ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರಾ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿ ಕೆಲವು ವರ್ಷಗಳೇ ಕಳೆದಿವೆ. ಸಿನಿಮಾ ನಟನೆಯಿಂದ ದೂರ ಉಳಿದಿರುವ ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಮ್ಯಾ ಸಿನಿ ಕೆರಿಯರ್ ಆರಂಭಿಸಿ ಎಪ್ರಿಲ್ 25ಕ್ಕೆ 19 ವರ್ಷಗಳು ಕಳೆದಿವೆ. ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಮ್ಯಾ ಮುಂದೆ ಸ್ಟಾರ್ ನಟಿಯಾಗಿ ಬೆಳೆದರು. ನಟಿಸಿದ ಮೊದಲ ಸಿನಿಮಾ ಅಭಿ ಹಿಟ್ ಆಗಿತ್ತು. ಹೀಗಾಗಿ ಚಂದನವನದಲ್ಲಿ ಅವರಿಗೆ ಬೇಡಿಕೆ ಹೆಚ್ಚಾಯಿತು. […]
ಮನೆಮನೆಗೆ ರಾಮನ ಸವಾರಿ

ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ರಾಮನ ಸವಾರಿ” ಶೀಘ್ರದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕೆ ಶಿವರುದ್ರಯ್ಯ ನಿರ್ದೇಶನದ ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಎರಡನೇ ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ಗೆದ್ದುಕೊಂಡಿತ್ತು. ಗ್ರಾಮೀಣ ಭಾಗದ ಸೊಗಡು ಹೊಂದಿರುವ ಈ ಚಿತ್ರ ರಾಮ ಎಂಬ ಯುವಕನ ಪಯಣವನ್ನು ಹೊಂದಿದೆ. ತಂದೆಯಿಂದ ದೂರವಾಗಿ ತನ್ನ ತಾಯಿ ಹಾಗೂ ಅಜ್ಜ ಅಜ್ಜಿಯರೊಂದಿಗೆ ನೆಲೆಸಿರುತ್ತಾನೆ. ರಾಮ ತನ್ನ ಬೇರ್ಪಟ್ಟಿರುವ ತಂದೆ ತಾಯಿಗಳಿಗೆ ಹೇಗೆ ಸೇತುವೆ ಆಗುತ್ತಾನೆ ಎಂಬುದೇ […]
ಗ್ಯಾಂಗ್ ಸ್ಟರ್ ಆಗಿ ಬರಲಿದ್ದಾರೆ ಆದಿತ್ಯ

ತುಂಬಾ ದಿನಗಳ ನಂತರ ನಟ ಆದಿತ್ಯ ವೀರ ಕಂಬಳ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಆದಿತ್ಯ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತುಳುನಾಡಿನ ಖ್ಯಾತ ಕಂಬಳದ ಕುರಿತು ಆಗಿದೆ.ಮಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ಆದಿತ್ಯ ಪಾತ್ರದ ಬಗ್ಗೆ ಹೇಳಿದ್ದಾರೆ. “ನಾನು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸೆಕೆಂಡ್ ಹಾಫ್ ನಲ್ಲಿ ಈ ಪಾತ್ರಕ್ಕೆ ಮಹತ್ವ ದೊರೆಯಲಿದೆ. ಕಂಬಳ ತುಳುನಾಡಿನ ಪ್ರಮುಖ ಭಾಗವಾಗಿದೆ ಎಂದು ನಂಬಿರುವ ಕಂಬಳಕ್ಕೆ […]
ತೆಲುಗು ಸ್ಟಾರ್ ನೊಂದಿಗೆ ಕೈಜೋಡಿಸಿದ ‘777 ಚಾರ್ಲಿ’

ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತನ್ನ ಬಿಡುಗಡೆಯ ದಿನಾಂಕವನ್ನು ಹೊರಹಾಕಿದೆ. ಇದೇ ಜೂನ್ 10ರಂದು ದೇಶದಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪಾನ್ ಇಂಡಿಯನ್ ಸಿನಿಮಾ ಇದಾಗಿರಲಿದ್ದು, ಎಲ್ಲ ಭಾಷೆಗಳಲ್ಲೂ ಒಂದೇ ದಿನದ ಬಿಡುಗಡೆಗೆ ಚಿತ್ರತಂಡದಿಂದ ಭರದ ಸಿದ್ಧತೆ ಸಾಗಿದೆ. ಈ ನಡುವೆ ‘777 ಚಾರ್ಲಿ’ ಚಿತ್ರತಂಡ ತೆಲುಗಿನ ಸ್ಟಾರ್ ನಟರಾದ ರಾಣ ದಗ್ಗುಬಾಟಿ ಅವರ […]
ಮನೆಯಲ್ಲೇ ಕೂತು ನಮ್ಮ ಭಾಷೆಯಲ್ಲೇ ನೋಡಬಹುದು ‘ದಿ ಕಾಶ್ಮೀರ್ ಫೈಲ್ಸ್’

ಭಾರತ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’. ಪ್ರತಿಯೊಬ್ಬ ಪ್ರೇಕ್ಷಕನಲ್ಲಿದ್ದ ದೇಶಭಕ್ತಿಯನ್ನು ಹೊರಗೆಳೆದಿಟ್ಟ ಚಿತ್ರವಿದು. ಈ ಚಿತ್ರವನ್ನ ನೋಡುವವರಿಗೆ, ಟಿಕೆಟ್ ದರದಲ್ಲಿನ ಟ್ಯಾಕ್ಸ್ ಅನ್ನು ತೆಗೆದುಹಾಕಲಾಗಿತ್ತು. ಬಿಡುಗಡೆಯಾದ ಕೆಲವು ದಿನಗಳ ಕಾಲ ‘ಐ ಎಂ ಡಿ ಬಿ (IMDB)ಯಲ್ಲಿ ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದು ಮೆರೆದಿದ್ದ ಚಿತ್ರ ಇದು. ಕರ್ನಾಟಕದ ಸಚಿವರಿಗೆ ಈ ಚಿತ್ರದ ವಿಶೇಷ ಶೋ ಒಂದನ್ನು ಏರ್ಪಡಿಸಲಾಗಿತ್ತು. ಪ್ರತಿಯೊಬ್ಬ ಭಾರತೀಯನ ಮನದೊಳಗು ಒಂದು ವಿಶೇಷ ಸ್ಥಾನವನ್ನ ಪಡೆದ ಈ ಚಿತ್ರ […]
ಬಿಡುಗಡೆಗೂ ಮುಂಚೆಯೇ ಗೆದ್ದಿರುವ ಚಾರ್ಲಿ

ನಟನೆ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಹ್ಯಾಂಡ್ ಸಮ್ ಹುಡುಗ. ವಿಭಿನ್ನ ಮ್ಯಾನರಿಸಂ , ಕಿಕ್ ನೀಡುವ ಡೈಲಾಗ್ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಅವರ ಹೊಸ ಸಿನಿಮಾ “ಚಾರ್ಲಿ 777” ಹೊಸ ನಿರೀಕ್ಷೆ ಮೂಡಿಸಿದ್ದು ಜೂನ್ 10ಕ್ಕೆ ರಿಲೀಸ್ ಆಗಲಿದೆ. ರಕ್ಷಿತ್ ಶೆಟ್ಟಿ ನಟಿಸಿರುವ ಕಿರಣ್ ರಾಜ್ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಹಕ್ಕುಗಳು 21 ಕೋಟಿಗೆ […]
ಆ ಸಿನಿಮಾದಿಂದ ಕಾಜಲ್ ಔಟ್…ಕಾರಣ ಏನು ಗೊತ್ತಾ?

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಕಳೆದ 18 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದಾರೆ. ಇಂತಿಪ್ಪ ಕಾಜಲ್ ಚಿರಂಜೀವಿ ಅವರ ಬಹು ನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ ಇದೀಗ ಅವರು ನಟಿಸಿರುವ ಪಾತ್ರವನ್ನು ಸಿನಿಮಾದಿಂದ ತೆಗೆಯಲಾಗಿದೆ. ಇದರ ಬಗ್ಗೆ ಮಾತನಾಡಿರುವ ನಿರ್ದೇಶಕ ಕೊರಟಾಲ ಶಿವ “ಕಮರ್ಷಿಯಲ್ ಸಿನಿಮಾ ಎಂದಾಗ ನಾಯಕನ ಜೊತೆ ನಾಯಕಿ ಇರುತ್ತಾರೆ. ಈ ಸಿನಿಮಾಗಾಗಿ ತಮಾಷೆಯಾದ ನಾಯಕಿ ಪಾತ್ರ ಬರೆದಿದ್ದೆ. ಹೀಗಾಗಿ ಕಾಜಲ್ ಅವರನ್ನು ಕರೆಸಿ ಮೂರ್ನಾಲ್ಕು ದಿನ ಶೂಟಿಂಗ್ […]
ಒಟಿಟಿಗೆ ಅಪ್ಪು ಅಪ್ಪಿದ ‘ಮ್ಯಾನ್ ಆಫ್ ದಿ ಮ್ಯಾಚ್’

‘ಪಿ ಆರ್ ಕೆ ಪ್ರೊಡಕ್ಷನ್ಸ್’ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಿದ್ದಂತೆ. ಹೊಸ ಪ್ರತಿಭೆಗಳ ಕಲೆಗೆ ಓಗೊಟ್ಟು, ಹೊಸ ರೀತಿಯ ಸಿನಿಮಾಗಳಿಗೆ ನಾಂದಿಯಾಗಬೇಕೆಂಬ ಗುರಿಯಿಂದ ಹುಟ್ಟಿಕೊಂಡ ಸಂಸ್ಥೆ ಈ ‘ಪಿ ಆರ್ ಕೆ ಪ್ರೊಡಕ್ಷನ್ಸ್’. ಅದರಂತೆಯೇ ಹಲವಾರು ಅದ್ಭುತ ಪ್ರತಿಭೆಗಳಿಂದ ಉತ್ತಮ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿದೆ ಈ ಸಂಸ್ಥೆ. ಇದೀಗ ಹೊಸ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋಗು ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಅವರಿಗೂ ಅಭೂತಪೂರ್ವ ಸಂಬಂಧವೊಂದಿದೆ. ಇದುವರೆಗೆ ಇವರಿಂದ ನಿರ್ಮಿತವಾದ ಚಿತ್ರಗಳಲ್ಲಿ […]
ಮತ್ತೊಮ್ಮೆ ರಾಜ್ ಕುಟುಂಬದತ್ತ,’ಜೇಮ್ಸ್’ ನಿರ್ಮಾಪಕರ ಚಿತ್ತ.

ಪುನೀತ್ ರಾಜಕುಮಾರ್ ಅವರನ್ನ ನಾಯಕನಾಗಿ ಹೊಂದಿದ್ದ ಕೊನೆಯ ಚಿತ್ರ, ‘ಜೇಮ್ಸ್’ ಜನಮಾನಸವನ್ನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರಗಳಲ್ಲಿ ಬಿರುಸಿನ ಓಟ ಕಂಡು ಬಾಕ್ಸ್ ಆಫೀಸ್ ಅನ್ನು ಪುಡಿ-ಪುಡಿ ಮಾಡಿತ್ತು. ಈಗ ಆ ಚಿತ್ರದ ನಿರ್ಮಾಪಕರು ತಮ್ಮ ಮುಂದಿನ ಚಿತ್ರದ ಬಗೆಗಿನ ಘೋಷಣೆಯನ್ನ ಮಾಡಿದ್ದಾರೆ. ಸಂತೋಷವೆಂದರೆ, ಈ ಸಿನಿಮಾದ ನಾಯಕನೂ ಕೂಡ ರಾಜ್ ಕುಟುಂಬದ ಕುಡಿಯೇ ಆಗಿರಲಿದ್ದಾರೆ. ‘ಜೇಮ್ಸ್’ ಚಿತ್ರದ ನಿರ್ಮಾಪಕರಾದ ಕಿಶೋರ್ ಪಾತಿಕೊಂಡ ಅವರು ತಮ್ಮ ಹೊಸ ಚಿತ್ರದ ನಾಯಕನಟನನ್ನು ಘೋಷಿಸಿದ್ದಾರೆ. ರಾಜಕುಮಾರ್ ಮೊಮ್ಮಗನಾದ ಧೀರನ್ ರಾಮಕುಮಾರ್ ಈ […]
ಹೊಸ ಇನ್ನಿಂಗ್ಸ್ ಶುರುಮಾಡಿದ ತುಪ್ಪದ ಹುಡುಗಿ

ಲವ್ ಗುರು, ಗಾನ ಬಜಾನಾ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಶಾಂತ್ ರಾಜ್ ನಿರ್ದೇಶನದ ಮೊದಲ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ. ಸಂತಾನಂ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ತಾನ್ಯಾ ಹೋಪ್ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ” ಈ ಸಿನಿಮಾದಲ್ಲಿ ಭಾಗವಾಗಿರುವುದಕ್ಕೆ ಉತ್ಸುಕಳಾಗಿದ್ದೇನೆ. ಪ್ರಶಾಂತ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ. ಇಲ್ಲಿ ಸಂತಾನಂ ಅವರ ಜೊತೆ ನಟಿಸುತ್ತಿದ್ದೇನೆ. ಅವರು ಒಬ್ಬ ಪ್ರತಿಭಾವಂತ ನಟ. ನಾನು ಇಲ್ಲಿ ಗ್ಲಾಮರಸ್ ಪಾತ್ರ ಮಾಡುತ್ತಿದ್ದೇನೆ. ಇದು ಸಿನಿಮಾಕ್ಕೆ ಸ್ಟೈಲಿಶ್ ಟಚ್ ಕೊಡುತ್ತದೆ. […]

