ಬಿಡುಗಡೆಗೆ ಮುಹೂರ್ತವಿಟ್ಟ ರಿಷಬ್ ಶೆಟ್ಟಿ ಯವರ ಮುಂದಿನ ಚಿತ್ರ.

ಕನ್ನಡದಲ್ಲಿ ಸದ್ಯ ಎಲ್ಲ ವರ್ಗದ ಸಿನಿಪ್ರಿಯರನ್ನೂ ಸೆಳೆವಂತ ಒಬ್ಬ ನಟ-ನಿರ್ದೇಶಕನೆಂದರೆ ಅದು ರಿಷಬ್ ಶೆಟ್ಟಿಯವರು. ನಟನೆಯಲ್ಲಿ, ನಿರ್ದೇಶನದಲ್ಲಿ, ಕಥಾರಚನೆಯಲ್ಲಿ ಜೊತೆಗೆ ನಿರ್ಮಾಣದಲ್ಲಿ, ಎಲ್ಲದರಲ್ಲೂ ಎತ್ತಿದ ಕೈ ಎಂದು ಸಾಬೀತು ಮಾಡಿರುವ ಇವರು ಇದೀಗ ತಮ್ಮ ಮುಂದಿನ ಚಿತ್ರದ ಬಿಡುಗಡೆಯ ಭರದಲ್ಲಿದ್ದಾರೆ. ಅದುವೇ ‘ಹರಿಕಥೆ ಅಲ್ಲ ಗಿರಿಕಥೆ’. ಆದರೆ ಈ ಬಾರಿ ರಿಷಬ್ ಶೆಟ್ಟಿ ಕೇವಲ ನಟ ಹಾಗು ನಿರ್ಮಾಪಕ ಮಾತ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಅನಂತ್ ಹಾಗು ಅನಿರುಧ್ ಮಹೇಶ್ ಅವರ ಜೋಡಿ ಈ ಚಿತ್ರದ ಕಥೆಯನ್ನ ಬರೆದು […]

ಬದುಕಲು ಕಲ್ಲಿಗೆ ರೂಪ ಕೊಡುತ್ತಿದ್ದ ಶಿಲ್ಪಿ ಈಗ ಪ್ರಪಂಚ ಹೆಮ್ಮೆಯಿಂದ ಗುರುತಿಸುವ ಅದ್ಭುತ ಸಂಗೀತಗಾರ.

‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಮಾತಿದೆ. ಕಷ್ಟ ಪಟ್ಟರೇನೇ ಕೊನೆಗೆ ಯಶಸ್ಸು ಸಿಗೋದು. ಈ ಮಾತಿಗೆ ಸರಿಹೊಂದುವಂತ ಒಂದು ನಿದರ್ಶನ ನಮ್ಮ ರವಿ ಬಸ್ರುರು. ಸದ್ಯ ‘ಕೆಜಿಎಫ್’ ಎಂಬ ಯಶೋಗಾಥೆಯ ಒಂದು ಪ್ರಮುಖ ಅಂಗವಾಗಿರೋ ಇವರು, ಒಂದು ಕಾಲದಲ್ಲಿ ಒಂದೋತ್ತಿನ ಊಟಕ್ಕೂ ಒದ್ದಾಡಿದವರು. ಇಂದು ಯಶಸ್ಸಿನ ಸಾಗರದಲ್ಲಿ ತೇಲುತ್ತಿದ್ದರೆ, ಹಿಂದೊಂದು ದಿನ ಅವರು ಪಟ್ಟ ಪರಿಶ್ರಮವೇ ಕಾರಣ ಎಂದು ಹೇಳಬಹುದು. ನಮ್ಮ ಕರಾವಳಿಯ ಕುಂದಾಪುರ ತಾಲೂಕಿನ ಬಸ್ರುರಿನ ಒಂದು ಬಡಕುಟುಂಬದಲ್ಲಿ ‘ಕಿರಣ್’ ಎಂಬ ಹೆಸರಿನಿಂದ ಜನಿಸಿದವರು […]

ಕೆಜಿಎಫ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ಧಿ

ಮೊದಲನೇ ಅಧ್ಯಾಯ ಹುಟ್ಟಿಸಿದ ನಿರೀಕ್ಷೆಗಳಿಗೆ, ಎರಡನೇ ಅಧ್ಯಾಯ ಪಟಾಕಿ ಹಚ್ಚಿದೆ. ಚಾಪ್ಟರ್ 1 ನೀಡಿದಂತ ಸಂತಸವನ್ನ ಹತ್ತು ಪಟ್ಟು ಹೆಚ್ಚಿಸಿದೆ ಚಾಪ್ಟರ್ 2. ಬಿಡುಗಡೆಯಾದ ಮೊದಲ ವಾರದೊಳಗೆ 700ಕೋಟಿ ದಾಟಿ ದಾಖಲೆ ಬರೆದಂತ ಚಿತ್ರ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2. ಬಿಡುಗಡೆಯಾಗಿ ಹದಿನೈದನೆ ದಿನದಂದು ಪ್ರಪಂಚದಾದ್ಯಂತ 900 ಕೋಟಿಗೂ ಹೆಚ್ಚು ಗಳಿಕೆ ಕಂಡು ಸಾವಿರ ಕೋಟಿಯ ಕ್ಲಬ್ ಸೇರೋ ಭರದಲ್ಲಿದೆ. ಇಷ್ಟೆಲ್ಲಾ ದಾಖಲೆ ಬರೆದು ಅಭಿಮಾನಿಗಳಲ್ಲಿ ಹರ್ಷೋದ್ಗಾರ ಹುಟ್ಟು ಹಾಕಿದ ಚಿತ್ರದಿಂದ ಮತ್ತೊಂದು ಸುದ್ದಿ […]

‘ಯುವ’ ರಾಜಕುಮಾರನನ್ನ ತರುತ್ತಿದೆ ಹೊಂಬಾಳೆ

ನಿಮ್ಮ ಅತ್ಯಂತ ನೆಚ್ಚಿನ ಸಿನೆಮಾ ಸಂಸ್ಥೆ ಯಾವುದು ಎಂದು ಯಾರೇ ಕನ್ನಡಿಗನ ಹತ್ತಿರ ಕೇಳಿದರೂ, ಬಹುಪಾಲು ಉತ್ತರ ಹೇಳೋ ಹೆಸರು, ‘ಹೊಂಬಾಳೆ ಫಿಲಂಸ್’. ಕನ್ನಡಕ್ಕೆ, ಅಲ್ಲಲ್ಲ ಪ್ರಪಂಚದ ಸಿನಿರಂಗಕ್ಕೆ ‘ಕೆಜಿಎಫ್’ನಂತಹ ಚಿನ್ನದ ಗಣಿಯನ್ನ ಕೊಟ್ಟಂತ ಕನ್ನಡಿಗರ ಹೆಮ್ಮೆ, ‘ಹೊಂಬಾಳೆ ಫಿಲಂಸ್’. ಇದೀಗ ಹೊಸದೊಂದು ಹೆಜ್ಜೆಯನ್ನ ಈ ದಿಗ್ಗಜ ಸಂಸ್ಥೆ ಇಡುತ್ತಿದೆ. ರಾಜ್ ಕುಟುಂಬ ಕನ್ನಡಿಗರೆಲ್ಲರ ನೆಚ್ಚಿನ ಸಿನಿಬಳಗ ಎಂದೇ ಹೇಳಬಹುದು. ರಾಜಕುಮಾರ್ ಅವರಿಂದ ಆರಂಭವಾದ ಇವರ ಕಲಾಸೇವೆ ಇದೀಗ 3ನೇ ಪೀಳಿಗೆಯಿಂದ ಮುಂದುವರೆಯುತ್ತಿದೆ. ರಾಜಕುಮಾರ್ ಹಾಗು ಅವರ […]

ನೀವೆಲ್ಲರೂ ನನ್ನ ಶಕ್ತಿ ಎಂದ ಅಧೀರ

ದೇಶಾದ್ಯಂತ ಕೆಜಿಎಫ್ ಹವಾ ಜೋರಾಗಿದ್ದು ಚಿತ್ರದ ಗಳಿಕೆ ದಿನೇದಿನೇ ಹೆಚ್ಚುತ್ತಿದೆ. ಪ್ರತಿಯೊಂದು ಪಾತ್ರವೂ ಮನಸೆಳೆದಿದೆ. ಅಧೀರ ಪಾತ್ರ ಕೂಡಾ ಜನರಿಗೆ ಇಷ್ಟವಾಗಿದೆ. ಅಭಿಮಾನಿಗಳ ಈ ಪ್ರೀತಿಗೆ ಅಧೀರ ಪಾತ್ರ ನಿರ್ವಹಿಸಿರುವ ನಟ ಸಂಜಯ್ ದತ್ ಧನ್ಯವಾದ ಸಲ್ಲಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಧೀರ ಪಾತ್ರ ಕೂಡಾ ಒಂದಾಗಿದೆ. ಜನರ ಪ್ರೀತಿಗೆ ಆಭಾರಿಯಾಗಿರುವ ಬಾಲಿವುಡ್ ನ ಮುನ್ನಾಭಾಯಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. “ಕೆಲವು ಚಿತ್ರಗಳು ಬೇರೆ ಚಿತ್ರಗಳಿಗಿಂತ ವಿಶೇಷ ಆಗಿರುತ್ತದೆ. ಪ್ರತಿ […]

‘ಬಾನದಾರಿಯಲ್ಲಿ’ನ ಪಯಣ ಸೇರಿದ ನಟಿಮಣಿಯರು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಅವರ ಆಪ್ತ ಸ್ನೇಹಿತ ಪ್ರೀತಮ್ ಗುಬ್ಬಿಯವರು ಹೊಸದೊಂದು ಚಿತ್ರಕ್ಕೆ ಒಂದಾಗುತ್ತಿದ್ದಾರೆ ಎಂಬುದು ಸದ್ಯ ಸ್ಯಾಂಡಲ್ವುಡ್ ನ ತಾಜ ಸುದ್ದಿ. ಈಗಾಗಲೇ ‘ಮಳೆಯಲಿ ಜೊತೆಯಲಿ’, ’99’ ಹಾಗು ‘ದಿಲ್ ರಂಗೀಲಾ’ ಚಿತ್ರಗಳಲ್ಲಿ ನಾಯಕ-ನಿರ್ದೇಶಕ ಜೋಡಿಯಾಗಿ ಕಾಣಿಸಿಕೊಂಡಿರುವ ಈ ಇಬ್ಬರು ಇದೀಗ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದಾರೆ. ಅಪ್ಪು ಅವರು ಹಾಡಿದಂತ ಪ್ರಸಿದ್ಧ ಹಾಡನ್ನ ಗೌರವದಿಂದ ನೆನೆಯುತ್ತ ‘ಬಾನದಾರಿಯಲ್ಲಿ’ ಎಂದೇ ಚಿತ್ರಕ್ಕೆ ನಾಮಕರಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಲಿರುವ ಇಬ್ಬರು ನಟಿಯರನ್ನು ಪರಿಚಯಿಸಿದೆ ಚಿತ್ರತಂಡ. ‘ಬೀರಬಲ್’ […]

ಇದು ನನ್ನ ಕನಸಿನ ಪ್ರಾಜೆಕ್ಟ್ – ರೀಶ್ಮಾ ನಾಣಯ್ಯ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ತಮ್ಮ ಕಾಂಬಿನೇಷನ್ ನಲ್ಲಿ ಬರುತ್ತಿರುವ ಬಾನ ದಾರಿಯಲಿ ಚಿತ್ರದಲ್ಲಿ ಏಕ್ ಲವ್ ಯಾ ಖ್ಯಾತಿಯ ರೀಶ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಈ ವಿಚಾರ ಹಂಚಿಕೊಂಡಿದ್ದು ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ಇನ್ನೊಂದು ನಾಯಕಿಯಾಗಿ ನಟಿಸುತ್ತಿದ್ದಾರೆ. “ಪ್ರೀತಂ ಗುಬ್ಬಿ ಹಾಗೂ ಗಣೇಶ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕುತ್ತದೆ ಎಂಬುದನ್ನು ನಂಬಲಾಗುತ್ತಿಲ್ಲ. ನಾನು ಗಣೇಶ್ ಅವರ ಅಭಿಮಾನಿ. ಅವರ ನಟನೆಯನ್ನು ಇಷ್ಟಪಡುತ್ತೇನೆ. ಅವರೊಂದಿಗೆ ತೆರೆ ಹಂಚಿಕೊಳ್ಳಲು ಹಾಗೂ ಅವರಿಂದ […]

‘777 ಚಾರ್ಲಿ’ಯನ್ನ ಆಗಲೇ ವೀಕ್ಷಕರ ಫೇವರಿಟ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ‘777 ಚಾರ್ಲಿ’. ನಾಯಿಯೊಂದರ ಕಥೆಯೊಂದಿಗೆ ಜೀವನದ ಪಾಠವನ್ನ ಹೇಳಹೊರಟಿದ್ದಾರೆ ನಿರ್ದೇಶಕ ಕಿರಣ್ ರಾಜ್. ಮೂರು ವರ್ಷಗಳ ಹಿಂದೆಯೇ ಆರಂಭವಾಗಿದ್ದ ಈ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಜೂನ್ 10ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ ಈ ಚಿತ್ರ. ಸಿನಿಮಾದ ಡಿಜಿಟಲ್ ಹಾಗು ದೂರದರ್ಶನದ ಹಕ್ಕುಗಳು ಮಾರಾಟವಾಗಿದ್ದು, ಕಲರ್ಸ್ ಕನ್ನಡ ವಾಹಿನಿ ಚಿತ್ರದ ದೂರದರ್ಶನದ ಪ್ರದರ್ಶನದ ಹಕ್ಕು ಕೊಂಡಿದ್ದರೆ, ವೂಟ್ ಸಂಸ್ಥೆ ಚಿತ್ರದ ಡಿಜಿಟಕ್ ಹಕ್ಕುಗಳನ್ನ ತನ್ನದಾಗಿಸಿಕೊಂಡಿದೆ. 9 ಕೋಟಿಗೆ ಚಿತ್ರದ […]

ಗಂಗಾ ಆಗಿ ಮೋಡಿ ಮಾಡಲಿದ್ದಾರೆ ಧನ್ಯಾ ರಾಮ್ ಕುಮಾರ್

ರಾಜ್ ಕುಮಾರ್ ಕುಟುಂಬದ ಕುಡಿ ಧನ್ಯಾ ರಾಮ್ ಕುಮಾರ್ “ನಿನ್ನ ಸನಿಹಕೆ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ವಿಚಾರ ಸಿನಿಪ್ರಿಯರಿಗೆ ತಿಳಿದೇ ಇದೆ. ಮೊದಲ ಚಿತ್ರದಲ್ಲಿ ಸಿನಿಮಾ ವೀಕ್ಷಕರ ಗಮನ ಸೆಳೆದಿರುವ ಧನ್ಯಾ ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಜೊತೆಗೆ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಧನ್ಯಾ ಅವರು ನಟಿಸುತ್ತಿರುವ ಮುಂದಿನ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ವಿಕ್ಕಿ ವರುಣ್ ನಿರ್ದೇಶನ ಹಾಗೂ […]

ತಮಿಳು ನಿರ್ದೇಶಕಿಯ ಜೊತೆ ಕೈಜೋಡಿಸಿದ ‘ಹೊಂಬಾಳೆ’

ನಮ್ಮ ದೇಶ ಮಾತ್ರವಲ್ಲ, ಸದ್ಯ ಇಡೀ ಪ್ರಪಂಚದಾದ್ಯಂತ ಪ್ರಸಿದ್ದರಾಗಿರುವ ಸಿನಿಮಾ ಸಂಸ್ಥೆ ನಮ್ಮ ಕನ್ನಡದ ‘ಹೊಂಬಾಳೆ ಫಿಲಂಸ್’. ಕೆಜಿಎಫ್ ನಂತಹ ಬೃಹತ್ ಚಿತ್ರವನ್ನು ಒಂದು ಸಣ್ಣ ಕಪ್ಪು ಚುಕ್ಕೆಯು ಕಾಣದಂತೆ ನಿರ್ಮಿಸಿ ಜನರ ಮೆಚ್ಚುಗೆಯನ್ನ ಪಡೆದ ನಿರ್ಮಾಣ ಸಂಸ್ಥೆ ಇದು. ವಿಜಯ್ ಕಿರಗಂದೂರ್ ಅವರ ಸಾರಥ್ಯದಲ್ಲಿ ಹಲವಾರು ಅದ್ಭುತ ಚಿತ್ರಗಳನ್ನ ಚಿತ್ರರಂಗಕ್ಕೆ ನೀಡಿರೋ ಹೊಂಬಾಳೆ ಫಿಲಂಸ್, ಇದೀಗ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ನೈಜ ಘಟನೆಗಳನ್ನ ಎತ್ತಿಕೊಂಡು ಅದರಿಂದಲೇ ಸಿನಿಮಾವೊಂದನ್ನ ಹೆಣೆದು ಜನರ ಮುಂದಿಟ್ಟು ಶಭಾಷ್ […]