ಸಿನಿಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ…

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರಿ ಫೈಲ್ಸ್” ಚಿತ್ರ ಭಾರತದಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಚಿತ್ರಕ್ಕೆ ಪ್ರಧಾನಿ ಮೋದಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಈ ಸಿನಿಮಾದ ಕುರಿತು ಹೊಸ ಸುದ್ದಿ ಬಂದಿದೆ. ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಈಗ ಬೇರೆ ಭಾಷೆಗಳಲ್ಲಿ ಡಬ್ ಆಗಿದೆ. ಹೀಗಾಗಿ ತಮ್ಮ ಭಾಷೆಯಲ್ಲಿ ಈ ಚಿತ್ರ ವೀಕ್ಷಿಸಬಹುದು. 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಘಟನೆಯ ಆಧಾರಿತವಾದ ಈ ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಸಿನಿಮಾವನ್ನು […]
ತುಳು ಚಿತ್ರದ ವಿಭಿನ್ನ ವೈಖರಿ

ತುಳು ಚಿತ್ರಗಳು ಇಂದು ಭಾರತದ ಗಡಿ ಮೀರಿ ಬೆಳೆಯುತ್ತಿದೆ. ಇದೀಗ ತುಳು ಚಿತ್ರವೊಂದು 11 ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿರುವುದೇ ಅದಕ್ಕೆ ಸಾಕ್ಷಿ. ತುಳು ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಚಿತ್ರ ಜಗತ್ತಿನ ಹನ್ನೊಂದು ರಾಷ್ಟ್ರಗಳಲ್ಲಿ ರಿಲೀಸ್ ಆಗುತ್ತಿದೆ. ವೈಭವ್ ಪ್ಲಿಕ್ಸ್ ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ “ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ” ಚಿತ್ರ ತಯಾರಾಗಿದ್ದು ಮೇ 13,14,15 ರಂದು ಹಲವು ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಪ್ರೀಮಿಯರ್ ಶೋ ನ ಉದ್ಘಾಟನೆ ಎಪ್ರಿಲ್ 24ರಂದು ದುಬೈನಲ್ಲಿ […]
ಅದೃಷ್ಟ ಪರೀಕ್ಷೆಗೆ ಮುಂದಾದ ಪವನ್ ಒಡೆಯರ್

ಕನ್ನಡದಲ್ಲಿ ನಿರ್ದೇಶನ ಮಾಡಿ ಯಶಸ್ಸು ಗಳಿಸಿ ಪರಭಾಷಾ ಚಿತ್ರರಂಗಕ್ಕೆ ಹಲವು ನಿರ್ದೇಶಕರು ಕಾಲಿಟ್ಟಿದ್ದಾರೆ. ಪ್ರಶಾಂತ್ ನೀಲ್ , ಪ್ರಶಾಂತ್ ರಾಜ್ ಮುಂತಾದ ನಿರ್ದೇಶಕರು ತೆಲುಗು , ತಮಿಳು ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಈಗ ಈ ಸಾಲಿಗೆ ಪವನ್ ಒಡೆಯರ್ ಸೇರ್ಪಡೆಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಗೂಗ್ಲಿ, ಗೋವಿಂದಾಯ ನಮಃ, ರಣವಿಕ್ರಮ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ಈಗ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪವನ್ ಅವರ […]
ವಿಭಿನ್ನ ಪಾತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ ತಾರಾ

ನಟ ಸುಜಯ್ ಶಾಸ್ತ್ರಿ ಎಲ್ಲರ ಕಾಲೆಳೆಯುತ್ತೆ ಕಾಲ ಎಂಬ ಎರಡನೇ ಸಿನಿಮಾ ಮಾಡುತ್ತಿದ್ದಾರೆ. 80ರ ದಶಕದಲ್ಲಿನ ಕಥೆ ಹೊಂದಿರುವ ಈ ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ನಟನೆಗೆ ಕಾಲಿಡುತ್ತಿದ್ದಾರೆ. ಈಗ ಈ ಸಿನಿಮಾ ತಂಡದಿಂದ ಇನ್ನೊಂದು ಹೊಸ ಸುದ್ದಿ ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಈ ಸಿನಿಮಾ ಬಳಗ ಸೇರಿಕೊಂಡಿದ್ದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ತಾರಮ್ಮ ಈ ಸಿನಿಮಾದಲ್ಲಿ ರಿಂದವ್ವ ಪಾತ್ರ ಮಾಡುತ್ತಿದ್ದಾರೆ. ಚಮತ್ಕಾರ ಹಾಗೂ ಸ್ವಲ್ಪ ಅತೀಂದ್ರಿಯ ವ್ಯಕ್ತಿ […]
ರಾಕಿ ಭಾಯ್ ಸ್ಟೈಲ್ ನ ಹಿಂದಿನ ಗುಟ್ಟು ಇವರೇ ನೋಡಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಈಗಾಗಲೇ ರಿಲೀಸ್ ಆಗಿದ್ದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿಯೂ ಸಕತ್ ಸದ್ದು ಮಾಡುತ್ತಿದೆ. ಇನ್ನು ಕೆಜಿಎಫ್ ಸಿನಿಮಾದ ಡೈಲಾಗ್ ಗಳು ಕಿಯೇಟ್ ಮಾಡಿರುವ ಟ್ರೆಂಡ್ ಅಷ್ಟಿಷ್ಟಲ್ಲ. ಇದರ ಜೊತೆಗೆ ಯಶ್ ಅವರ ಸ್ಟೈಲ್ ಕೂಡಾ ಟ್ರೆಂಡ್ ಸೃಷ್ಟಿ ಮಾಡಿದೆ. ಹೌದು, ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾದಲ್ಲಿನ ಯಶ್ ನ […]
ಮತ್ತೆ ಮೋಡಿ ಮಾಡಲಿದ್ದಾರೆ ಟಗರು ಪುಟ್ಟಿ

ಕೆಂಡಸಂಪಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಮಾನ್ವಿತಾ ಕಾಮತ್ ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರೋಮಿಯೋ ಖ್ಯಾತಿಯ ಪಿ.ಸಿ ಶೇಖರ್ ಅವರ ನಿರ್ದೇಶನದ ಸಿನಿಮಾವನ್ನು ಒಪ್ಪಿಕೊಂಡಿದ್ದು ಅದರಲ್ಲಿ ವಿಭಿನ್ನ ಪಾತ್ರದ ಮೂಲಕ ಸಿನಿಪ್ರಿಯರನ್ನು ರಂಜಿಸಲು ಮಾನ್ವಿತಾ ತಯಾರಾಗಿದ್ದಾರೆ. ಪಿ.ಸಿ.ಶೇಖರ್ ಅವರ ಇನ್ನು ಹೆಸರಿಡಬೇಕಾದ ಸಿನಿಮಾದಲ್ಲಿ ರೈತ ಮಹಿಳೆಯಾಗಿ ಮಾನ್ವಿತಾ ಬಣ್ಣ ಹಚ್ಚಲಿದ್ದಾರೆ. ಅಂದ ಹಾಗೇ ಪ್ರೀತಿಯ ರಾಯಭಾರಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ ಅವರು ಈ ಸಿನಿಮಾದಲ್ಲಿ […]
ಪುನರ್ಜನ್ಮ ಪಡೆದ ರಣಧೀರ

ಮತ್ತೊಬ್ಬ ಸ್ಟಾರ್ ಗಳಿಂದ ಸ್ಪೂರ್ತಿ ಪಡೆದುಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಮಾತ್ರವಲ್ಲ ಇನ್ನೊಬ್ಬರ ಲುಕ್ ನನ್ನು ನಕಲಿ ಮಾಡಲು ಪ್ರಯತ್ನಿಸುತ್ತಾರೆ. ಈಗ ಕಿರುತೆರೆ ನಟ ಅಭಿಷೇಕ್ ದಾಸ್ ಈಗ ರವಿಚಂದ್ರನ್ ಅವರ ಲುಕ್ ನನ್ನು ಕಾಪಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರವಿಚಂದ್ರನ್ ಅವರ ರಣಧೀರ ಸಿನಿಮಾದ ಲುಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರ ರಣಧೀರ ಸಿನಿಮಾದ ಪಾತ್ರವನ್ನು ಇದು ನೆನಪಿಸುವಂತಿದೆ. ಕಪ್ಪು ಪ್ಯಾಂಟ್ ಹಾಗೂ ಕಪ್ಪು ಸ್ಲೀವ್ ಲೆಸ್ ಟಿ ಶರ್ಟ್ ಧರಿಸಿ ಹಣೆಗೆ […]
ಮುಂಗಡ ಬುಕಿಂಗ್ ನಲ್ಲಿ ಬಾಹುಬಲಿಯನ್ನೇ ಹಿಂದಿಕ್ಕಿತು ಕೆಜಿಎಫ್!!

ಕೆಜಿಎಫ್ ಹಾಗು ಬಾಹುಬಲಿ, ನಿಸ್ಸಂದೇಹವಾಗಿ ಭಾರತ ಚಿತ್ರರಂಗದ ಎರಡು ದಿಗ್ಗಜ ಹೆಸರುಗಳು. ಕೆಜಿಎಫ್ ಗು ಬಲುಮುನ್ನವೇ ಬಂದಂತಹ ಬಾಹುಬಲಿ ಚಿತ್ರ ಮಾಡಿದಂತ ರೆಕಾರ್ಡ್ ಗಳಿಗೆ ಲೆಕ್ಕವೇ ಇಲ್ಲ. ಆ ರೆಕಾರ್ಡ್ ಗಳನ್ನು ಮುರಿಯಲು ಮತ್ತೊಂದು ಬೃಹತ್ ಚಿತ್ರವೇ ಬರಬೇಕು ಎಂಬ ಮಾತು ಇಡೀ ದೇಶದಾದ್ಯಂತ ಹಬ್ಬಿತ್ತು. ಈಗ ಆ ರೆಕಾರ್ಡ್ ಗಳು ಒಂದೊಂದಾಗಿ ತಲೆಕೆಳಗಾಗುತ್ತಿವೆ. ಕಾರಣ ಇಂದು(ಏಪ್ರಿಲ್ 14) ಬಿಡುಗಡೆಯಾಗಿರುವ ಕೆಜಿಎಫ್ ಚಾಪ್ಟರ್ 2. ಏಪ್ರಿಲ್ 10ರಿಂದ ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರದ ಮುಂಗಡ […]
ವಿಭಿನ್ನವಾಗಿ ತೆರೆ ಮೇಲೆ ಬರಲಿದ್ದಾರೆ ಈ ಹೊಸ ನಟ

ನಟ ಲಿಖಿತ್ ಶೆಟ್ಟಿ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ವಿನಾಯಕ ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ. ಹೆಸರಿಡದ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿರುವ ಲಿಖಿತ್ ” ನಾನು ವಿನಾಯಕ ಅವರ ಕೆಲಸದಿಂದ ಆಕರ್ಷಿತನಾದೆ. ಅವರು ಮೂರು ಕಿರು ಚಿತ್ರಗಳನ್ನು ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ನನ್ನ ಬಳಿ ಈ ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ತಂದಾಗ ನನ್ನ ಗಮನ […]
ಬಹುಕಾಲದ ಕನಸು ನನಸಾಗಿದೆ ಎಂದ ಕರಾವಳಿ ಕುವರಿ

ಕೋಸ್ಟಲ್ ವುಡ್ ನಲ್ಲಿ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟು ಮನೋಜ್ಞ ನಟನೆಯ ಮೂಲಕ ಕರಾವಳಿಯಲ್ಲಿ ಮನೆ ಮಾತಾಗಿರುವಸೋನಲ್ ಮೊಂತೆರೋ ಚಂದನವನದಲ್ಲಿ ಮಿಂಚಿದ ಚೆಲುವೆ. ಸಾಲು ಸಾಲು ಕನ್ನಡ ಸಿನಿನಾಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಕಡಲನಗರಿ ಕುವರಿ ಈಗ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಂಗೀತ ನಿರ್ದೇಶಕ ವಿನಯ್ ಚಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಶಾಂತಿಪ್ರಿಯ […]

