ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕ ಅರ್ಜುನ್ ಕುಮಾರ್ಗೆ ಮೆಚ್ಚುಗೆಯ ಮಹಾಪೂರ

ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ. 16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲ ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್ ಅವರ ಕೆಲಸಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ, ಸೌತ್ ಸಿನಿ ಇಂಡಸ್ಟ್ರಿಯ ಹಲವು ದಿಗ್ಗಜರಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ. ಲಿಖಿತ್ ಶೆಟ್ಟಿ, ಅಮೃತಾ […]

ಮತ್ತೆ ನಿರ್ದೇಶನದತ್ತ ದುನಿಯ ವಿಜಯ್ ಚಿತ್ತ

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತೆ ನಿರ್ದೇಶನ ಮಾಡಲು ಮನಸ್ಸು ಮಾಡಿದ್ದಾರೆ… ಹೌದು ಇತ್ತೀಚಿಗಷ್ಟೆ ಬಿಡುಗಡೆಯಾದ ಸಲಗ ಸಿನಿಮಾವನ್ನ ದುನಿಯಾ ವಿಜಯ್ ನಿರ್ದೇಶನ ಮಾಡುವುದರ ಜೊತೆಗೆ ನಟಿಸಿದ್ದರು… ಈಗ ಮತ್ತೆ ದುನಿಯಾ ವಿಜಯ್ ಮತ್ತೊಂದು ಸಿನಿಮಾವನ್ನ ನಿರ್ದೇಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ… ಹೌದು ದುನಿಯಾ ವಿಜಿ ಅಭಿನಯದ ಇಪ್ಪತ್ತೆಂಟನೇ ಸಿನಿಮಾವನ್ನ ಸ್ವತಃ ವಿಜಯ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ…ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು ಇದೊಂದು ಮಾಸ್ ಕಂಟೆಂಟ್ ಇರುವ ಸಿನಿಮಾ ಅನ್ನೋದು ಪೋಸ್ಟರ್ […]

ಮಲೆಯಾಳಂ ಸೂಪರ್ ಹಿಟ್ ಚಲನಚಿತ್ರ “ಫೋರೆನ್ಸಿಕ್” ಈಗ ಕನ್ನಡಕ್ಕೆ ಎಂಟ್ರಿ

ಮಲೆಯಾಳಂ ನಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚು ಬರುತ್ತದೆ ಎಂಬ ಮಾತು ಎಲ್ಲೆಡೆ ಇದೆ. ಆ ಪೈಕಿ ವಿಭಿನ್ನ ಕಥಾಹಂದರ ಹೊಂದಿರುವ “ಫೋರೆನ್ಸಿಕ್” ಚಿತ್ರವೂ ಒಂದು. ಈ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರ ನೋಡಿ ಪ್ರಭಾವಿತರಾದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು “ಅಂತಿಮ‌ ಕ್ಷಣ” ಎಂಬ ಹೆಸರಿನಿಂದ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ‌ತಿಳಿಯಲಿದೆ. ಅಖಿಲ್ ಪೌಲ್ ಹಾಗೂ ಅನಾಸ್ […]

ಪೊಲೀಸ್ ಅಧಿಕಾರಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಓಟಿಟಿ ಸ್ಟಾರ್

ಬಹುಮುಖ ಪ್ರತಿಭೆ ಡ್ಯಾನಿಶ್ ಸೇಠ್ ಅವರು ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಗುರುತಿಸಿಕೊಂಡವರು. ಪ್ರಾಂಕ್ ಕಾಲ್ ಗಳ ಮೂಲಕ ದೇಶದಾದ್ಯಂತ ಫೇಮಸ್ ಆಗಿದ್ದ ಡ್ಯಾನಿಶ್ ಸೋಶಿಯಲ್ ಮೀಡಿಯಾ ಮೂಲಕ ಹಲವು ಪಾತ್ರಗಳನ್ನು ಸೃಷ್ಟಿಸಿ ಹಾಸ್ಯದ ಮೂಲಕ ಜನಪ್ರಿಯತೆ ಗಳಿಸಿದ ಪ್ರತಿಭಾವಂತ. ಇಂತಿಪ್ಪ ಡ್ಯಾನಿಶ್ ಸೇಠ್ ಪುಷ್ಕರ್ ಮಲ್ಲಿಕಾರ್ಜುನ್ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದ “ಹಂಬಲ್ ಪೊಲಿಟಿಶಿಯನ್ ನೊಗರಾಜ್” ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. ಮೊದಲ ಸಿನಿಮಾದಲ್ಲಿಯೇ ಸಿನಿಪ್ರಿಯರನ ಸೆಳೆದ ಡ್ಯಾನಿಶ್ ಪಿಆರ್ ಕೆ […]

ಪ್ರಶಸ್ತಿ-ಪುರಸ್ಕಾರಗಳೆಡೆಗೆ ಸಾಗುತ್ತಿರೋ ‘ಗರುಡ ಗಮನ’

“ಗರುಡ ಗಮನ ವೃಷಭ ವಾಹನ”, 2021ರ ಅಂತ್ಯದ ಹೊತ್ತಿಗೆ ಎಲ್ಲರ ಮನೆಮಾತ್ತಾಗಿದ್ದ ಸಿನಿಮಾ. ತನ್ನ ಕಥೆ, ಚಿತ್ರಕಥೆ, ಸಂಭಾಷಣೆ, ನಟರ ಅಭಿನಯ ಇನ್ನು ಹಲವಾರು ಅಂಶಗಳಿಂದ ಭಾರತದದಾದ್ಯಂತ ಮೆಚ್ಚುಗೆ ಪಡೆದಂತ ಕನ್ನಡ ಸಿನಿಮಾ. ಸಿನಿರಂಗದ ಹಲವಾರು ದಿಗ್ಗಜರಿಂದ ಶಭಾಷ್ ಎನಿಸಿಕೊಂಡಿದ್ದ ಚಿತ್ರತಂಡಕ್ಕೆ ಇದೀಗ ಪ್ರಶಸ್ತಿಗಳ ಸಂಭ್ರಮ ಆರಂಭವಾಗೋ ಸಾಧ್ಯತೆಯಿದೆ. ರಾಜ್ ಬಿ ಶೆಟ್ಟಿಯ ನಿರ್ದೇಶನ ಹಾಗೂ ನಟನೆಗೆ ಮನಸೋಲದವರೇ ಇರಲಿಲ್ಲ. ರಿಷಬ್ ಶೆಟ್ಟಿ ಅಂತೂ ಹರಿಯಾಗಿ ಎಲ್ಲರೊಳಗು ಹೊಕ್ಕಿದ್ದರು. ಇವರಷ್ಟೇ ಅಲ್ಲದೇ ಇನ್ನು ಹಲವಾರು ನಟರು ಸಹ […]

ತನಿಖಾ ಪತ್ರಕರ್ತೆಯಾಗಿ ತೆರೆ ಮೇಲೆ ಬರಲಿದ್ದಾರೆ ಕಾವ್ಯಾ ಶೆಟ್ಟಿ

ಮನೋಜ್ಞ ನಟನೆಯ ಮೂಲಕ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶೆಟ್ಟಿ ಸೋಲ್ಡ್ ಚಿತ್ರದ ಮೂಲಕ ರಂಜಿಸಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ತನಿಖಾ ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. “ಈ ಸಿನಿಮಾ ಕಮರ್ಷಿಯಲ್ ಸಿನಿಮಾ ಅಲ್ಲ. ಇದರಲ್ಲಿ ಥ್ರಿಲ್ಲರ್ ಅಂಶ ಇದ್ದು ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ವಿಷಯ ಮಾನವ ಕಳ್ಳ ಸಾಗಾಣಿಕೆ ಕುರಿತಾಗಿ ಇರಲಿದೆ. ಇದರ ಬಗ್ಗೆ ತೀವ್ರ ಧ್ವನಿ ಇರಲಿದೆ” ಎಂದಿದ್ದಾರೆ. ತಮ್ಮ ಪಾತ್ರದ ಕುರಿತು ಹೇಳಿರುವ ಕಾವ್ಯ “ನಾನು ರುಚಿತಾ ಎಂಬ ತನಿಖಾ ಪತ್ರಕರ್ತೆ […]

ಉಪ್ಪಿ ಅಣ್ಣನ ಮಗನಿಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಡಿಮ್ಯಾಂಡ್

ನಿರಂಜನ್ ಸುಧೀಂದ್ರ …ಸದ್ಯ ಸ್ಯಾಂಡಲ್ ವುಡ್ ನಲ್ಲಿ ಯಂಗ್ ಹೀರೋ ಲಿಸ್ಟ್ನಲ್ಲಿ ನಿಂತಿರೋ ಮೊದಲ ನಾಯಕ ನಟ…. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಮಗನಾದ ನಿರಂಜನ್ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ …ಈಗಾಗಲೇ ಬಾಲಕಲಾವಿದನಾಗಿ ಚಿಕ್ಕಪ್ಪನ ಜತೆ ತೆರೆಹಂಚಿಕೊಂಡಿದ್ದ ನಿರಂಜನ್ ಕೆಲವು ವರ್ಷಗಳ ಹಿಂದೆ ಪ್ರಿಯಾಂಕ ಉಪೇಂದ್ರ ಅವರ ಜೊತೆಯಲ್ಲಿಯೂ ತೆರೆ ಹಂಚಿಕೊಂಡಿದ್ದರು…. ಸದ್ಯ ನಿರಂಜನ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ …ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೆಲವೇ ದಿನಗಳಲ್ಲಿ ನಿರಂಜನ್ […]

ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾದ ಮೇಘನಾ ರಾಜ್

ಚರ್ತುಭಾಷಾ ತಾರೆ ಎಂದೇ ಗುರುತಿಸಿಕೊಂಡಿರುವ ಮೇಘನಾ ರಾಜ್ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಗರ್ಭಿಣಿಯಾದ ನಂತರ ನಟನಾ ಕ್ಷೇತ್ರದಿಂದ ಕೊಂಚ ದೂರವಿದ್ದ ಮೇಘನಾ ರಾಜ್ ಇದೀಗ ಮತ್ತೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಸಿನಿಪ್ರಿಯರಿಗೆ ಸಂತಸ ತಂದಿದೆ. ಸ್ನೇಹಿತ ಪನ್ನಗಭರಣ ನಿರ್ದೇಶನದ ಇನ್ನೂ ಹೆಸರಿಡಬೇಕಾದ ಚಿತ್ರದ ಮೂಲಕ ಹಿರಿತೆರೆಗೆ ಕಂ ಬ್ಯಾಕ್ ಆಗಿರುವ ಮೇಘನಾ ರಾಜ್ ಇದೀಗ ಮಗದೊಂದು ಸಿನಿಮಾ ಒಪ್ಪಿಕೊಂಡಿರುವ ಮೂಲಕ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘನಾ ರಾಜ್ […]

‘ಕನ್ನೇರಿ’ ಸಿನಿಮಾಗೆ ಸಾಥ್ ಕೊಟ್ಟ ವಸಿಷ್ಠ ಸಿಂಹ..

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ ‘ಕನ್ನೇರಿ’. ಈಗಾಗಲೇ ಕನ್ನೇರಿ ಸಿನಿಮಾದ ಕೆಲ ಹಾಡುಗಳು ಕೇಳುಗರ ಮನ ಮುಟ್ಟಿದ್ದು, ಈಗ ಕಾಣದ ಊರಿಗೆ ಎಂಬ ಹಾಡನ್ನು ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಪೋಣಿಸಿರುವ ಚೆಂದದ ಸಾಲುಗಳಿಗೆ ಕದ್ರಿ ಮಣಿಕಾಂತ್ ಅಷ್ಟೇ ಇಂಪಾದ ಮ್ಯೂಸಿಕ್ ನ್ನು ನೀಡಿದ್ದು, ಕೀರ್ತನಾ ಹೊಳ್ಳ ಹಾಗೂ ಹಿಂದು ನಾಗರಾಜ್ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು […]

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಬಾಚಿಕೊಂಡ ರಣ್ವೀರ್ ಸಿಂಗ್ ಹಾಗೂ ಅಲ್ಲು ಅರ್ಜುನ್

ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭ ಇತ್ತೀಚೆಗಷ್ಟೇ 2 ಮುಂಬೈನಲ್ಲಿ ನಡೆಯಿತು. ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್, ರಣವೀರ್ ಸಿಂಗ್, ಶೇರ್ಷಾ ಮತ್ತು ಸರ್ದಾರ್ ಉಧಮ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡರು … ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್, ಸಿದ್ಧಾರ್ಥ್ ಮಲ್ಹೋತ್ರಾ ಅವರ ಶೇರ್ಷಾ ಮತ್ತು ವಿಕ್ಕಿ ಕೌಶಲ್ ಅವರ ಸರ್ದಾರ್ ಉದಾಮ್ ಚಿತ್ರಗಳಿಗೆ ಚಲನಚಿತ್ರೋತ್ಸವದಲ್ಲಿ ಗೌರವಿಸಲಾಯಿತು. ನಿರ್ದೇಶಕ ಕಬೀರ್ ಖಾನ್ ಅವರ 83 ರಲ್ಲಿನ ಅಸಾಧಾರಣ ಅಭಿನಯಕ್ಕಾಗಿ ರಣವೀರ್ ಸಿಂಗ್ […]