ಅರ್ಜುನ್ ಕಪೂರ್ ಎಂದೆಂದಿಗೂ ನನ್ನವನು ಎಂದ ಮಲೈಕಾ

ಬಾಲಿವುಡ್ ಎವರ್ ಗ್ರೀನ್ ಬ್ಯೂಟಿ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ… ನಿನ್ನೆಯಷ್ಟೇ ಮಲೈಕಾ ಹಾಗೂ ಅರ್ಜುನ್ ಕಪೂರ್ ವ್ಯಾಲೆಂಟೇನ್ಸ್ ಡೇನ ಸೂಪರ್ ಸ್ಪೆಷಲ್ ಆಚರಣೆ ಮಾಡಿದ್ದಾರೆ … ಕೆಲವು ದಿನಗಳ ಹಿಂದೆಯಷ್ಟೇ ಅರ್ಜುನ್ ಕಪೂರ್ ಮಲೈಕಾ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರಗಳು ಗಾಸಿಪ್ ಆಗಿ ಹರಡಿತ್ತು… ಆದರೆ ಅದಾದ ನಂತರ ಮತ್ತೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಎಲ್ಲಾ ಗಾಸಿಪ್ ಗಳಿಗೆ […]

ಇಷ್ಟು ಒಳ್ಳೆ ಹುಡುಗನಿಗೆ ಇನ್ನೂ ಮದುವೆಯಾಗಿಲ್ಲ ಪ್ರಭಾಸ್ ಗೆ ಪೂಜಾ ಹೆಗ್ಡೆ ಪ್ರಶ್ನೆ ?

ತೆಲುಗು ಸಿನಮಾರಂಗದಲ್ಲಿ ಇಷ್ಟು ದಿನ ಕಾದರೂ…ಹುಡುಕಿದರು ಇನ್ನೂ ಕೂಡ ಅಭಿಮಾನಿಗಳಿಗೆ ಉತ್ತರ ಸಿಗದೆ ಕಾಡುತ್ತಿರುವ ಪ್ರಶ್ನೆಯೆಂದರೆ ಪ್ರಭಾಸ್ ಯಾಕೆ ಮದುವೆಯಾಗಿಲ್ಲ… ಹೌದು ಈಗಾಗಲೇ ಪ್ರಭಾಸ್ ಮದುವೆ ವಿಚಾರ ಸಾಕಷ್ಟು ಬಾರಿ ಚರ್ಚೆಯಾಗಿತ್ತು…ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು ..ಅದಾದ ನಂತರ ಇನ್ನೂ ಸಾಕಷ್ಟು ಹುಡುಗಿಯರ ಜೊತೆ ಪ್ರಭಾಸ್ ಹೆಸರು ತಳುಕು ಹಾಕುತ್ತಲೇ ಇತ್ತು …ಆದರೆ ಈಗ ಟಾಲಿವುಡ್ ನ ನಂಬರ್ ಒನ್ ಪೂಜಾ ಹೆಗ್ಡೆ ಅವರಿಗೂ ಅದೇ ಪ್ರಶ್ನೆ […]

ಪ್ರೇಮಿಗಳ‌ ದಿನ ಪೂಜಾ ಹೆಗ್ಡೆಗೆ ಡಬಲ್ ಧಮಾಕ

ಟಾಲಿವುಡ್ ನ ಕೃಷ್ಣ ಸುಂದರಿ ಪೂಜಾ ಹೆಗ್ಡೆ ಸದ್ಯ ಸಖತ್ ಬ್ಯುಸಿಯಾಗಿರುವ ನಟಿ.. ತೆಲುಗು ಸಿನಿಮಾ ರಂಗದಲ್ಲೇ ನಂಬರ್ ಒನ್ ಪಟ್ಟದಲ್ಲಿ ಗಿಟ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ವ್ಯಾಲೆಂಟೈನ್ಸ್ ಡೇ ಸಖತ್ ಸ್ಪೆಷಲ್ ಆಗಿತ್ತು .. ಈ ವರ್ಷದ ಪ್ರೇಮಿಗಳ ದಿನ ಪೂಜಾ ಹೆಗ್ಡೆ ಪಾಲಿಗೆ ಡಬಲ್ ಧಮಾಕ ಅಂತಾನೇ ಹೇಳಬಹುದು… ಹೌದು ಪೂಜಾ ಹೆಗ್ಡೆ ಅಭಿನಯದ ಸಿನಿಮಾದ ಟೀಸರ್ ಹಾಗೂ ಮತ್ತೊಂದು ಚಿತ್ರದ ಹಾಡು ಎರಡು ಕೂಡ ವ್ಯಾಲೆಂಟೈನ್ಸ್ ಡೇ ದಿನಕ್ಕೆ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆದಿದೆ […]

ಸಂಯುಕ್ತ ಹೊರನಾಡು ಅವರ ಪ್ರೀತಿಯ ಅಜ್ಜಿ ಇನ್ನು ನೆನಪು ಮಾತ್ರ

ಸ್ಯಾಂಡಲ್ ವುಡ್ ನ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನರಾಗಿದ್ದಾರೆ… 84ವರ್ಷದ ಭಾರ್ಗವಿ ನಾರಾಯಣ್ ಅವರು ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು… ಮೇಕಪ್ ನಾಣಿಯವರ ಪತ್ನಿಯಾಗಿದ್ದ ನಟಿ ಭಾರ್ಗವಿ ನಾರಾಯಣ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು .. ಇಂದು ಸಂಜೆ 7_30 ರ ವೇಳೆಗೆ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾಳೆ… ಸುಧಾ ಬೆಳವಾಡಿ ಮತ್ತು ಪ್ರಕಾಶ್ ಬೆಳವಾಡಿ ಅವರ ತಾಯಿಯಾದ ಭಾರ್ಗವಿ ನಾರಾಯಣ್ ಅವ್ರ ಮೊಮ್ಮಗಳು ಸಂಯುಕ್ತ ಹೊರನಾಡು… ಎರಡು ಕನಸು, ಪಲ್ಲವಿ ಅನುಪಲ್ಲವಿ ಸೇರಿದಂತೆ […]

20 ವರ್ಷದ ನಂತರವೂ ಲಕ್ಕಿ ಹೀರೋಯಿನ್ ಮರೆಯದ ಚಾಲೆಂಜಿಂಗ್ ಸ್ಟಾರ್

ನಟ ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ ಇಪತ್ತು ವರ್ಷ ತುಂಬಿದೆ…ಇದೇ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಆಚರಿಸಿತು… ಮೆಜೆಸ್ಟಿಕ್ ಸಿನಿಮಾ ದರ್ಶನ್ ಅವರ ಕೆರಿಯರ್ ಗೆ ಸಖತ್ ಸಪೋರ್ಟ್ ಮಾಡಿದ್ದು…. ಮೊದಲ ಸಿನಿಮಾದಲ್ಲೇ ದರ್ಶನ್ ಸಕ್ಸಸ್ ಬಾರಿಸಿದ್ರು …ಇತ್ತೀಚೆಗಷ್ಟೇ ಸಿನಿಮಾದ 20ವರ್ಷದ ಸಂಭ್ರಮವನ್ನ ಆಚರಣೆ ಮಾಡಲಾಯ್ತು….ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್ ಅಂದಿನ ದಿನಗಳನ್ನು ಮೆಲುಕು ಹಾಕಿದ್ರು… ಸಿನಿಮಾ ಆರಂಭ ಮುಂಚೆಯಿದ್ದ ಕಷ್ಟದ ದಿನಗಳು… ಅವಕಾಶ ಸಿಗುವುದಕ್ಕೆ ಪಟ್ಟ ಕಷ್ಟಗಳು… ಆಗ ಸಹಾಯ ಮಾಡಿದ ವ್ಯಕ್ತಿಗಳು ಹೀಗೆ ಸಾಕಷ್ಟು […]

ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರ

ಕನ್ನಡ ಸಿನಿಮಾರಂಗದ ಹಿರಿಯ ನಟ ರಾಜೇಶ್ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿದೆ… ಕಲಾತಪಸ್ವಿ ಎಂದೇ ಪ್ರಖ್ಯಾತಿ ಗಳಿಸಿರುವ ರಾಜೇಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡುತ್ತಿತ್ತು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳ ಬಳಗ ಪ್ರಾರ್ಥನೆ ಸಲ್ಲಿಸುತ್ತಿದೆ… 200 _ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಜೇಶ್ ಅವರು ರಾಜ್ ಕುಮಾರ್ ,ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಅನೇಕ ರ ಜತೆ ತೆರೆಹಂಚಿಕೊಂಡಿದ್ದರು… ಅಷ್ಟೇ ಅಲ್ಲದೆ ನಾಯಕ ನಟರಾಗಿ ಕೂಡ […]

ಸ್ಯಾಂಡಲ್ ವುಡ್ ಕಲಾವಿದರಿಂದ ಅಮ್ಮು ಅವರಿಗೆ ಸಿಕ್ತು ಪ್ರೀತಿ ಆಶೀರ್ವಾದ

-ಸ್ಯಾಂಡಲ್ ವುಡ್ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗುತ್ತಿದ್ದಾರೆ… -ತುಂಬು ಗರ್ಭಿಣಿಯಾಗಿರುವ ಅವರಿಗೆ ಇತ್ತೀಚೆಗಷ್ಟೇ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಯಿತು.. -ಅದಾದ ನಂತರ ಅಮೂಲ್ಯ ಅವರ ಗೆಳತಿಯರೆಲ್ಲ ಸೇರಿ ಬೇಬಿ ಶವರ್ ಕಾರ್ಯಕ್ರಮವನ್ನ ಮಾಡಿದ್ರು … -ಈ ಅಮೂಲ್ಯ ಅವರ ಪತಿ ಜಗದೀಶ್ ಅಮೂಲ್ಯಗೆ ಮತ್ತೊಮ್ಮೆ ಅದ್ದೂರಿಯಾದ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಗಣ್ಯರು ಭಾಗಿಯಾಗಿದ್ದಾರೆ -ಅಮೂಲ್ಯ ಬೇಬಿ ಶವರ್ ನಲ್ಲಿ ಐರಾ ಹಾಗೂ ರಾಧಿಕಾ -ಸ್ಯಾಂಡಲ್ ವುಡ್ […]

ಮೇಘಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ..‌. ವಧು ಯಾರು ಗೊತ್ತಾ?

ಮೇಘಾ ಶೆಟ್ಟಿ… ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಅರೇ ಹೇಳದೇ ಕೇಳದೇ ಮೇಘಾ ಶೆಟ್ಟಿ ಹಸೆಮಣೆ ಏರುತ್ತಿದ್ದಾರಾ? ಯಾರಪ್ಪ ಹುಡುಗ ಎಂದು ಕನ್ ಫ್ಯೂಸ್ ಆಗಬೇಡಿ‌.ಯಾಕೆಂದರೆ ಮದುವೆಯೇನೂ ಆಗುತ್ತಿರುವುದು ನಿಜ. ಆದರೆ ಮದುವೆಯಾಗುತ್ತಿರುವವರು ಮೇಘಾ ಶೆಟ್ಟಿ ಅಕ್ಕ ಸುಷ್ಮಾ ಶೆಟ್ಟಿ. ಅಕ್ಕನ ಮದುವೆಯ ಸಂಭ್ರಮದಲ್ಲಿ ಇರುವ ಮೇಘಾ ಶೆಟ್ಟಿ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹಂದಿ ಶಾಸ್ತ್ರದ ವಿಡಿಯೋ ಹಾಗೂ […]

ತಮಿಳುನಾಡು ಸಿಎಂ ಅವರನ್ನ ಭೇಟಿ ಮಾಡಿದ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ …ಎಲ್ಲರಿಗೂ ಗೊತ್ತಿರುವಂತೆ ಶಿವರಾಜ್ ಕುಮಾರ್ ಅವರಿಗೆ ತಮಿಳುನಾಡಿನಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ…ಚೆನ್ನೈನಲ್ಲೇ ತಮ್ಮ ವಿದ್ಯಾಭ್ಯಾಸ ಹಾಗೂ ಆ್ಯಕ್ಟಿಂಗ್ ಟ್ರೈನಿಂಗ್ ಮುಗಿಸಿದಂತಹ ಶಿವಣ್ಣ ಅವರಿಗೆ ಚೆನ್ನೈ ನಡುವೆ ಅವಿನಾಭಾವ ಸಂಬಂಧವಿದೆ.. ಚೆನ್ನೈನ ತಮ್ಮ ಸ್ನೇಹಿತರೊಬ್ಬರ ಮಗಳ ಮದುವೆಗೆ ಶಿವಣ್ಣ ಇತ್ತೀಚೆಗಷ್ಟೇ ತೆರಳಿದ್ದು ಅದೇ ಸಮಯದಲ್ಲಿ ತಮಿಳುನಾಡಿನ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ… ತಮಿಳುನಾಡಿನ ಸಿಎಂ ಆಗಿರುವಂತಹ ಸ್ಟಾಲಿನ್ ಅವರನ್ನು ಇಂದು ಬೆಳಗ್ಗೆ […]

ತನ್ನ ಸಿನಿಮಾ‌ ಬಗ್ಗೆ ಬೇಸರ ವ್ಯಕ್ತ ಪಡಿಸಿದ‌ ವಿನೋದ್ ಪ್ರಭಾಕರ್

ವಿನೋದ್ ಪ್ರಭಾಕರ್ ಅಭಿನಯದ ವರದ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ‌…ಚಿತ್ರಕ್ಕೆ ಉದಯ್ ಪ್ರಕಾಶ್ ನಿರ್ದೇಶನ ಮಾಡಿದ್ದು ವಿನೋದ್ ಪ್ರಭಾಕರ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರೆ ಈಗಾಗಲೇ ಚಿತ್ರರಂಗದ ಕೆಲ ಗಣ್ಯರು ಸಿನಿಮಾದ ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ವರ್ಗ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ … ವರದ ಸಿನಿಮಾ ಒಳ್ಳೆ ಪ್ರಚಾರ ಗಿಟ್ಟಿಸಿಕೊಂಡಿತು ತೆರೆಗೆ ಬರಲು ಸಿದ್ಧವಾಗಿದೆ ಆದರೆ ಸಿನಿಮಾ ಬಗ್ಗೆ ಸ್ವತಃ ನಟ ವಿನೋದ್ ಪ್ರಭಾಕರ್ ರವರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ …ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು […]