‘ಘೋಸ್ಟ್(Ghost)’ ಆಗಿ ಬರಲಿದ್ದಾರೆ ಶಿವಣ್ಣ.

‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಅವರು ವಯಸ್ಸೇರಿದಂತೆ ಹೆಚ್ಚೆಚ್ಚು ಚೈತನ್ಯಶಾಲಿಯಾಗುವವರು. ಒಂದೇ ಶಕ್ತಿ, ಒಂದೇ ಉತ್ಸಾಹದಿಂದ ಸುಮಾರು 125 ಚಿತ್ರಗಳನ್ನ ಕನ್ನಡಿಗರೆದುರು ಇಟ್ಟಿರುವ ಶಿವಣ್ಣ, ಇದೀಗ ಹೊಸತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ‘ಬೀರಬಲ್’ ಹಾಗು ‘ಓಲ್ಡ್ ಮಂಕ್’ ಖ್ಯಾತಿಯ ಎಂ ಜಿ ಶ್ರೀನಿವಾಸ್ ಅಕಾ ಶ್ರೀನಿ ನಿರ್ದೇಶನದ ಮುಂದಿನ ಚಿತ್ರದ ನಾಯಕರಾಗಿರಲಿದ್ದಾರೆ ಶಿವಣ್ಣ. ನಿನ್ನೆ(ಏಪ್ರಿಲ್ 24) ಡಾ| ರಾಜಕುಮಾರ್ ಅವರ ಜನುಮದಿನದ ಅಂಗವಾಗಿ ಶಿವರಾಜ್ kumarಕುಮಾರ್ ಅವರ ಹೊಸ ಚಿತ್ರದ ‘ಕಾನ್ಸೆಪ್ಟ್ ಪೋಸ್ಟರ್’ ಒಂದನ್ನ ಬಿಡುಗಡೆಗೊಳಿಸಿದೆ ಚಿತ್ರತಂಡ. ‘ಘೋಸ್ಟ್’ ಎಂದು […]

ಕೆಜಿಎಫ್ 2 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸಲ್ಲಿ ಕಮಾಲ್ ಮಾಡುತ್ತಿದೆ. ಹೊಸ ದಾಖಲೆಗಳನ್ನು ಮಾಡುತ್ತಾ ಮುನ್ನುಗ್ಗುತ್ತಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿರುವ ಚಿತ್ರವನ್ನು ಎಲ್ಲಾ ಸ್ಟಾರ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ತೆಲುಗು ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವ ಅಲ್ಲು ಅರ್ಜುನ್ ಈಗ ಕೆಜಿಎಫ್ 2 ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಟ್ವೀಟ್ ಮಾಡಿರುವ ಅಲ್ಲು ಅರ್ಜುನ್ ” ಕೆಜಿಎಫ್ […]

ನಿರ್ದೇಶನ ನಟನೆಯನ್ನೂ ಮೀರಿದ ಅನುಭವ – ವಿಕ್ಕಿ ವರುಣ್

ಕೆಂಡ ಸಂಪಿಗೆ , ಕಾಲೇಜು ಕುಮಾರ ಸಿನಿಮಾಗಳಲ್ಲಿ ನಟಿಸಿ ಪ್ರತಿಭಾವಂತ ನಟರ ಪಟ್ಟಿಗೆ ಸೇರಿರುವ ನಟ ವಿಕ್ಕಿ ವರುಣ್ ಈಗ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಕಾಲಾ ಪತ್ಥರ್ ಸಿನಿಮಾದ ನಿರ್ದೇಶಕರಾಗಿ ವಿಕ್ಕಿ ವರುಣ್ ಕಾಣಿಸಿಕೊಂಡಿದ್ದು ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಕಾಲಾ ಪತ್ಥರ್ ಚಿತ್ರದ ಕಥೆಯನ್ನು ಸತ್ಯಪ್ರಕಾಶ್ ಬರೆದಿದ್ದು ಗಟ್ಟಿ ಕಥೆಯನ್ನು ಇಟ್ಟುಕೊಂಡು ಕಮರ್ಷಿಯಲ್ ಚಿತ್ರವನ್ನಾಗಿಸಲು ವಿಕ್ಕಿ ವರುಣ್ ಸಾರಥ್ಯ ವಹಿಸಿದ್ದಾರೆ. ದುನಿಯಾ ಸೂರಿ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ […]

ಅಮೃತಾ ಅಯ್ಯಂಗಾರ್ ಹ್ಯಾಟ್ರಿಕ್

ನಟಿ ಅಮೃತಾ ಅಯ್ಯಂಗಾರ್ ಮೂರನೇ ಬಾರಿಗೆ ನಟ ಧನಂಜಯ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಬಡವ ರಾಸ್ಕಲ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಗೀತಾ ಚಿತ್ರ ನಿರ್ದೇಶಿಸಿದ್ದವಿಜಯ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ” ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಕಾತರರಳಾಗಿದ್ದೇನೆ. ಇದು ಧನಂಜಯ ಅವರೊಂದಿಗೆ ಮೂರನೇ ಸಿನಿಮಾ. ಮೊದಲ ಸಿನಿಮಾದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೆ. ಎರಡನೇ ಸಿನಿಮಾ ನನಗೆ […]

ಲೀಲಾ ಪಾತ್ರದ ಭಾವನಾತ್ಮಕತೆ ನನ್ನಲ್ಲಿ ಸದಾ ಉಳಿಯುತ್ತದೆ – ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ ಕಾಂತಾರ ಚಿತ್ರದ ಮೂರು ತಿಂಗಳು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಆದರೆ ಅವರಿನ್ನೂ ರಿಯಾಲಿಟಿಗೆ ಮರಳಿಲ್ಲವಂತೆ. “ಚಿತ್ರದ ಶೂಟಿಂಗ್ ಅನುಭವ ಎಷ್ಟು ಅಗಾಧವಾಗಿತ್ತು. ಕರಾವಳಿಯ ಹಳ್ಳಿಯ ವಿಶಿಷ್ಟವಾದ ಸೂಕ್ಷ್ಮ ಅಂಶಗಳನ್ನು ತರಲು ಇಡೀ ಗ್ರಾಮವನ್ನು ಮರು ಸೃಷ್ಟಿಸಲಾಗಿದೆ. ಕುಂದಾಪುರದ ಕಾಡಿನ ಗಡಿಯಲ್ಲಿರುವ ಕುಗ್ರಾಮದಲ್ಲಿ ಇದನ್ನು ನಿರ್ಮಿಸಲಾಗಿದೆ. ನಾನು ಅಲ್ಲಿ ಐದು ತಿಂಗಳು ನೆಲೆಸಿದ್ದೆ. ಇತ್ತೀಚಿನ ಶೆಡ್ಯೂಲ್ ನಲ್ಲಿ ನನಗೆ ಮನೆಯ ಭಾವನೆ ಬರಲು ಆರಂಭವಾಯಿತು” ಎಂದಿದ್ದಾರೆ. ಕಾಂತಾರ ಎಂದರೆ ನಿಗೂಢ ಅರಣ್ಯ ಎಂಬ […]

ಜನರಿಗೆ ಧನ್ಯವಾದ ಹೇಳಿದ ರಾಕಿಂಗ್ ಸ್ಟಾರ್

ಕೆಜಿಎಫ್ 2 ಸಿನಿಮಾಕ್ಕೆ ಇಡೀ ವಿಶ್ವವೇ ಬೆರಗಾಗಿದೆ. ಪ್ರಶಂಸೆಗಳ ಸುರಿಮಳೆ ಆಗುತ್ತಿದೆ. ಜನರ ಪ್ರತಿಕ್ರಿಯೆ, ಪ್ರೀತಿ ನೋಡಿ ಹೊಂಬಾಳೆ ಫಿಲ್ಮ್ಸ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಈಗ ನಟ ಯಶ್ ಧನ್ಯವಾದ ಸಲ್ಲಿಸಿದ್ದಾರೆ.ಇದುವರೆಗೂ 600 ಕೋಟಿ ಗಳಿಸಿರುವ ಚಿತ್ರ ಕಲೆಕ್ಷನ್ ನಲ್ಲಿ ಮುನ್ನುಗ್ಗುತ್ತಿದೆ. ಯಶ್ ನಟನೆಯನ್ನು ಜನ ಮೆಚ್ಚಿದ್ದಾರೆ. ಕನ್ನಡ ಚಿತ್ರರಂಗವನ್ನು ಎಲ್ಲೆಡೆ ಪರಿಚಯಿಸಿದ ಕೆಜಿಎಫ್ ನ ಯಶಸ್ಸು ನೋಡಿ ಸಂತಸಗೊಂಡಿರುವ ಯಶ್ ಧನ್ಯವಾದ ಹೇಳಿದ್ದಾರೆ. ಕೆಜಿಎಫ್ 2 ರಿಲೀಸ್ ನಂತರ ರಾಧಿಕಾ ಹಾಗೂ ಮಕ್ಕಳೊಂದಿಗೆ ವೆಕೇಶನ್ ಮೂಡಿನಲ್ಲಿದ್ದ […]

‘ಜೇಮ್ಸ್’ ರಿ-ರಿಲೀಸ್ ಗೆ ಪ್ರತಿಕ್ರಯಿಸಿದ ಶಿವಣ್ಣ.

‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಅಪ್ಪುವನ್ನು ಕಣ್ತುಂಬಿಕೊಳ್ಳಲು ಸಾಗರದಂತೆ ಹರಿದುಬಂದಿತ್ತು ಅಭಿಮಾನಿ ಬಳಗ. ಸದ್ಯ ಸೋನಿ ಲಿವ್ ನಲ್ಲಿ ಲಭ್ಯವಿರುವ ‘ಜೇಮ್ಸ್’ ಚಿತ್ರ, ಇಂದು(ಏಪ್ರಿಲ್ 22) ಮರುಬಿಡುಗಡೆಗೊಂಡಿದೆ. ಆದರೆ ಈ ಬಾರಿಯ ಬಿಡುಗಡೆಯಲ್ಲಿ ವಿಶೇಷತೆಯೊಂದು ಸೇರಿಕೊಂಡಿದೆ. ಈಗಾಗಲೇ ತಿಳಿದಿರುವಂತೆ ‘ಜೇಮ್ಸ್’ ಚಿತ್ರದ ಸಂಪೂರ್ಣ ಚಿತ್ರೀಕರಣದ ಮೊದಲೇ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿದ್ದರು. ಅವರ ಪಾತ್ರದ ಡಬ್ಬಿಂಗ್ ಕೂಡ ಅವರ […]

‘ತೊತಾಪುರಿ’ಯ ಲೋಕಾರ್ಪಣೆ ಸ್ಟಾರ್ ನಟನಿಂದ

ನವರಸ ನಾಯಕ ಜಗ್ಗೇಶ್ ಅವರು ಅಭಿನಯಿಸಿರುವಂತ ಮುಂದಿನ ಚಿತ್ರ ‘ತೊತಾಪುರಿ’ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ‘ನೀರ್ ದೋಸೆ’ ಸಿನಿಮಾ ಖ್ಯಾತಿಯ, ವಿಜಯ್ ಪ್ರಸಾದ್ ಅವರು ರಚಿಸಿ-ನಿರ್ದೇಶಿಸಿರುವ ಈ ಚಿತ್ರದ ಮೂಲಕ ಮತ್ತೊಮ್ಮೆ ವಿಜಯ್ ಪ್ರಸಾದ್ ಹಾಗು ಜಗ್ಗೇಶ್ ಅವರ ಜೋಡಿ ಜನರನ್ನ ಮೋಡಿ ಮಾಡಲು ಸಜ್ಜಾಗಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧವಾಗಿದೆ. ಈ ಬಾರಿ ಟ್ರೈಲರ್ ಬಿಡುಗಡೆ ಮಾಡುವವರು ಬೇರಾರು ಅಲ್ಲದೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಆಗಿರಲಿದ್ದಾರೆ. ಕೆ ಎ ಸುರೇಶ […]

ಕೆಜಿಎಫ್ 2 ಮೋಡಿ ಮಾಡಿದ ರಾಕಿ ಭಾಯ್

ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಹವಾ ಎಬ್ಬಿಸಿದೆ. ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿರುವ ಈ ಚಿತ್ರದಿಂದ ಯಶ್ ಅವರಿಗೂ ಬೇಡಿಕೆ ಹೆಚ್ಚಿದೆ. ಜಾಹೀರಾತುಗಳಲ್ಲಿ ನಟಿಸಲು ಆಫರ್ಸ್ ಬರುತ್ತಿವೆ. ಈ ಮಧ್ಯೆ ಹಾಲಿನ ಉತ್ಪನ್ನಗಳನ್ನು ಹಾಗೂ ಐಸ್ ಕ್ರೀಮ್ ಮಾರಾಟ ಮಾಡುವ ಅಮೂಲ್ ಕಂಪೆನಿ ಕೆಜಿಎಫ್ ಸಿನಿಮಾ ಶೈಲಿಯಲ್ಲಿ ಜಾಹೀರಾತು ಮಾಡಿದ್ದು ಇದು ಈಗ ವೈರಲ್ ಆಗುತ್ತಿದೆ. ಅಮೂಲ್ ತನ್ನ ಪ್ರೊಡಕ್ಟ್ ಗಳ ಮಾರಾಟಕ್ಕೆ ಹಲವು ತಂತ್ರಗಳನ್ನು ಬಳಸುತ್ತದೆ. ಟ್ರೆಂಡ್ ಗೆ ತಕ್ಕಂತೆ ಜಾಹೀರಾತು ಸಿದ್ಧಪಡಿಸುತ್ತದೆ. ಕ್ರೀಡೆ, ಸಿನಿಮಾ,ರಾಜಕೀಯ […]

ದಾಖಲೆಗಳನ್ನೆಲ್ಲ ಧ್ವಂಸಗೊಳಿಸುತ್ತಿದೆ ಕೆಜಿಎಫ್ ಚಾಪ್ಟರ್ 2

“ಇದಿನ್ನು ಆರಂಭ, ಕಥೆ ಈಗ ಶುರುವಾಗ್ತಿದೆ” ಎಂದು ಕುತೂಹಲ ಹುಟ್ಟಿಸಿ ಕೊನೆಯಾಗಿತ್ತು ಕೆಜಿಎಫ್ ಚಾಪ್ಟರ್ 1. ಆ ಮಾತು ಪ್ರಾಯಷಃ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮಾಡಿದಂತ ದಾಖಲೆಗಳಿಗೂ ಕೂಡ ಸರಿಹೊಂದುವಂತೆ ಬರೆಯಲಾಗಿತ್ತೇನೋ. ಇಡೀ ಪ್ರಪಂಚವೇ ಚಾಪ್ಟರ್ 2ಗೆ ಕಾಯುವಂತೆ ಮಾಡಿತ್ತು ಮೊದಲಾರ್ಧ. ಆ ಎಲ್ಲ ನಿರೀಕ್ಷೆಗಳ ಉತ್ತರವಾಗಿ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಯಾಗಿದೆ. ಪ್ರಪಂಚದ ವಿವಿಧ ಕಡೆಗಳಲ್ಲಿ ಬಿಡುಗಡೆ ಕಂಡಿರುವ ಚಿತ್ರ ಪ್ರತಿಯೊಂದು ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿದೆ. ಎಲ್ಲ […]