ಕುಸ್ತಿ ಗರಡಿಯ ಅಖಾಡಕ್ಕಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಗರಡಿ ಸಿನಿಮಾದ ಚಿತ್ರೀಕರಣ ನಿನ್ನೆಯಿಂದ ಶುರುವಾಗಿದೆ… ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ಅಭಿನಯ ಮಾಡುತ್ತಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ .. ಇನ್ನು ಸಿನಿಮಾವನ್ನ ಬಿಸಿ ಪಾಟೀಲ್ ನಿರ್ಮಾಣ ಮಾಡುವುದರ ಜೊತೆಗೆ ಚಿತ್ರದಲ್ಲಿ ಒಂದು ಪಾತ್ರವನ್ನು ಕೂಡ ನಿರ್ವಹಿಸುತ್ತಿದ್ದಾರೆ… ನಿನ್ನೆಯಿಂದ ಚಿತ್ರೀಕರಣ ಶುರುವಾಗಿದ್ದು ಸಿನಿಮಾದ ಸೆಟ್ ಗೆ ನಟ ದರ್ಶನ್ ಭೇಟಿ ಕೊಟ್ಟಿದ್ದಾರೆ… ಮೊದಲ ದಿನದ ಚಿತ್ರೀಕರಣವನ್ನ ಕೆಲವು ಗಂಟೆಗಳ ಕಾಲ ಕೂತು ವೀಕ್ಷಣೆ ಮಾಡಿದ ದರ್ಶನ್ […]
ಬಹುದಿನದ ಕನಸು ನನಸಾಯಿತು ಎಂದ ಬಾಲಿವುಡ್ ನಟಿ

ಅಜಿತ್ ನಟನೆಯ ವಲಿಮೈ ಚಿತ್ರ ಕಳೆದ ವಾರ ಬಿಡುಡೆಯಾಗಿ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ಅಜಿತ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಹುಮಾ ಖುರೇಶಿ ನಟಿಸಿದ್ದಾರೆ. ಅಜಿತ್ ಅವರ ಅಭಿಮಾನಿಗಳು ತೋರುತ್ತಿರುವ ಪ್ರೀತಿಯನ್ನು ಕಂಡ ಹುಮಾ ಕಂಪ್ಲೀಟ್ ಫಿದಾ ಆಗಿದ್ದಾರೆ. ಎಚ್. ವಿನೋತ್ ನಿರ್ದೇಶನದ ವಲಿಮೈ ಚಿತ್ರದಲ್ಲಿ ಹುಮಾ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಅಜಿತ್ ಅವರ ಅಭಿಮಾನಿಗಳ ಪ್ರೀತಿಗೆ ನಾನು ಮನಸೋತಿದ್ದೇನೆ. ಅಭಿಮಾನಿಗಳು ಅಜಿತ್ ಮೇಲೆ ತೋರಿಸುತ್ತಿರುವ ಪ್ರೀತಿ ಕಂಡು ನಾನು ಆಶ್ಚರ್ಯ ಚಕಿತಳಾಗಿದ್ದೇನೆ. […]
ನೂರು ಮಿಲಿಯನ್ ವೀಕ್ಷಣೆ ಪಡೆದ ಈ ಹಾಡು ಯಾವುದು ಗೊತ್ತಾ?

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾದ “ಏನಮ್ಮಿ ಏನಮ್ಮಿ”ಹಾಡು ಈಗ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸಂಭ್ರಮದಲ್ಲಿ ಇರುವ ಚಿತ್ರತಂಡ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು. “ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ ಮಾಡುತ್ತಾರೆ. 100 ದಿನ ಸಿನಿಮಾ ಓಡಿದರೆ ಆಚರಣೆ ಮಾಡುತ್ತಾರೆ. ಆದರೆ ಹಾಡು 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವುದಕ್ಕೆ ಮಾಡುತ್ತಿರುವುದು ತುಂಬಾ ವಿಶೇಷ. ಗಾಯಕ ಹಾಗೂ ಸಂಗೀತ ನಿರ್ದೇಶಕರಿಗೆ ಅವರ ಹಾಡುಗಳಿಂದ ಇಂತಹ ಕ್ರೆಡಿಟ್ ಸಿಗಬಹುದು. ಆದರೆ ನಟನಟಿಗೆ ಇದು ಗ್ರೇಟ್ “ಎಂದಿದ್ದಾರೆ […]
ಹೊಟ್ಟೆ ಹುಣ್ಣಾಗಿಸದಿದ್ದರೂ ನಗಿಸೋ ‘ಓಲ್ಡ್ ಮಂಕ್’

“ದೊಡ್ಡ flashback ಗೆ ಟೈಮ್ ಇಲ್ಲ”, “ವಿಲನ್ ಬರ್ತಿದಾನೆ ಮ್ಯೂಸಿಕ್ ಹಾಕು” ಈ ರೀತಿಯ ಹಲವಾರು ಸಣ್ಣ ಪುಟ್ಟ ಸಂಭಾಷಣೆಗಳು ಥೀಯೇಟರ್ ನಿಂದ ಹೊರಬಂದಮೇಲೂ ನಮ್ಮ ತಲೆಯಲ್ಲಿ ಗುನುಗುಟ್ಟುತಿತ್ತು. ಕಾರಣ ಶ್ರೀನಿ ಅಕಾ ಎಂ. ಜಿ. ಶ್ರೀನಿವಾಸ್ ನಿರ್ದೇಶನದ ‘ಓಲ್ಡ್ ಮಂಕ್’ ಚಿತ್ರ. ಎಣ್ಣೆ ಬ್ರಾಂಡಿನ ಹೆಸರಿನ ಈ ಚಿತ್ರ ಕಿಕ್ ಅಂತೂ ಖಂಡಿತವಾಗಿ ಕೊಟ್ಟಿತ್ತು. ಆದರೆ ಶ್ರೀನಿ ಅಭಿಮಾನಿಗಳಿಗೆ ತಕ್ಕಮಟ್ಟಿನ ನಿರಾಸೆ ಆಗಿದ್ರು ಆಗಿರಬಹುದು. ಶ್ರೀನಿ ಕನ್ನಡದ ಅತಿ ಚಾಣಾಕ್ಷ ಯುವನಿರ್ದೇಶಕರಲ್ಲಿ ಒಬ್ಬರು. ಇವರ ಕ್ರಿಯೇಟಿವ್ […]
ಲವ್ ಮೊಕ್ಟೈಲ್ 2 ಸಕ್ಸಸ್ ಸ್ಟೋರಿಲೊಂದು ಟ್ವಿಸ್ಟ್…

ಲವ್ ಮೊಕ್ಟೈಲ್ 2020ರ ಕೋರೋನ ಕಾಲದಲ್ಲಿ ಚಿಂತೆಗಳ ಜೊತೆಗೆ ಮನದಲ್ಲಿ ಉಳಿದು ಜನರಿಗೆ ಒಂದಷ್ಟು ನೆಮ್ಮದಿ ಕೊಟ್ಟಿದ್ದಂತ ಚಿತ್ರ. ಎಲ್ಲ ಬಗೆಯ ಪ್ರೇಕ್ಷಕರನ್ನು ಎಲ್ಲ ಬಗೆಯ ಕಲಾರಸಿಕರನ್ನು ಒಮ್ಮೆಗೆ ತನ್ನತ್ತ ಸೆಳೆದು ಕಣ್ಣು ತುಂಬಿಸಿ ಕಳಿಸಿತ್ತು. ಈ ಚಿತ್ರದ ಯಶಸ್ಸಿನ ಕಥೆ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ಇದರ ಹಿಂದೆ ಡಾರ್ಲಿಂಗ್ ಕೃಷ್ಣ-ಮಿಲನ ಕೃಷ್ಣ ಜೋಡಿಯ ಪರಿಶ್ರಮ ಕೂಡ ಎಲ್ಲರಿಗೂ ಪರಿಚಿತ. ಅದೇ ಹುಮ್ಮಸ್ಸಿನಲ್ಲಿ ಈ ಜೋಡಿ ಇದೀಗ ಅದರ ಮುಂದಿನ ಭಾಗವನ್ನು ಬಿಡುಗಡೆಗೊಳಿಸಿದ್ದು ಚಿತ್ರಮಂದಿರಗಳಲ್ಲಿ ‘ಲವ್ ಮೊಕ್ಟೇಲ್ 2’ […]
ಇದು ಸವಾಲಿನ ಪಾತ್ರ ಎಂದ ಡಿಂಪಲ್ ಕ್ವೀನ್… ಯಾವ ಪಾತ್ರ ಗೊತ್ತಾ?

ಪ್ರೇಮ್ ನಿರ್ದೇಶನದ ಚಿತ್ರ ಎಲ್ಲೆಡೆ ಕ್ರೇಜ್ ಮೂಡಿಸುತ್ತಿದೆ. ತನ್ನ ಸಂಗೀತದಿಂದ ಗಮನ ಸೆಳೆಯುತ್ತಿರುವ ಚಿತ್ರದಲ್ಲಿ ಹೊಸ ನಟರು ನಟಿಸುತ್ತಿದ್ದಾರೆ. ರಾಣಾ ಹಾಗೂ ರೀಷ್ಮಾ ನಾಣಯ್ಯ ಈ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಹಿಂದಿನ ಚಿತ್ರಗಳಲ್ಲಿ ಮಾಡಿರದ ಪಾತ್ರವನ್ನು ಮಾಡಲಿದ್ದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕ್ರೆಡಿಟ್ ಅನ್ನು ಸಿನಿಮಾ ತಂಡಕ್ಕೆ ನೀಡಿರುವ ರಚಿತಾ “ಪ್ರೇಮ್ ಸರ್ ತಮ್ಮ ಕೆಲಸದಲ್ಲಿ ತುಂಬಾ ತಲ್ಲೀನರಾಗಿರುತ್ತಾರೆ. ಅವರ ಪ್ಯಾಶನ್ ಏಕ್ […]
ದರ್ಶನ್ ಸಿನಿಮಾದ ರೇಂಜೇ ಬೇರೆ…

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ… ಇತ್ತೀಚೆಗಷ್ಟೇ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು…ಬರ್ತಡೆ ದಿನ ದರ್ಶನ್ ಅವ್ರ ಸಾಕಷ್ಟು ಚಿತ್ರಗಳು ಅನೌನ್ಸ್ ಆಗಿದೆ…ಈಗಾಗಲೇ ಕ್ರಾಂತಿ , ತರುಣ್ ನಿರ್ದೇಶನದ ಸಿನಿಮಾ ಅದರೊಟ್ಟಿಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ … ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಕ್ಕಪಕ್ಕದ ಇಂಡಸ್ಟ್ರಿಗೂ ಪರಿಚಿತರಾಗಿರುವ ದರ್ಶನ್ ಅವರ ಸಿನಿಮಾವನ್ನ ಚೆನ್ನೈನ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದೆ… […]
ದರ್ಶನ್ 56ನೇ ಸಿನಿಮಾದ ಸ್ಪೆಷಾಲಿಟಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56ನೇ ಸಿನಿಮಾ ಅನೌನ್ಸ್ ಆಗಿದೆ…ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು ಸಿನಿಮಾದ ಟೈಟಲ್ ಅನ್ನು ಬಿಟ್ಟುಕೊಟ್ಟಿಲ್ಲ ಸಿನಿಮಾತಂಡ… ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಪ್ರತಿಷ್ಠಿತ ರಾಕ್ ಲೈನ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ನಾಯಕರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ. ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. D56 ಎಂಬ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕ […]
ಜೇಮ್ಸ್ ಹಾರೈಸಲು ಒಂದಾಗಲಿದ್ದಾರೆ ಎರಡು ಚಿತ್ರರಂಗದ ಗಣ್ಯರು

ಕನ್ನಡಿಗರ ಮನದಲ್ಲೇ ಮನೆಮಾಡಿಕೊಂಡಿರೋ ಕರುನಾಡ ಯುವರತ್ನ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ “ಜೇಮ್ಸ್” ಇದೇ ಮಾರ್ಚ್ 17ರಂದು ಬೆಳ್ಳಿತೆರೆಯನ್ನ ಬೆಳಗಲಿರೋ ವಿಷಯ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ನಮ್ಮನ್ನಗಲಿದ್ದರೂ ನಮ್ಮೊಳಗೇ ಜೀವಿಸುತ್ತಿರೋ ಅಪ್ಪುವನ್ನ ಕೊನೆಯ ಬಾರಿ ಹೊಸದೊಂದು ರೂಪದಲ್ಲಿ ಕಣ್ತುಂಬಿಸಿಕೊಳ್ಳಲು ನಾವೆಲ್ಲರೂ ಹಾತೊರೆದು ಕಾಯುತ್ತಿದ್ದೇವೆ. ಚಿತ್ರತಂಡದವರೂ ಸಹ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಲ್ಲ ತರನಾದ ತಯಾರಿ ನಡೆಸುತ್ತಲೇ ಇದ್ದಾರೆ. ಇದೀಗ “ಜೇಮ್ಸ್” ಬಂಧುಗಳಿಂದ ಚಿತ್ರದ ಬಿಡುಗಡೆ-ಪೂರ್ವ ಕಾರ್ಯಕ್ರಮದ ಬಗೆಗಿನ ಸಂತಸ ತುಂಬೋ ವಿಷಯಗಳು ಹೊರಹೊಮ್ಮುತ್ತಿವೆ. ಮಾರ್ಚ್ […]
ಶಿರಸಿ ಹುಡುಗ ನಟೇಶ್ ಹೆಗಡೆ ಹೊಸ ಪ್ರಯತ್ನ “ಪೆದ್ರೊ”.

ಶಿರಸಿ ಮೂಲದ ನಟೇಶ್ ಹೆಗಡೆ ಮಾಡಿದ ಕೆಲವು ಕಿರುಚಿತ್ರಗಳು ಜನಪ್ರಿಯವಾಗಿದೆ. ಇವರ ಒಂದು ಕಿರುಚಿತ್ರ ವೀಕ್ಷಿಸಿದ ರಾಜ್ ಬಿ ಶೆಟ್ಟಿ, ನಟೇಶ್ ಅವರನ್ನು ಸಂಪರ್ಕಿಸುತ್ತಾರೆ. ನಟೇಶ್ ಅವರ ಪ್ರತಿಭೆ ಬಗ್ಗೆ ರಿಷಭ್ ಶೆಟ್ಟಿ ಅವರ ಬಳಿ ಹೇಳಿದಾಗ, ರಿಷಭ್ ” ಪೆದ್ರೊ”ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾರೆ. ಈ ಚಿತ್ರ ನಿರ್ಮಾಣವಾಗಿ ವಿವಿಧ ದೇಶಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸಗಳಲ್ಲಿ ಪ್ರದರ್ಶನಗೊಂಡಿದೆ. ಸದ್ಯದಲ್ಲೇ ಕರ್ನಾಟಕದ ಚಿತ್ರಮಂದಿರಗಳಲ್ಲೂ “ಪೆದ್ರೊ” ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಅನ್ನುಹೆಸರಾಂತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿದರು. […]

