ಮತ್ತೆ ವಿಭಿನ್ನ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಪೃಥ್ವಿ ಅಂಬರ್

2020ರಲ್ಲಿ ಬಿಡುಗಡೆಯಾದ ಕನ್ನಡದ ಸೂಪರ್ ಹಿಟ್ ಚಿತ್ರ “ದಿಯಾ” ದಲ್ಲಿ ಪೃಥ್ವಿ ಅಂಬರ್, ಖುಷಿ ರವಿ, ದೀಕ್ಷಿತ್ ಶೆಟ್ಟಿ ನಟಿಸಿದ್ದರು. ವಿಭಿನ್ನ ಕಥಾ ಹಂದರದ ಈ ಚಿತ್ರಕ್ಕೆ ದೇಶಾದ್ಯಂತ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಓಟಿಟಿಯಲ್ಲಿ ಯಶಸ್ಸು ಕಂಡಿದ್ದಲ್ಲದೇ ಹಲವು ಭಾಷೆಗಳಿಗೆ ಈ ಚಿತ್ರದ ರಿಮೇಕ್ ರೈಟ್ಸ್ ಖರೀದಿ ಆಯಿತು. ತೆಲುಗು ಹಾಗೂ ಮಲೆಯಾಳಂ ನಲ್ಲಿ ದಿಯಾ ಸಿನಿಮಾದ ಡಬ್ಬಿಂಗ್ ವರ್ಷನ್ ಬಂದವು. 2021ರಲ್ಲಿ ತೆಲುಗಿನಲ್ಲಿ “ಡಿಯರ್ ಮೇಘಾ” ಎಂಬ ಹೆಸರಿನಲ್ಲಿ ರಿಮೇಕ್ ಆಗಿದ್ದು ವೀಕ್ಷಕರ ಮನ ಸೆಳೆದಿತ್ತು. […]
ಬರೋಬ್ಬರಿ 7 ವರ್ಷಗಳ ನಂತರ ನಿರ್ದೇಶನಕ್ಕಿಳಿಯಲಿರೋ ಉಪ್ಪಿ!!

ಕನ್ನಡದಲ್ಲಿ ತಲೆಗೆ ಹುಳ ಬಿಡೋ ಪ್ರಕ್ರಿಯೆಯ ಅತಿ ಪ್ರಬಲ ರಾಯಭಾರಿ ಅಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ ಅವರು. ಸಿನಿಮಾದಿಂದ ಸಿನಿಮಾಗೆ, ಕಥೆಯಿಂದ ಕಥೆಗೆ, ಅವರು ಹೇಳೋ ಬುದ್ಧಿವಾದಗಳ ಜೊತೆಗೆ ಅವರ ಚಿತ್ರದಲ್ಲಿನ ವಿಭಿನ್ನ-ವಿಶೇಷ ರೀತಿಯ ಅಂಶಗಳು ಅತಿ ರಭಸವಾಗಿ ಹರಿದಾಡಿ ಜನರ ಮನದಲ್ಲುಳಿಯುತ್ತವೆ. ಅವರ ನಟನೆಯ ಸಿನಿಮಾಗಳಿಗಿಂತ ಒಂದು ಪಾಲು ಹೆಚ್ಚೇ ಅವರ ನಿರ್ದೇಶನದ ಚಿತ್ರಗಳಿಗೆ ಅಭಿಮಾನಿ ಬಳಗವಿದೆ. ಈ ‘ಬುದ್ದಿವಂತ’ನ ಕೊನೆಯ ನಿರ್ದೇಶನ 2015ರ ‘ಉಪ್ಪಿ2’. ಇದೀಗ ಸುಮಾರು 7 ವರ್ಷಗಳ ನಂತರ ಮತ್ತೊಮ್ಮೆ […]
‘ವೇದ’ದಲ್ಲಿ ಇರಲಿದ್ದಾರಂತೆ ಅಪ್ಪು!!

ಪುನೀತ್ ರಾಜಕುಮಾರ್, ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಅಮೃತಾಶಿಲೆಯಲ್ಲಿ ಕೆಟ್ಟಿದಂತಿರೋ ಹೆಸರು. ಅರ್ಧದಾರಿಯಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟಿದ್ದರು, ಅವರ ವರ್ಚಸ್ಸು ಇನ್ನು ನಮ್ಮ ಮನಸಲ್ಲಿದೆ. ಆ ಅಮೋಘ ವ್ಯಕ್ತಿತ್ವ, ಆ ಅಪೂರ್ವ ವ್ಯಕ್ತಿಯನ್ನ ಇನ್ನೊಮ್ಮೆ ಭುವಿಯಲ್ಲಿ ಕಾಣಲಾಗುವುದಿಲ್ಲವೇನೋ ಎಂಬುದು ಎಲ್ಲ ಕನ್ನಡಿಗರ ಮರುಕ. ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ ಇದೇ ಮಾರ್ಚ್ 17ರಂದು ತೆರೆಕಾಣುತ್ತಿದೆ. ಇದೆ ಚಿತ್ರದ ಸಂದರ್ಶನದ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ಅವರ ಸಹೋದರನಾದ ಕರುನಾಡ ಚಕ್ರವರ್ತಿ ಶಿವಣ್ಣ, ತನ್ನ ಮುಂದಿನ ಚಿತ್ರ ‘ವೇದ’ದಲ್ಲಿ […]
ಮೊದಲ ಬಾರಿಗೆ ಸೈಕಿಯಾಟ್ರಿಸ್ಟ್ ಆಗಿ ತೆರೆಮೇಲೆ ಬರಲಿದ್ದಾರೆ ಮೇಘನಾ

ನಟಿ ಮೇಘನಾ ರಾಜ್ ಹಿರಿತೆರೆಗೆ ಮರಳಿದ್ದು, ಸದ್ಯ ಇರುವುದೆಲ್ಲವ ಬಿಟ್ಟು ಚಿತ್ರ ತಂಡದೊಂದಿಗೆ ಮತ್ತೊಮ್ಮೆ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಹೊಸ ಚಿತ್ರದ ಹೆಸರನ್ನು ಕೂಡಾ ಮೇಘನಾ ರಾಜ್ ಅನೌನ್ಸ್ ಕೂಡಾ ಮಾಡಿದ್ದು ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಾಂತರಾಜ್ ಕನ್ನಳ್ಳಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಮಗ ಹುಟ್ಟಿದ ನಂತರ ಮೇಘನಾ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಇನ್ನು ಈ ಸಿನಿಮಾದಲ್ಲಿ ಮೇಘನಾ ವಿಭಿನ್ನಪಾತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಹೌದು, ಮೇಘನಾ ಈ ಚಿತ್ರದಲ್ಲಿ […]
ಬೆಂಗಳೂರಿನಲ್ಲೂ ನಡೆಯಲಿದೆ RRR ಮಹಾನ್ ಹಬ್ಬ

ಭಾರತದಾದ್ಯಂತ ಬಹುನಿರೀಕ್ಷೆ ಹುಟ್ಟಿಸಿರೋ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿನ ದೊಡ್ಡ ಹೆಸರುಗಳಲ್ಲೊಂದು “RRR”. ಬಾಹುಬಲಿಯ ಜೋಡಿಸಿನೆಮಾಗಳಿಂದ ತಮ್ಮ ಮೇಲೆ ತಮ್ಮ ಸಿನಿಮಾಗಳ ಮೇಲೆ ಅಪೂರ್ವ ಆಸೆಗಳನ್ನ ಪ್ರೇಕ್ಷಕರಲ್ಲಿ ಹುಟ್ಟಿಸಿದ ಶಕ್ತಿ ನಿರ್ದೇಶಕರಾದ ರಾಜಮೌಳಿ ಅವರದ್ದು. ಅವರ ಮುಂದಿನ ಚಿತ್ರ RRR ಇನ್ನೇನು ಬೆರಳೆಣಿಕೆಯಷ್ಟು ದಿನಗಳಲ್ಲಿ ತೆರೆಮೇಲೆ ರಾರಾಜಿಸಲಿದೆ. ನಿರೀಕ್ಷೆಗಳ ರಾಯಭಾರಿ ರಾಜಮೌಳಿಯವರ ಚಿತ್ರಕ್ಕೆ ಭಾಷೆಯ ಗಡಿ ಇಲ್ಲದೆ ದೇಶ-ವಿದೇಶಗಳ ಎಲ್ಲ ಭಾಗದ ಜನರೂ ಕಾತುರದಿಂದ ಕಾಯುತ್ತಿದ್ದಾರೆ. ರಾಮಚರಣ್,ಜೂನಿಯರ್ ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್ […]
ರಿಷಭ್ ಶೆಟ್ಟರ ಖುಷಿಗೆ ಅಸಲಿ ಕಾರಣ ಇದೇ ನೋಡಿ

ಕೇರಳದ ತಿರುವನಂತಪುರದಲ್ಲಿ ಈಗ ಹಬ್ಬದ ಸಂಭ್ರಮ. ಅಸರಲ್ಲೂತ ಸಿನಿಪ್ರಿಯರ ಸಂಭ್ರಮವಂತೂ ಕೇಳುವುದೇ ಬೇಡ. ಯಾಕೆಂದರೆ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ಮಾರ್ಚ್ 18 ರಿಂದ 25ರ ತನಕ ತಿರುವನಂತಪುರದಲ್ಲಿ ನಡೆಯಲಿದೆ. ಸಂತಸದ ವಿಚಾರವೆಂದರೆ ಆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಪ್ರದರ್ಶನಗೊಳ್ಳಲಿದೆ. ಆ ಸಿನಿಮಾ ಬೇರಾವುದು ಅಲ್ಲ ಪೆದ್ರೊ. ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶನದ ಪೆದ್ರೊ ಸಿನಿಮಾ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ವರ್ಲ್ಡ್ ಸಿನಿಮಾ ಎನ್ನುವ ವಿಭಾಗದಡಿ ಇದು ಪ್ರದರ್ಶನಗೊಳ್ಳಲಿದೆ. ಈ ಸಂತಸದ […]
ಮಧುಮತಿಯಾಗಿ ಸ್ಯಾಂಡಲ್ ವುಡ್ ಗೆ ಮರಳಿದ ಶ್ರೀಯಾ ಶರಣ್

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರಣ್ ಈಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. 2013ರಲ್ಲಿ ರೂಪಾ ಅಯ್ಯರ್ ನಿರ್ದೇಶನದ “ಚಂದ್ರ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀಯಾ ಶರಣ್ ಪುನೀತ್ ರಾಜ್ ಕುಮಾರ್ ಅಭಿನಯದ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ತದ ನಂತರ ಮದುವೆ, ಮಗು ಎಂದು ಫ್ಯಾಮಿಲಿಯಲ್ಲಿ ಬ್ಯುಸಿಯಾಗಿದ್ದ ಶ್ರೀಯಾ ಮತ್ತೆ ನಟನೆಯತ್ತ ಮುಖ ಮಾಡಿದ್ದು ಇಂದು ಆಕೆಯ ಕೈಯಲ್ಲಿ ಹಲವು ಚಿತ್ರಗಳಿವೆ. ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಲಿದ್ದಾರೆ ಶ್ರೀಯಾ. ಆರ್ […]
ಮಹಿಳಾ ಪ್ರಧಾನ ಸಿನಿಮಾದ ನಾಯಕಿಯಾದ ಬೃಂದಾ ಆಚಾರ್ಯ

ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಬೃಂದಾ ಆಚಾರ್ಯ ಇದೀಗ ಮಹಿಳಾ ಪ್ರಧಾನ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಜ್ಯೂಲಿಯಟ್ 2 ಎನ್ನುವ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಲು ಬೃಂದಾ ಆಚಾರ್ಯ ಗ್ರೀನ್ ಸಿಗ್ನಲ್ ನೀಡಿದ್ದು ಇದು ದ್ವಿಭಾಷೆಯಲ್ಲಿ ಸಿದ್ಧಗೊಳ್ಳಲಿರುವುದು ವಿಶೇಷ. ಕನ್ನಡದ ಜೊತೆಗೆ ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ಬರಲಿದ್ದು ಆ ಮೂಲಕ ಪರಭಾಷೆಯ ಸಿನಿಮಾ ಕ್ಷೇತ್ರದಲ್ಲೂ ಬೃಂದಾ ಆಚಾರ್ಯ ಶೈನ್ ಆಗಲಿದ್ದಾರೆ. ಪ್ರೇಮಂ ಪೂಜ್ಯಂ ನಂತರ ಮಗದೊಂದು […]
ಕೆಜಿಎಫ್ ಚಾಪ್ಟರ್ 2: ಪರದೇಶ-ಪರಭಾಷ ಹಕ್ಕುಗಳಿಗೆ ಹೆಚ್ಚುತ್ತಿದೆ ಬೇಡಿಕೆ

ಕೆಜಿಎಫ್, ಹೆಸರು ಕೇಳಿದರೆ ಚಿನ್ನದ ನೆನಪು ಬರುತ್ತಿದ್ದ ಜನರಿಗೆ ಈಗ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮುಂತಾದವರ ನೆನಪಾಗುತ್ತದೆ. ಅದು ಆ ಸಿನಿಮಾ ಹುಟ್ಟುಹಾಕಿದ ಭರವಸೆಗೆ ಸಾಕ್ಷಿ. ಈಗ ಈ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2 ಬಗೆಗಿನ ವಿವಿಧ ಹೊಸ ರೋಮಾಂಚನಕಾರಿ ವಿಷಯಗಳು ಹೊರಬೀಳುತ್ತಿವೆ. ನಮಗೆಲ್ಲ ಗೊತ್ತಿರೋ ಹಾಗೆಯೇ ಕೆಜಿಎಫ್ ಒಂದು ಪಾನ್-ಇಂಡಿಯನ್ ಚಿತ್ರ, ಮಾತ್ರವಲ್ಲದೆ ಪ್ರಪಂಚದ ಪ್ರಾಕೃತಿಕ ಮೂಲೆಗಳಿಂದ, ಭಾಷಾ-ಭೇಧ ಇಲ್ಲದೆ ಎಣಿಸಲಾಗದಷ್ಟು ಸಿನಿಪ್ರೇಮಿಗಳು […]
ಜೇಮ್ಸ್ ಚಿತ್ರವನ್ನ ಒಪ್ಪಿ ಅಪ್ಪಿದ ಸೆನ್ಸರ್ ಬೋರ್ಡ್

ಕರುನಾಡಿನ ಪ್ರತಿಯೊಬ್ಬ ಕನ್ನಡಿಗನೂ ಹಾತೊರೆದು ಎದುರು ನೋಡುತ್ತಿರೋ ಸಿನಿಮಾ ‘ಜೇಮ್ಸ್’. ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ ಜೇಮ್ಸ್ ಅವರದೇ ಜನುಮದಿನವಾದ ಮಾರ್ಚ್ 17ರಂದು ತೆರೆಗೆ ಅಪ್ಪಳಿಸುತ್ತಿರೋದು ನಮಗೆಲ್ಲ ಪರಿಚಿತ ಸುದ್ದಿ. ಚಿತ್ರತಂಡ ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಅಚ್ಚುಕಟ್ಟಾಗಿ ಎಲ್ಲ ಕೆಲಸಗಳನ್ನ ಮಾಡುತ್ತಿದೆ. ಟೀಸರ್ ಬಿಟ್ಟ ಬೆನ್ನಲೇ ಟ್ರೇಡಮಾರ್ಕ್ ಅನ್ನೋ ಹಾಡೊಂದನ್ನ ಬಿಟ್ಟು ಅಭಿಮಾನಿಗಳ ಉತ್ಸಾಹವನ್ನ ಹೆಚ್ಚಿಸಿತ್ತು ಚಿತ್ರತಂಡ. ಪ್ರಮೋಷನ್ ಗಳು, ಸಂದರ್ಶನಗಳು ಎಲ್ಲ ಭರದಿಂದ ಸಾಗುತ್ತಿವೆ. ಇದೀಗ ಚಿತ್ರದ ಸೆನ್ಸರ್ ಪ್ರಕ್ರಿಯೆ ಕೂಡ ಮುಗಿದಿದೆ. […]

