ಏಪ್ರಿಲ್‌ ಒಂದರಿಂದ ರಾಜ್ಯಾದ್ಯಂತ “ಲೋಕಲ್ ಟ್ರೈನ್” ಸಂಚಾರ.

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ “ಲೋಕಲ್ ಟ್ರೈನ್” ಚಿತ್ರ ಇದೇ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‌ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಗಿತ್ತು. ಚಿತ್ರ ಬಿಡುಗಡೆಗೆ ಕೊರೋನ ಕಾರಣವಾಗಿತ್ತು. ಈಗ ಮೊದಲಿನ ವಾತಾವರಣ ಮರುಕಳಿಸಿದ್ದು, ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರಕ್ಕೆ ಸಹಕಾರ ನೀಡಿದ ನಾಯಕ ಡಾರ್ಲಿಂಗ್ ಕೃಷ್ಣ ಆದಿಯಾಗಿ ಸಮಸ್ತರಿಗೂ ಧನ್ಯವಾದ ಅರ್ಪಿಸಿದರು ನಿರ್ಮಾಪಕ ಸುಬ್ರಾಯ ವಾಳ್ಕೆ. ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯದ ನಿಮಿತ್ತವಾಗಿ, ಓದಿನ ಸಲುವಾಗಿ ಸಾಕಷ್ಟು ಜನರು ದಿನ ರೈಲಿನಲ್ಲಿ […]

ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

‘ಜೇಮ್ಸ್‘ ಜತೆ ‘ಬೈರಾಗಿ‘ ಟೀಸರ್…ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್’ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ‘ಬೈರಾಗಿ’ ತಂಡ ತೀರ್ಮಾನಿಸಿದೆ. ‘ಜೇಮ್ಸ್‌’ ಬಿಡುಗಡೆಯಾಗುವ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ ಎಂಬುದು ವಿಶೇಷ. ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ […]

‘ಎದ್ದೇಳು ಮಂಜುನಾಥ 2’,

2009ರಲ್ಲಿ ಬಿಡುಗಡೆಯಾಗಿ ಜನಮನಗೆಲ್ಲಲು ದೊಡ್ಡಮಟ್ಟದಲ್ಲೇ ಯಶಸ್ವಿಯಾಗಿದ್ದ ಚಿತ್ರ ‘ಎದ್ದೇಳು ಮಂಜುನಾಥ’. ಸೋಂಬೇರಿ ಮಂಜ ಹಾಗೇ ಅವನ ಪರಿಶ್ರಮಿ ಧರ್ಮಪತ್ನಿ ಗೌರಿಯ ಕಥೆ ಹೇಳಿದ ಈ ಚಿತ್ರ ನಾಯಕರಾದ ಜಗ್ಗೇಶ್ ಅವರಿಗೂ ನಿರ್ದೇಶಕರಾದ ಗುರುಪ್ರಸಾದ್ ಅವರಿಗೂ ಚಿತ್ರರಂಗದಲ್ಲಿ ಹೊಸತೊಂದು ಬ್ರೇಕ್ ಕೊಟ್ಟಿತ್ತು. ಈಗ ‘ಎದ್ದೇಳು ಮಂಜುನಾಥ’ನ ಸೃಷ್ಟಿಕರ್ತ ಮತ್ತೊಮ್ಮೆ ಮಂಜನನ್ನ ಏಳಿಸಲು ಹೊರಟಿದ್ದಾರೆ. ಆದರೆ ಈ ಬಾರಿ ಜಗ್ಗೇಶ್ ಇಲ್ಲದೆ!!! ಹೌದು,’ಎದ್ದೇಳು ಮಂಜುನಾಥ 2′ ಬರುತ್ತಿದೆ. ಗುರುಪ್ರಸಾದ್ ಅವರೇ ಈ ಸಿನಿಮಾದ ಸೃಷ್ಟಿಕರ್ತರಾದರು ಮೊದಲ ಸಿನಿಮಾಗೂ ಇದಕ್ಕೂ ಯಾವುದೇ […]

ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಸಿಂಪಲ್ ಸುಂದರಿ

ಚಂದನವನದ ಸಿಂಪಲ್ ತಾರೆ ಶ್ವೇತಾ ಶ್ರೀವಾತ್ಸವ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಶ್ವೇತಾ ಈಗ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿಕ್ಕಿಯ ಮೂಗುತಿ ಎಂಬ ಹೊಸ ಸಿನಿಮಾದಲ್ಲಿ ಶ್ವೇತಾ ನಟಿಸುತ್ತಿದ್ದಾರೆ. ಇದೊಂದು ಕಾದಂಬರಿ ಆಧಾರಿತ ಸಿನಿಮಾ ಆಗಿದ್ದು ಗ್ರಾಮೀಣ ಸೊಗಡನ್ನು ಹೊಂದಿದೆ. “ಈ ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದೆ. ಏಕೆಂದರೆ ಇದು ಸಮಾಜದಲ್ಲಿ ಇನ್ನು ಪ್ರಚಲಿತದಲ್ಲಿ ಇರುವ ಸಮಸ್ಯೆಗಳ ಕುರಿತಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ಹೆಣ್ಣು ಶಿಶು […]

ಸಿನಿಮಾದಲ್ಲಿ ಮಾತ್ರವಲ್ಲ ಪ್ರಮೋಷನ್ ನಲ್ಲೂ ಕೂಡ ಇಂಪ್ರೆಸ್ ಮಾಡ್ತಿದ್ದಾರೆ ಕರಾವಳಿ ಬೆಡಗಿ

ಮಂಗಳೂರಿನ ಬೆಡಗಿ ಕಾಲಿವುಡ್ ಹಾಗೂ ಟಾಲಿವುಡ್ ನ ಸ್ಟಾರ್ ನಟಿ ಪೂಜಾ ಹೆಗ್ಡೆ …ಬಿಗ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡು ಪ್ರೇಕ್ಷಕರ ಎದೆಗೆ ಕನ್ನ ಹಾಕಿರುವ ನಟಿ ಪೂಜಾ ಹೆಗ್ಡೆ ಸದ್ಯ ಸಿನಿಮಾಗಳಲ್ಲಿ ಮಾತ್ರವಲ್ಲ ಸಿನಿಮಾದ ಪ್ರಮೋಷನ್ ನಲ್ಲೂ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ … ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಪ್ರವಾಸದ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದಾರೆ ಈ ಸಂದರ್ಭದಲ್ಲಿ ಪೂಜಾ ಹೆಗ್ಡೆ ಧರಿಸುತ್ತಿರುವ […]

ಅವನು ಬಂದೇ ಬರ್ತಾನೆ ಎಂದ ರಿಯಲ್ ಸ್ಟಾರ್

ಚಂದನವನದಲ್ಲಿ ವಿಭಿನ್ನ ನಟ, ನಿರ್ದೇಶಕ,… ಕಥೆಗಳ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುವ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಸನದ ಹೊಸ ಚಿತ್ರ ಮೊದಲ ಪೋಸ್ಟರ್ ರಿಲೀಸ್ ಆಗಿದೆ… ಉಪ್ಪಿ ಸಿನಿಮಾದ ಟೈಟಲ್ ಈ ಬಾರಿಯೂ ಸಿಂಬಲ್ ಆಗಿದ್ದು ಪ್ರೇಕ್ಷಕರು ಯು ಐ ಎಂದು ಟೈಟಲ್ ಅನ್ನು ಓದಿಕೊಳ್ತಿದ್ದಾರೆ..ಪೋಸ್ಟರ್ ನಲ್ಲಿ ಉಪ್ಪಿ ಕುದುರೆ .ಮೇಲೆ‌ ಕೂತಿದ್ದು ಹಿ‌ಂದೆ ಉಪಗ್ರಹದ ಚಿತ್ತಾರ ಕೂಡ ಇದೆ ..ಇನ್ನು ಪೋಸ್ಟರ್ ನಲ್ಲಿ ಇವನು ಯಾವಾಗ ಬರ್ತಾನೆ ಗೊತ್ತಿಲ್ಲ ಆದ್ರೆ ಬಂದೆ ಬರ್ತಾನೆ […]

ತೆರೆದುಕೊಳ್ಳಲು ಸಿದ್ದವಾಗುತ್ತಿದೆ ‘ಕಾಟನ್ ಪೇಟೆ ಗೇಟ್’

ಕನ್ನಡ ಚಿತ್ರರಂಗಕ್ಕೆ ಭರ್ಜರಿ, ಬಹಾದ್ದೂರ್, ದನಕಾಯೋನು ಮುಂತಾದ ಸೂಪರ್ ಹಿಟ್ ಚಿತ್ರಗಳನ್ನ ನೀಡಿರೋ ಆರ್. ಶ್ರೀನಿವಾಸ್ ಅವರ “ಆರ್ ಎಸ್ ಪ್ರೊಡಕ್ಷನ್ಸ್” ಸಂಸ್ಥೆಯ ಇಪ್ಪತ್ತನೇ ಚಿತ್ರ ‘ಕಾಟನ್ ಪೇಟೆ ಗೇಟ್’. ಕನ್ನಡ ಹಾಗು ತೆಲುಗು ಎರಡೂ ಭಾಷೆಗಳಲ್ಲಿ ಒಮ್ಮೆಲೆ ಚಿತ್ರೀಕರಣವಾಗುತ್ತಿರೋ ಈ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣ ಪೇಟ ಗೇಟ್” ಎಂದು ಹೆಸರಿಟ್ಟಿದ್ದಾರೆ. ಬಹುಪಾಲು ಚಿತ್ರೀಕರಣ ಮುಗಿಸಿಕೊಂಡ ಈ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕ್ರೈಂ ಥ್ರಿಲರ್ ಕಥೆಯ ಸಸ್ಪೆನ್ಸ್ ಚಿತ್ರ ಇದಾಗಿದ್ದು, ವೈ ರಾಜಕುಮಾರ್ ಚಿತ್ರಕ್ಕೆ […]

ಮತ್ತೆ ‘RRR’ ಪ್ರಮೋಷನ್ ಕಹಳೆ ಮೊಳಗಿಸಿದ ರಾಜಮೌಳಿ…. ಮಾರ್ಚ್ 14ಕ್ಕೆ ತ್ರಿಬಲ್ ಸಿನಿಮಾದಿಂದ ಮತ್ತೊಂದು ಗಾನಬಜಾನ

ಚಿತ್ರಬ್ರಹ್ಮ ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾಗಾಗಿ ಚಿತ್ರರಸಿಕರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. […]

ಒಂದಿಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಅಭಿಮಾನಿಗಳು!!!!

ಒಬ್ಬ ನಟನ ಅಭಿಮಾನಿಯಾದರೆ ಆತನ ಚಿತ್ರಕ್ಕೆ ಮೊದಲು ಓಡುವುದು ಸಾಮಾನ್ಯ. ಆಸಕ್ತಿಯೇ ಇಲ್ಲದಿರೋ ಸ್ನೇಹಿತರನ್ನ ಕೂಡ ಎಳೆದುಕೊಂಡು ಬಂದು ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಕಣ್ತುಂಬಿಸಿಕೊಳ್ಳುವುದು ಸಹ ಒಂದು ರೀತಿ ಸಾಮಾನ್ಯ ಪ್ರಕ್ರಿಯೆಯೇ. ಆದರೆ ತಮಗಿಷ್ಟವಾದ ನಟನ ಸಿನಿಮಾಗಾಗಿ ಒಂದಿಡೀ ಚಿತ್ರಮಂದಿರದಲ್ಲಿರೋ ಎಲ್ಲ ಸೀಟುಗಳನ್ನು ಖರೀದಿಸಿದರೆ, ಆ ಅಭಿಮಾನಕ್ಕೆ ಏನೆನ್ನಬಹುದು. ಇಂತಹ ಒಬ್ಬ ಅಭಿಮಾನಿ ಈಗ ಪತ್ತೆಯಾಗಿದ್ದಾರೆ. ದಕ್ಷಿಣ ಭಾರತದ ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ RRR ಇದೇ ಮಾರ್ಚ್ 25ರಂದು ತೆರೆಕಾಣುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಟೋಲಿವುಡ್ […]

‘ಜುಗಲ್ ಬಂದಿ’ ಸಿನಿಮಾದ ಮೊದಲ ಹಾಡು ಬಿಡುಗಡೆ

ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡ್ತಿರುವ ಜುಗಲ್ ಬಂದಿ ಸಿನಿಮಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಸುದ್ದಿ ಮಾಡುತ್ತಿದೆ. ರಿಲೀಸ್ ಗೂ ಮೊದಲೇ ಭಾರೀ ಮೊತ್ತಕ್ಕೆ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿ ಗಮನಸೆಳೆದಿದ್ದ ಜುಗಲ್ ಬಂದಿ ಸಿನಿಮಾ ಅಂಗಳದಿಂದ ಮನಮುಟ್ಟುವ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ. ಇಂಥವರ ಸಂತಾನ ಭಾಗ್ಯ ಎಂದು ಶುರುವಾಗುವ ಅದ್ಭುತ ಸಾಹಿತ್ಯ ಎಂತಹ ಕಲ್ಲು ಮನಸನ್ನು ಕರಿಸುವಂತಿದೆ. ನಿರ್ದೇಶಕ ದಿವಾಕರ್ ಅವರು ಪೊಣಿಸಿರುವ ಅರ್ಥಪೂರ್ಣ ಸಾಲುಗಳಿಗೆ […]