಿಶೇಷವಾಗಿದೆ. 50 ಸಿನಿಮಾಗಳು ಯಾವ ನಟನಟಿಯರಿಗೆ ಆದರೂ ಹೆಗ್ಗುರುತಿನ ಸಂದರ್ಭವೇ ಸರಿ. ಈ ಸಿನಿಮಾ ಉಳಿದ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಎಂದು ನನಗೆ ಖುಷಿಯಾಗಿದೆ. ಮಹಿಳಾ ಪತ್ತೇದಾರಿ ಪಾತ್ರವನ್ನು ಕನ್ನಡವು ನೋಡಿದೆ ಎಂದು […]
ತೆಲುಗು ಪ್ರೇಕ್ಷಕರು ನನ್ನನ್ನು ಸ್ವೀಕರಿಸಿದ್ದಾರೆ – ಪೂಜಾ ಹೆಗ್ಡೆ

ಸದ್ಯ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಪೂಜಾ ಹೆಗ್ಡೆ ತಾವು ಆಯ್ಕೆ ಮಾಡುತ್ತಿರುವ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಹಿಂದಿ ಸಿನಿಮಾಗಳಲ್ಲಿ ನಟಿಸದೇ ಇರುವುದು ಅವರ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ. ಅವರಿಗಾಗಿ ಆ ಪಾತ್ರಗಳನ್ನು ಮಾಡಲು ಅಥವಾ ಕಥಾಹಂದರಕ್ಕೆ ಸಂಬಂಧಿಸದ ಪಾತ್ರಗಳನ್ನು ಮಾಡಲು ಪೂಜಾ ಬಯಸಲಿಲ್ಲ. ದೊಡ್ಡ ಸ್ಟಾರ್ ನಟರ ಜೊತೆ ನಟಿಸಲು ಆಫರ್ ದೊರೆತರೂ ಆ ಪಾತ್ರಗಳಿಗೆ ಸ್ಕ್ರಿಪ್ಟ್ ನಲ್ಲಿ ಯಾವುದೇ ಸ್ಕೋಪ್ ಇರದ ಕಾರಣ ಅವುಗಳನ್ನು ಪೂಜಾ ಒಪ್ಪಿಕೊಳ್ಳಲಿಲ್ಲವಂತೆ. […]
“ಹೆಡ್ ಬುಷ್”ಗೆ ಬಂತು ಸಂಕಷ್ಟ

‘ನಟರಾಕ್ಷಸ’ ಧನಂಜಯ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿರುವವರು. ತಮ್ಮದೇ ನಿರ್ಮಾಣದ ‘ಬಡವ ರಾಸ್ಕಲ್’ ಚಿತ್ರದಿಂದ ಕನ್ನಡದಲ್ಲಿ ಒಬ್ಬ ಮಾಸ್ ಹೀರೋ ಆಗಿ ತನ್ನ ಜಾಗವನ್ನ ಶಾಶ್ವತ ಮಾಡಿಕೊಂಡಿರುವ ಇವರು, ಖಳನಾಯಕನ ಪಾತ್ರಕ್ಕೂ ಸೈ, ಪೋಷಕ ನಟನ ಪಾತ್ರಕ್ಕೂ ಸೈ. ಸದ್ಯ ಇವರ ಹಲವಾರು ಮುಂದಿನ ಚಿತ್ರಗಳಲ್ಲಿ ಒಂದಾದ ‘ಹೆಡ್ ಬುಷ್’ ಸುದ್ದಿಯಲ್ಲಿದೆ. ಬೆಂಗಳೂರು ಅಂಡರ್ ವರ್ಲ್ಡ್ ನ ದೊರೆ ಎಂ ಪಿ ಜಯರಾಜ್ ಅವರ ಆತ್ಮಕತೆ ಆಧಾರಿತ ಚಿತ್ರ. ಅಗ್ನಿ ಶ್ರೀಧರ್ ಅವರು ಬರೆದಿರುವ ಕಥೆಯನ್ನ […]
ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಮಣಿ

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. “ನಾನು ಸದ್ಯ ಇನ್ನೂ ಹೆಸರಿಡದ ತೆಲುಗು ವೆಬ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ಹೆಚ್ಚು ಪಯಣವನ್ನು ಕೇಳುತ್ತದೆ. ಹೀಗಾಗಿ ನಾನು ಒಡಿಶಾದಿಂದ ವೆಸ್ಟ್ ಬೆಂಗಾಲ್, ಅಸ್ಸಾಂ, ಗಯಾ, ವಾರಣಾಸಿಗೆ ಹೋಗಿದ್ದೇನೆ. ಕೊನೆಯ ಭಾಗದ ಶೂಟಿಂಗ್ ಜಮ್ಮುವಿನಲ್ಲಿ ನಡೆಯಲಿದೆ. ರಿಯಾಲಿಟಿ ಶೋಗಾಗಿ ಶೂಟಿಂಗ್ ಮಾಡುತ್ತಿದ್ದೇನೆ. ಹಲವು ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಸದ್ಯದಲ್ಲೇ ಘೋಷಣೆ ಮಾಡಲಾಗುವುದು” ಎಂದಿದ್ದಾರೆ. ಇದಲ್ಲದೇ ಪ್ರಿಯಾಮಣಿ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ” ಮಿಳು ಸಿನಿಮಾದಲ್ಲಿ ನಟಿಸಲಿರುವ […]

