ಟಕ್ಕರ್ ನೀಡಲು ಬರುತ್ತಿದ್ದಾರೆ ರಂಜನಿ

ನಟಿ ರಂಜನಿ ರಾಘವನ್ ಹಾಗೂ ನಟ ಮನೋಜ್ ಅಭಿನಯದ “ಟಕ್ಕರ್” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೊರೋನಾ ವೈರಸ್ ನ ಹಾವಳಿಯಿಂದಾಗಿ ಎರಡು ಬಾರಿ ಟಕ್ಕರ್ ಸಿನಿಮಾ ಬಿಡುಗಡೆಯಾಗುವುದು ಮುಂದಕ್ಕೆ ಹೋಗಿತ್ತು. ಇಲ್ಲ ಎಂದಿದ್ದರೆ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ಇದೀಗ ಚಿತ್ರದ ಬಿಡುಗಡೆಯೂ ಕೊರೊನಾದಿಂದಾಗಿ ತಡವಾಗಿದೆ. ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರವು ಸೈಬರ್ ಕ್ರೈಂ ಗೆ ಸಂಬಂಧಿಸಿದ್ದಾಗಿದೆ. ಥ್ರಿಲ್ಲರ್ ಜೊತೆಗೆ ಭರ್ಜರಿ ಆಕ್ಷನ್ ಈ ಸಿನಿಮಾದ ಹೈಲೈಟ್ ಹೌದು. ಇದರ ಜೊತೆಗೆ […]

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಯುವನಟ ದುಷ್ಯಂತ್

ಸಿಂಪಲ್ ಸುನಿ ಅವರ ಮುಂದಿನ ಚಿತ್ರ ‘ಗತವೈಭವ’ ಈಗಾಗಲೇ ಜನಪ್ರಿಯತೆ ಪಡೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಸಿನಿಮಾದ ಕಡೆಯಿಂದ ಈಗಾಗಲೇ ಬಿಡುಗಡೆಯಾಗಿರುವಂತಹ ‘ಹೀರೋ ಲಾಂಚ್ ವಿಡಿಯೋ’ ಹಾಗು ಅದರ ಇನ್ನಷ್ಟು ತುಣುಕುಗಳನ್ನೊಳಗೊಂಡ ವಿಡಿಯೋ ಎರಡೂ ಸಹ ಜನರನ್ನ ತನ್ನತ್ತ ಬಹುವಾಗಿ ಆಕರ್ಷಿಸಿದ್ದವು. ಈ ಚಿತ್ರದ ಮೂಲಕ ಸುನಿ ಹೊಸ ನಾಯಕರೊಬ್ಬರನ್ನ ತೆರೆಮೇಲೆ ತರಲಿದ್ದಾರೆ. ಅವರೇ ದುಷ್ಯಂತ್ ಶ್ರೀನಿವಾಸ್. ಟೀಸರ್ ಗಳಲ್ಲಿನ ತಮ್ಮ ಅಭಿನಯದಿಂದ ಜನಮಾನಸದೊಳಗಿಳಿದಿರುವ ದುಷ್ಯಂತ್ ಸದ್ಯ ಹುಟ್ಟುಹಬ್ಬದ ಸಡಗರದಲ್ಲಿದ್ದಾರೆ. ಮಾರ್ಚ್ 14ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡ ಇವರು, […]

ಕುತೂಹಲವನ್ನೇ ಕೆರಳಿಸದ ಒಂದು ಥ್ರಿಲರ್ ಕಥೆ.

ತನ್ನ ನಟನೆಯಿಂದಲೇ ಎಂತಹ ಕಥೆಯನ್ನು ಕೂಡ ಆಕರ್ಷಣೀಯವಾಗಿಸಬಲ್ಲ ನಾಯಕನಟ. ಚೋಚ್ಚಲ ಚಿತ್ರದಲ್ಲೇ ಅಪಾರ ಪ್ರಶಂಸೆ ಗಳಿಸಿದ್ದಂತ ನಿರ್ದೇಶಕ. ಈ ಇಬ್ಬರು ಒಂದಾಗಲಿದ್ದಾರೆ ಎಂದಾಗ ಹುಟ್ಟಿದಂತ ನಿರೀಕ್ಷೆಗಳು ಮುಗಿಲು ಮುಟ್ಟಿತ್ತು. ಆದರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕಾದಿದ್ದು ಒಂದಷ್ಟು ಅಸಮಾಧಾನವಷ್ಟೇ!! ಮಾರನ್, ಇದು ‘D-16’ ಸಿನಿಮಾ ಖ್ಯಾತಿಯ ನಿರ್ದೇಶಕ ಕಾರ್ತಿಕ್ ನರೇನ್ ಅವರ ಸಿನಿಮಾ. ತಮಿಳಿನ ಪ್ರಖ್ಯಾತ, ಪ್ರಭುದ್ದ ನಟರಲ್ಲಿ ಒಬ್ಬರಾದಂತ ಧನುಷ್ ಅವರು ನಾಯಕರಾಗಿ, ಮಾಳವಿಕ ಮೋಹನನ್ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯಮೂರ್ತಿ ಒಬ್ಬ ಸತ್ಯತತ್ವದ […]

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿದ ಯಾಮಿ ಗೌತಮ್ ಹೇಳಿದ್ದೇನು ಗೊತ್ತಾ?

ಮೊನ್ನೆಯಷ್ಟೇ ರಿಲೀಸ್ ಆಗಿ ಭಾರತೀಯರ ಮನಗೆದ್ದಿರುವ “ದಿ ಕಾಶ್ಮೀರಿ ಫೈಲ್ಸ್ ” ಸಿನಿಮಾದ ಬಗ್ಗೆ ಎಲ್ಲರೂ ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲ ಈಗಾಗಲೇ ಈ ಚಿತ್ರ ನೋಡಿರುವ ಹಲವು ಸೆಲೆಬ್ರಿಟಿಗಳು ಕೂಡ ಈ ಸಿನಿಮಾದ ಕಥೆಗೆ ಫಿದಾ ಆಗಿದ್ದರೂ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಕೂಡಾ ಸಿನಿಮಾವನ್ನು ಮನಸಾರೆ ಮೆಚ್ಚಿದ್ದಾರೆ. ಕರ್ನಾಟಕ ಸೇರಿದಂತೆ ಗುಜರಾತ್, ಹರಿಯಾಣ ಹಾಗೂ ಮಧ್ಯಪ್ರದೇಶಗಳಲ್ಲಿಯೂ ವಿನಾಯಿತಿ ಘೋಷಿಸಲಾಗಿದೆ. “ದಿ ಕಾಶ್ಮೀರಿ ಫೈಲ್ಸ್ ” ಚಿತ್ರ ನೋಡಿದ ಹಲವು ಸೆಲೆಬ್ರಿಟಿಗಳು ಹಾಗೂ ವಿಮರ್ಶಕರು […]

ಒಟಿಟಿಗೆ ಬಂತು ಲವ್ ಮೊಕ್ಟೇಲ್ 2

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಲವ್ ಮೊಕ್ಟೇಲ್ 2’ ಚಿತ್ರಮಂದಿರಗಳಲ್ಲಿ ಜನರ ಮನಗಳನ್ನು ಕದಿಯುವಲ್ಲಿ ಯಶಸ್ವಿಯಾಗಿತ್ತು. ಫೆಬ್ರವರಿ 11ರಂದು ಬಿಡುಗಡೆಯಾದ ಈ ಚಿತ್ರ ಈಗಲೂ ಕೂಡ ಚಿತ್ರಮಂದಿರಗಳಲ್ಲಿ ಲಭ್ಯವಿದೆ. ಬೆಳ್ಳಿತೆರೆ ಮೇಲೆ ಆದಿ-ನಿಧಿ ಜೋಡಿಯ ಪ್ರೇಮಕಥೆಯ ಮುಂದುವರೆದ ಭಾಗವನ್ನು ನೋಡಲು ಜನ ಚಿತ್ರಮಂದಿರಗಳಲ್ಲಿ ತುಂಬಿತುಳುಕಿದ್ದರು. ಮೊದಲ ಭಾಗವಾದ ‘ಲವ್ ಮೊಕ್ಟೇಲ್’ ನೋಡಿ ಮುಂದಿನ ಅಧ್ಯಾಯಕ್ಕೆಂದು ಚಿತ್ರಮಂದಿರಕ್ಕೇ ಬಂದ ಪ್ರತಿಯೊಬ್ಬ ಪ್ರೇಕ್ಷಕನ ಮನಸೆಳೆಯುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು. ಈಗ ಈ ಸಿನಿಮಾವನ್ನ ಮನೆಯಲ್ಲೇ ಕೂತು ನೋಡಬಹುದಾಗಿದೆ. […]

ಲೂಸ್ ಮಾದ ಈಗ “ಕಿರಿಕ್ ಶಂಕರ್”.

ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ” ಕಿರಿಕ್ ಶಂಕರ್ ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್.ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ. ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿಬಂದಿದೆ. ಇದೇ ಏಪ್ರಿಲ್ […]

ಕಾಶ್ಮೀರದಲ್ಲಿ ಧ್ರುವ ಸರ್ಜಾ ಸಾಹಸ

ಕೊರೆವ ಛಳಿಯಲ್ಲಿ ಮಾರ್ಟಿನ್ ಆ್ಯಕ್ಷನ್ ಎ.ಪಿ. ಅರ್ಜುನ್‌ ನಿರ್ದೇಶನದ ಅದ್ಧೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಧ್ರುವ ಸರ್ಜಾ, ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವ ಚಿತ್ರ ಮಾರ್ಟಿನ್. ವಾಸವಿ ಎಂಟರ್ ಪ್ರೈಸಸ್ ಮೂಲಕ ಉದಯ್ ಕೆ.ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಕನ್ನಡ, ತೆಲುಗು, ತಮಿಳು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣ ಈಗ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಒಂದು ವಾರದಿಂದ ನಡೆಯುತ್ತಿದೆ. ಕಳೆದ ೮ […]

ನಿರೀಕ್ಷೆ ಹುಟ್ಟಿಸಿದ ಚಕ್ರವರ್ತಿ ಚಂದ್ರಚೂಡ್ ಮತ್ತು ಪವಿತ್ರಾ ಜೋಡಿ

ಹರಳು ಮಾಫಿಯಾದ ಅಪರೂಪದ ಕಂಟೆಟ್ ಹೊತ್ತ ಮೇಲೊಬ್ಬ ಮಾಯಾವಿ’ ಚಿತ್ರ 2022ರ ಎಪ್ರಿಲ್ 29ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲು ದಂಧೆಯ ಕರಾಳಮುಖವನ್ನು ತಮ್ಮ ಪಾತ್ರದ ಮೂಲಕ ಬಿಚ್ಚಿಡಲಿದ್ದಾರೆ.ಮೇಲೊಬ್ಬ ಮಾಯಾವಿ’ ಚಿತ್ರದ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಹಾಡುಗಳ ಸಾಹಿತ್ಯ ಮತ್ತು ಸಂಗೀತದಿAದ ಪ್ರೇಕ್ಷಕರನ್ನು ತಲುಪುವಲ್ಲಿ ಸಫಲವಾಗಿದೆ. ಚಿತ್ರದಲ್ಲಿ ರಂಗಭೂಮಿ […]

ವೇದಿಕೆ ಮೇಲೆಯೇ ಕಣ್ಣೀರಿತ್ತ ಶಿವಣ್ಣ

ಮಾರ್ಚ್ 13ರಂದು ಅದ್ದೂರಿಯಾಗಿ ‘ಜೇಮ್ಸ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆದಿರುವುದು ನಮಗೆಲ್ಲ ಗೊತ್ತಿರೋ ವಿಷಯ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಲ್ಲಿ ಭಾವುಕರಾಗದ ನಟ-ನಟಿಯರಿಲ್ಲ. ಅರ್ಧ ದಾರಿಯಲ್ಲೇ ಅಗಲಿಹೋದ ಅಪ್ಪುವನ್ನು ನೆನೆದು ಕಂಬನಿಮಿಡಿಯದ ಹೃದಯವೇ ಇಲ್ಲ ಎನ್ನಬಹುದು. ಇನ್ನು ಅವರ ಸ್ವಂತ ಮನೆಯವರ ಸ್ಥಿತಿ ವಿವರಿಸುವುದು ಕಷ್ಟಸಾಧ್ಯ. ವೇದಿಕೆ ಮೇಲೆ ಬಂದು ಮಾತನಾಡಿದ ಶಿವಣ್ಣ ರಾಘಣ್ಣ ಇರ್ವರೂ ಕಣ್ತುಂಬಿಕೊಂಡೆ ಕೆಳಗಿಳಿದರು. ಅಪ್ಪುವಿನ ಬಗ್ಗೆ ಗದ್ಗದ ಕಂಠದಿಂದಲೇ ಮಾತನಾಡಿದ ಶಿವಣ್ಣ, “ಅಪ್ಪುವನ್ನು ‘ಪ್ರೇಮದ ಕಾಣಿಕೆ’ ಚಿತ್ರದಿಂದಲೂ ನೋಡಿಕೊಂಡೆ ಬಂದಿದ್ದೇವೆ. ಇಂದು ಅವನು […]

ಪುನೀತ್ ಬದಲಿಗೆ ಬಣ್ಣ ಹಚ್ಚಲಿರೋ ವಿರಾಟ್

ಅಪ್ಪು ಉಸಿರಿನೊಂದಿಗೇ ಸಿನಿಮಾವಾಗದೆ ನಿಂತುಹೋದ ಕಥೆಗಳಿಗೆ ಲೆಕ್ಕವೇ ಇಲ್ಲ. ಅಪ್ಪುವಿಗಾಗೇ ಬರೆದಂತ ಅದೆಷ್ಟೋ ಪುಟದ ಡೈಲಾಗ್ ಗಳನ್ನು ಬೇರೆಯವರ ಕೈಮೇಲೆ ಇಡಬೇಕಾಗಿ ಕೂಡ ಬಂತು. ಪುನೀತ್ ರಾಜಕುಮಾರ್ ಗೆ ಒಮ್ಮೆಯಾದರು ಒಂದು ಸಿನಿಮಾವನ್ನ ನಿರ್ದೇಶಿಸಬೇಕೆಂದು ಕನಸು ಕಂಡಿದ್ದ ಅದೆಷ್ಟೋ ನಿರ್ದೇಶಕರ ಕಂಗಳಿಗೆ ಮರಳೆರಚಿದಂತಾಯಿತು. ನಮ್ಮಗಲಿ ಹೋದ ಅಪ್ಪು ತಮ್ಮ ಜೊತೆಗೆ ಒಂದು ಹುರುಪಿನ ಮಹಾಸಾಗರವನ್ನೇ ಕರೆದುಕೊಂಡು ಹೋದರೆಂದರೆ ತಪ್ಪಾಗಲಾಗದು. ಈಗ ಇಂತಹ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯೊಂದಾಗಿದೆ. ಕನ್ನಡದ ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಅವರು ಪುನೀತ್ […]