ಶ್ರೀಮುರಳಿ ಜೊತೆ ಪ್ರಶಾಂತ್ ನೀಲ್

ಉಗ್ರಂ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದರು. ಈಗ ಕೆಜಿಎಫ್ 2 ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದರ ಬಿಡುಗಡೆಗೆ ಮುನ್ನವೇ ಪ್ರಶಾಂತ್ ದಕ್ಷಿಣ ಭಾರತದ ಖ್ಯಾತ ನಟರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಅವರೊಂದಿಗೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಪ್ರಶಾಂತ್ ಇನ್ನು ಕನ್ನಡದಲ್ಲಿ ಕೆಲಸ ಮಾಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಈ ಊಹಾಪೋಹಗಳಿಗೆ ಪ್ರಶಾಂತ್ ಉತ್ತರ ನೀಡಿದ್ದಾರೆ. […]

ಬೆಳ್ಳಿತೆರೆ ಮೇಲೆ ರಾಯನ್ ರಾಜ್ ಸರ್ಜಾ

ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಚಿರಂಜೀವಿ ಅವರ ಕೊನೆಯ ಚಿತ್ರ ಇದಾಗಿರುವುದರಿಂದ ದೊಡ್ಡ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರ ತಂಡ ವಿಶೇಷ ಪೂಜೆಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಮ್ ನಾರಾಯಣ್ ವಿಶೇಷ ಸುದ್ದಿ ನೀಡಿದ್ದಾರೆ. ಈ ಚಿತ್ರದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಕೆಲಸ ರಾಯನ್ ಹುಟ್ಟುವ ಮೊದಲೇ ಪೂರ್ಣಗೊಂಡಿತ್ತು. ರಾಯನ್ ಚಿತ್ರದಲ್ಲಿ ಯಾವ ರೀತಿ ಎಂಟ್ರಿ ನೀಡಬಹುದು ಎಂಬ […]

ಐಶಾನಿ ಶೆಟ್ಟಿ ಹೊಸ ಹೆಜ್ಜೆ

ಮುದ್ದಾದ ನೋಟ, ಮನೋಜ್ಞ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದಿರುವ ಕರಾವಳಿ ಕುವರಿ ಐಶಾನಿ ಶೆಟ್ಟಿ ಕಿರು ಚಿತ್ರ “ಕಾಜಿ” ಮೂಲಕ ನಿರ್ದೇಶಕಿಯಾಗಿ ಭಡ್ತಿ ಪಡೆದಿದ್ದರು. ಮೊದಲ ಬಾರಿಗೆ ನಿರ್ದೇಶಕಿಯಾಗಿ ಸೈ ಎನಿಸಿಕೊಂಡಿರುವ ಐಶಾನಿ ಶೆಟ್ಟಿ ಈಗ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. “ನಾನು ಸದ್ಯ ಚಿತ್ರಕಥೆ ಬರೆಯುತ್ತಿದ್ದೇನೆ. ಈ ವರ್ಷವೇ ಸೆಟ್ಟೇರಲಿದೆ. ಇದು ಸ್ವಲ್ಪ ಸಮಯದಿಂದ ನನ್ನ ಮನದಲ್ಲಿದೆ. ಈ ಹಿಂದೆ ನಾನು ಕಾಜಿ ಎಂಬ ಚಿತ್ರ ನಿರ್ದೇಶಿಸಿದೆ. ನಾನು ಭವಿಷ್ಯದಲ್ಲಿ ಅದನ್ನು ಅನುಸರಿಸಬೇಕೆಂದು […]

ಬಾಲಿವುಡ್ ಗೇಕೆ ಕಾಲಿಡಬಾರದು ಎಂಬ ಪ್ರಶ್ನೆಗೆ ರಾಕಿ ಭಾಯ್ ನೀಡಿದ ಉತ್ತರ ಇದೇ ನೋಡಿ

ನಟ ಯಶ್ ಈಗ ಕೇವಲ ಕನ್ನಡದ ನಟರಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಈಗ ಕೆಜಿಎಫ್ 2 ಸಿನಿಮಾದ ಮೂಲಕ ವಿಶ್ವದಾದ್ಯಂತ ಮೋಡಿ ಮಾಡಲು ಹೊರಟಿದ್ದಾರೆ. ಕೆಜಿಎಫ್ 2 ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯಶ್ ಹಲವು ಸಂದರ್ಶನ ಹಾಗೂ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬೈ , ದೆಹಲಿಗಳಲ್ಲಿ ಹಲವು ಸಂದರ್ಶನಗಳಲ್ಲಿ ಯಶ್ ಅವರಿಗೆ ನೀವ್ಯಾಕೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಬಾರದು ಎಂಬ ಪ್ರಶ್ನೆಗಳನ್ನು ಮೀಡಿಯಾದವರು ಕೇಳುತ್ತಿದ್ದಾರೆ. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿರುವ ಯಶ್ “ಬೇರೆ ಯಾವುದೋ ಚಿತ್ರರಂಗಕ್ಕೆ […]

ಕೆಜಿಎಫ್ Vs ಜೆರ್ಸಿ?

ಏಪ್ರಿಲ್ ತಿಂಗಳ ಈ ವಾರ ಸಿನಿರಸಿಕರಿಗೆ ಹಬ್ಬವೇ ಕಾದಿದೆ ಎಂದೇ ಹೇಳಲಾಗಿತ್ತು. ಒಂದೆಡೆ ಬಹುನಿರೀಕ್ಷಿತ ಕೆಜಿಎಫ್ ಆದರೆ, ಇನ್ನೊಂದೆಡೆ ತಳಪತಿ ವಿಜಯ್ ಅವರ ‘ಬೀಸ್ಟ್’, ಇವೆರಡರ ಮಧ್ಯೆ ಸದ್ದಿಲ್ಲದೇ ಸಿದ್ಧವಾಗಿತ್ತು ಶಾಹಿದ್ ಕಪೂರ್ ಅವರ ‘ಜೆರ್ಸಿ’. ಒಬ್ಬ ಸಿನಿಮಾ ಪ್ರೇಕ್ಷಕನಿಗೆ ಇನ್ನೇನು ಬೇಕು. ಆದರೀಗ ಒಂದು ನಿರಾಸೆ ಕಾದಿದೆ. ಮೂರರಲ್ಲಿ ಒಂದು ಚಿತ್ರ ಬಿಡುಗಡೆಗೆ ಬದಲಿ ದಿನಾಂಕವನ್ನ ಹುಡುಕಿಟ್ಟಿದೆ. ಅದುವೇ ಬಾಲಿವುಡ್ ನ ‘ಜೆರ್ಸಿ’. ನ್ಯಾಚುರಲ್ ಸ್ಟಾರ್ ನಾನಿ ಅವರ 2019ರಲ್ಲಿ ಬಿಡುಗಡೆಗೊಂಡ ಅತಿಮೆಚ್ಚುಗೆಗಳನ್ನ ತನ್ನ ತೆಕ್ಕೆಗೆ […]

ಆನಂದ್ ಇಂಗಳಗಿಯ ಪಾತ್ರಕ್ಕೆ ಬದಲಾವಣೆ ಏಕೆ?

ಕೆಜಿಎಫ್ ಚಾಪ್ಟರ್ 2 ಚಿತ್ರ ನಿಸ್ಸಂದೇಹವಾಗಿ ಪ್ರಪಂಚದಾದ್ಯಂತ ಅತ್ಯಂತ ನಿರೀಕ್ಷಿತ ಚಿತ್ರ. ಬಿಡುಗಡೆಗೆ ಬಾಕಿ ಇರುವುದು ಕೇವಲ ಎರಡೇ ಎರಡು ದಿನಗಳು. ಸದ್ಯ ಎಲ್ಲೆಲ್ಲೂ ಕೆಜಿಎಫ್ ನದ್ದೇ ಸದ್ದು. ಚಿತ್ರತಂಡ ಕೂಡ ಭಾರತದಾದ್ಯಂತ ಸಂಚರಿಸಿ ಜನರನ್ನ ಸೆಳೆಯೋ ಕಾರ್ಯದಲ್ಲಿದ್ದಾರೆ. ರಾಕಿ ಭಾಯ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಶ್ರೀನಿಧಿ ಶೆಟ್ಟಿ, ಅಧೀರ ಸಂಜು ಬಾಬಾ, ಇವರೆಲ್ಲರ ಜೊತೆ ‘ಕೆಜಿಎಫ್’ ಕಥೆಯ ಅಸಲಿ ನಾಯಕ ಪ್ರಶಾಂತ್ ನೀಲ್ ಕೂಡ ಸುದ್ದಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಪತ್ರಿಕಾಗೋಷ್ಟಿಯಲ್ಲಿ ನೀಲ್ […]

ಹಿಜಬ್ ಧರಿಸಿದ ಜನಪ್ರಿಯ ನಟಿ ಶ್ರುತಿ… ಕಾರಣ ಏನು ಗೊತ್ತಾ?

ಕರ್ನಾಟಕದಲ್ಲಿ ಹಿಜಾಬ್ ವಿವಾದ ಜೋರಾಗಿದೆ. ಹಿಜಾಬ್ ಧರಿಸಿ ಮಕ್ಕಳು ಶಾಲಾ ಕಾಲೇಜುಗಳಿಗೆ ಬರಬಾರದು ಎಂಬ ಫರ್ಮಾನು ಕೂಡಾ ಹೊರಡಿಸಿದೆ. ಇದರ ಮಧ್ಯೆ ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಹಿಜಬ್ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಅರೇ ಇವರು ಯಾಕೆ ಹಿಜಬ್ ಧರಿಸಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಶ್ರುತಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಮುಸಲ್ಮಾನ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಹಿಜಬ್ ಧರಿಸಿದ್ದಾರೆ. “13” ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕೆ ನರೇಂದ್ರ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ […]

ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಸಂತಸವಿದೆ ಎಂದ ನಟಿ

ಮಾಯಾ ಕನ್ನಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕಾಜಲ್ ಕುಂದರ್ ಈಗ ನಟ ಪ್ರಮೋದ್ ಅವರೊಂದಿಗೆ ಬಾಂಡ್ ರವಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈ ಸಿನಿಮಾದಲ್ಲಿ ಅವರ ಪಾತ್ರದ ಕುರಿತು ಮಾತನಾಡಿರುವ ಕಾಜಲ್ “ನನ್ನದು ಪಕ್ಕದ ಮನೆ ಹುಡುಗಿಯ ರೀತಿಯ ಪಾತ್ರವಾಗಿದೆ”ಎಂದಿದ್ದಾರೆ. “ನಾನು ನನ್ನ ಪಾತ್ರದ ಬಗ್ಗೆ ಈಗ ಬರಿ ಇಷ್ಟನಷ್ಟೇ ಬಹಿರಂಗ ಮಾಡಬಲ್ಲೆ. ಚಿತ್ರತಂಡ ಕೂಡಾ ನನ್ನ ಪಾತ್ರದ ಬಗ್ಗೆ ಇಷ್ಟೇ ಹೇಳಲು ಬಯಸಿದೆ. ನಾನು ಪ್ರಮೋದ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅವರೊಬ್ಬ […]

‘ಉಗ್ರಂ’ – ‘ಸಲಾರ್’ ವಾರ್

ಪಾನ್-ಇಂಡಿಯನ್ ನಿರ್ದೇಶಕ, ಕನ್ನಡಿಗ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್ ಚಾಪ್ಟರ್ 2ರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕೆಜಿಎಫ್ ಚಾಪ್ಟರ್ 1 ರಿಂದ ಭಾರತದಾದ್ಯಂತ ಪ್ರಖ್ಯಾತರಾದ ನೀಲ್, ತಮ್ಮ ಮುಂದಿನ ಚಿತ್ರವನ್ನ ಟೋಲಿವುಡ್ ನ ಪಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಅವರಿಗೆ ನಿರ್ದೇಶಿಸುತ್ತಿರಿವುದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಈ ಚಿತ್ರದ ಬಗೆಗಿನ ಗುಸುಗಸುವೊಂದಕ್ಕೆ ನೀಲ್ ತೆರೆ ಎಳೆದಿದ್ದಾರೆ. ‘ಸಲಾರ್’ ಮುಂದೆ ಬರಲಿರೋ ಚಿತ್ರಗಳ ಸಾಲಿನಲ್ಲಿರೋ ಅತ್ಯಂತ ನಿರೀಕ್ಷಿತ ಪಾನ್ ಇಂಡಿಯನ್ ಚಿತ್ರ ಎಂದರೆ ತಪ್ಪಿಲ್ಲ. ‘ಹೊಂಬಾಳೆ ಫಿಲಂಸ್’ ಸಂಸ್ಥೆಯಡಿಯಲ್ಲಿ […]

ಸಿನಿ ರಂಗದಲ್ಲಿ ಸಕತ್ ಬ್ಯುಸಿ ತುಪ್ಪದ ಬೆಡಗಿ

ವೀರ ಮದಕರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ ಈಗಂತೂ ಚಿತ್ರರಂಗದಲ್ಲಿ ಸಕತ್ ಬ್ಯುಸಿ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ತುಪ್ಪದ ಬೆಡಗಿ ರಾಗಿಣಿ ಕನ್ನಡ ಮಾತ್ರವಲ್ಲದೇ ಪರಭಾಷೆಗಳಿಂದಲೂ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕಡೆಯದಾಗಿ ಶರಣ್ ಅವರೊಂದಿಗೆ “ಅಧ್ಯಕ್ಷ ಇನ್ ಅಮೆರಿಕ “ಚಿತ್ರದಲ್ಲಿ ನಟಿಸಿದ್ದ ರಾಗಿಣಿ ಸ್ವಲ್ಪ ಸಮಯ ಬಣ್ಣದ ಜಗತ್ತಿನಿಂದ ದೂರವುಳಿದಿದ್ದರು. ಈಗ ನಟನಾ ಜಗತ್ತಿಗೆ ಮರಳಿರುವ ರಾಗಿಣಿ ಮತ್ತೆ ಪವರ್ ಫುಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ವಿಶಾಲ್ ಶೇಖರ್ ನಿರ್ದೇಶನದ “ಕರ್ವ […]