ಟೆಂಪಲ್ ರನ್ ನಲ್ಲಿ ಬ್ಯುಸಿಯಾದ ಕೆಜಿಎಫ್ ತಂಡ

ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ… ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಆಗಲು ಈಗಾಗಲೇ ದಿನಾಂಕ ಅನೌನ್ಸ್ ಆಗಿದ್ದು…ಸಿನಿಮಾತಂಡ ಪ್ರಚಾರಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ… ಕರೋನಾದಿಂದಾಗಿ ಬಿಡುಗಡೆ ತಡವಾಗಿದ್ದು ಕೆಜಿಎಫ್ ಚಾಪ್ಟರ್ 2 ಸಿನೆಮಾವನ್ನು ಈ ಬಾರಿ ಭರ್ಜರಿ ಪ್ರಚಾರದ ಮೂಲಕ ಪ್ರೇಕ್ಷಕರ ಮುಂದೆ ತರಲು ಸಿನಿಮಾತಂಡ ನಿರ್ಧಾರ ಮಾಡಿದೆ… ಈಗಾಗಲೇ ಕರಾವಳಿ ಭಾಗದ ದೇವಾಲಯಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿರುವ ಚಿತ್ರತಂಡ ಇಂದು ಕೂಡ ಸಾಕಷ್ಟು ದೇವಾಲಯಗಳಿಗೆ ಭೇಟಿ […]

ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಿದ್ದರಾದ ಸಂದೇಶ್ ಪ್ರೊಡಕ್ಷನ್ಸ್

ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಸಿನಿಮಾ‌ ಮೂಲಕ ಪ್ರಖ್ಯಾತಿಗಳಿಸಿರೋ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ಯಾನ್ ಇಂಡಿಯಾ‌ ಸಿನಿಮಾ ನಿರ್ಮಾಣಕ್ಕೆ ಪ್ಲಾನ್ ಆಗ್ತಿದೆ… ತಮ್ಮ ಅಮೋಘ ನೃತ್ಯದ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರಭುದೇವ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣ ಆಗಲಿದೆ … ಈಗಾಗಲೇ ಪ್ರಭುದೇವಾ ಅವ್ರ ಜೊತೆ‌ಮಾತುಕತೆ ಆಗಿದ್ದು ಸದ್ಯದಲ್ಲೇ ಈ ಚಿತ್ರದ ತಾರಾಬಳಗ ‌ಹಾಗೂ ತಾಂತ್ರಿಕವರ್ಗದ ಮಾಹಿತಿ ನೀಡುವುದಾಗಿ ಸಂದೇಶ್ ನಾಗರಾಜ್ ತಿಳಿಸಿದ್ದಾರೆ. ಇತ್ತೀಚಿಗೆ […]

ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 3ತಿಂಗಳು ಕಳೆದಿವೆ… ಆದರೆ ಇಂದಿಗೂ ಕೂಡ ಅಭಿಮಾನಿಗಳು ಅವರು ತಮ್ಮ ಜೊತೆಯಲ್ಲೇ ಇದ್ದಾರೆ ಎನ್ನುವಂತೆಯೇ ಇದ್ದಾರೆ…. ಪುನೀತ್ ದೈಹಿಕವಾಗಿ ದೂರವಾದರೂ ಕೂಡ ಮಾನಿಸಿಕವಾಗಿ ಎಲ್ಲರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದಾರೆ… 3ತಿಂಗಳಾದರೂ ಕೂಡ ಪ್ರತಿದಿನ ಪ್ರತಿಕ್ಷಣ ಅವರ ಅಭಿಮಾನಿಗಳು ಅವರ ಜಪವನ್ನೇ ಮಾಡುತ್ತಿದ್ದಾರೆ… ಅದರಂತೆಯ ಸದ್ಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಸ್ಟಿಲ್ ಒಂದು ಸಖತ್ ವೈರಲ್ ಆಗುತ್ತಿದೆ… ಹೌದು ಪುನೀತ್ ಜೇಮ್ಸ್ ಸಿನಿಮಾದಲ್ಲಿ ಮಿಲಿಟರಿ ಆಫೀಸರ್ ಆಗಿ […]

ಕೆಜಿಎಫ್ ಸಿನಿಮಾ ನಿಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

ಕೆಜಿಎಫ್ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾತುರದಿಂದ ಕಾದಿರುವ ಅಭಿಮಾನಿಗಳಿಗೆ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ..ಹೌದು ಸದ್ಯ ಕೆಜಿಎಫ್ ನ ಇಡೀ ತಂಡ ಕುಂದಾಪುರದಲ್ಲಿ ಬೀಡುಬಿಟ್ಟಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಕಂಪ್ಲೀಟ್ ಮಾಡುತ್ತಿದೆ… ಅದರಂತೆಯೇ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿರುವುದಾಗಿ ಅನೌನ್ಸ್ ಮಾಡಿದ್ದಾರೆ ಡಬ್ಬಿಂಗ್ ಕಂಪ್ಲೀಟ್ ಆದ ನಂತರ ಫೋಟೋಗಳನ್ನ ಶೇರ್ ಮಾಡಿರುವ ಶ್ರೀನಿಧಿ ಶೆಟ್ಟಿ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದೇವೆ ಎಂದು ಗುಡ್ […]

ವೀಕ್ಷಕರಿಗೆ ಧನ್ಯವಾದ ತಿಳಿಸಿದ ಯಮುನಾ ಶ್ರೀನಿಧಿ

ಯುಮುನಾ ಶ್ರೀನಿಧಿ… ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಅಭಿನಯ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಯಮುನಾ ಶ್ರಿನಿಧಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕ ಚರಣ್ ಅಮ್ಮ ಧನಲಕ್ಷ್ಮಿ ಆಗಿ ಅಭಿ‌ನಯಿಸುತ್ತಿದ್ದಾರೆ. ಯಾವುದೇ ಪಾತ್ರವಾದರೂ ಸರಿ, ಮನೋಜ್ಞ ವಾಗಿ ನಟಿಸುವ ಯಮುನಾ ಶ್ರಿನಿಧಿ ಸದ್ಯ ಧನಲಕ್ಷ್ಮಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಕನ್ಯಾಕುಮಾರಿ ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಮುನಾ […]

ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಗುರುದತ್ ಹಾಗೂ ಶಿವರಾಜಕುಮಾರ್ ಅವರು ಆತ್ಮೀಯ ಸ್ನೇಹಿತರು ಹೌದು. ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದುನಿರ್ಮಾಪಕ ಸಂದೇಶ್ […]

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?

ಚಿತ್ರರಂಗದಲ್ಲಿ ಕೆಲವರು ಒಂದೇ ಸಿನಿಮಾಕ್ಕೆ ಕ್ಲಿಕ್ ಆಗಿಬಿಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಆ ಅದೃಷ್ಟದ ಬಾಗಿಲು ತೆರೆಯೋದೇ ಇಲ್ಲ. ಸಾಲು ಸಾಲು ಸಿನಿಮಾಗಳ ಜೊತೆಗೆ ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೂ ಕೂಡಾ ನಸೀಬೂ ಚೆನ್ನಾಗಿರಬೇಕು ಎಂಬ ಅಭಿಪ್ರಾಯನೂ ಇದೆ. ಇದೆಲ್ಲಾ ಕೂಡಿಬಂದಿದ್ದು ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡುತ್ತಿರುವ ಪೋರಿ ಯಶಾ ಶಿವರಾಮ್‌ಕುಮಾರ್ ಇವರಿಗೆ. ಪದವಿ ಪೂರ್ವ ಸಿನಿಮಾದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಯಶ ಶಿವಕುಮಾರ್ ಮುಂದೆಬಹಾದ್ದೂರ್ ಗಂಡು, ದಂತಕಥೆ, ಬೈರಾಗಿ ಹೀಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ […]

ಆ್ಯಕ್ಟರ್ ಆಗಿ ಭಡ್ತಿ ಪಡೆದ ರ್ಯಾಪರ್ ಇವರೇ ನೋಡಿ

ಸಂಗೀತ ನಿರ್ದೇಶಕ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಇದೀಗ ನಾಯಕರಾಗಿ ಭಡ್ತಿ ಪಡೆದಿದ್ದಾರೆ‌. ಇದೇ ಮೊದಲ ಬಾರಿಗೆ ನಾಯಕರಾಗಿ ತೆರೆ ಮೇಲೆ ಬರಲಿರುವ ಚಂದನ್ ಶೆಟ್ಟಿ ತಮ್ಮ ನಟನಾ ಕೆರಿಯರ್ ಬಗ್ಗೆ ಉತ್ಸುಕರಾಗಿದ್ದಾರೆ. ರಿಯಾಲಿಟಿ ಶೋ ಹಾಗೂ ಮ್ಯೂಸಿಕ್ ನಲ್ಲಿ ಹೆಸರು ಗಳಿಸಿರುವ ಚಂದನ್ ಶೆಟ್ಟಿ, ಸುಜಯ್ ಶಾಸ್ತ್ರಿ ನಿರ್ದೇಶನದ“ಎಲ್ರ ಕಾಲೆಳಿಯುತ್ತೆ ಕಾಲ” ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಮೂಲಕ ನಟರಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. 70 -80 ರ ದಶಕದ ಕಾಲದ ಕಥೆಯನ್ನು ಈ ಸಿನಿಮಾವು ಹೊಂದಿದ್ದು ಇದರಲ್ಲಿ […]

ಲವ್ಲಿ 20 ಇಯರ್ಸ್ ಎಂದ ಪ್ರೇಮ್… ಯಾಕೆ ಗೊತ್ತಾ?

ಚಂದನವನದಲ್ಲಿ ಲವ್ಲಿ ಸ್ಟಾರ್ ಎಂದೇ ಜನಪ್ರಿಯತೆ ಪಡೆದಿರುವ ಹ್ಯಾಂಡ್ ಸಮ್ ಹುಡುಗ ಪ್ರೇಮ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 20 ವರ್ಷಗಳಾಗಿವೆ. ಈ ಸಂಭ್ರಮದಲ್ಲಿ ಪ್ರೇಮ್ ತನ್ನ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಶೇಷ ದಿನದಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರೇಮ್ ಹಿಂದುಗಡೆ “ಲವ್ಲಿ 20 ಇಯರ್ಸ್” ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ” 20 ವರ್ಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲಹಿ ಬೆಳೆಸಿದ […]

ಕೆಜಿಎಫ್ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ..ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಎರಡು ಭಾರಿ ಮುಂದೂಡಲಾಗಿತ್ತು…ಆದರೆ ಈಗ ಚಿತ್ರತಂಡ ಸದ್ಯ ಅನೌನ್ಸ್ ಮಾಡಿರುವಂತೆ ಏಪ್ರಿಲ್ 14 ಕ್ಕೆ ಬಿಡುಗಡೆ ಮಾಡಿಯೇ ಸಿದ್ಧ ಎಂದು ನಿರ್ಧಾರ ಮಾಡಿದೆ … ಅದಕ್ಕಾಗಿ ಈಗಾಗಲೇ ಕುಂದಾಪುರದಲ್ಲಿ ಬೀಡುಬಿಟ್ಟಿರುವ ಕೆಜಿಎಫ್ ತಂಡ ಪ್ರಚಾರದ ಪ್ಲಾನ್ ರೆಡಿ ಮಾಡುತ್ತಿದೆ… ಇಂದಿನಿಂದ ಸಿನಿಮಾ ಪ್ರಚಾರ ಆರಂಭ ಮಾಡಲು ತಯಾರಿ ಮಾಡಿಕೊಂಡಿದ್ದು ಅದಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ […]