ಮತ್ತೆ ತೆರೆಮೇಲೆ ರಾಘವೇಂದ್ರ ರಾಜ್ ಕುಮಾರ್?

ನಟ ರಾಘವೇಂದ್ರ ರಾಜ್ ಕುಮಾರ್ ಈಗ ವಿಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಸಿನಿರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್. ಇದೀಗ “13” ಎನ್ನುವ ವಿಭಿನ್ನ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಣ್ಣ ಹಚ್ಚುತ್ತಿದ್ದು ಅದರಲ್ಲಿ ಗುಜರಿ ಅಂಗಡಿ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಶ್ರುತಿ ಕೂಡಾ ಸಾಥ್ ನೀಡಲಿದ್ದಾರೆ. ಮುಸ್ಲಿಂ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದು ಈ […]
ಕನ್ನಡ ಸಿನಿರಂಗಕ್ಕೆ ಹೊಸ ನಟಿ

ಹೆಡ್ ಬುಷ್ ಚಿತ್ರದ ಮೂಲಕ ನಟಿ ಪಾಯಲ್ ರಜಪೂತ್ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ನಟ ಧನಂಜಯ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಪಾಯಲ್ ರಜಪೂತ್ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಪಾಯಲ್ ರಜಪೂತ್ ಹೆಡ್ ಬುಷ್ ಕುರಿತು ಹಾಕಿರುವ ಪೋಸ್ಟ್ ವೊಂದನ್ನು ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದು ಅದೀಗ ವೈರಲ್ ಆಗಿದೆ. ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರುವ ಪಾಯಲ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಯೊಬ್ಬರು ನೀವು ಯಾವಾಗ ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ? ಎಂದು […]
‘777 ಚಾರ್ಲಿ’ ಚಿತ್ರತಂಡದಿಂದ ಕೊನೆಗೂ ಒಂದು ಶುಭಸುದ್ದಿ.

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳನ್ನ ಹುಟ್ಟುಹಾಕೋ ಕಲಾವಿದರುಗಳಲ್ಲಿ ಮೊದಲಿಗರು ರಕ್ಷಿತ್ ಶೆಟ್ಟಿ. ಮಾಡಿರುವುದು ಬೆರಳೆಣಿಕಿಯಷ್ಟು ಸಿನಿಮಾಗಳಷ್ಟೇ ಆಗಿದ್ದರು ಸಹ ಕನ್ನಡಿಗರ ಮನದಲ್ಲಿ ಇವರಿಗೆ ವಿಶೇಷ ಸ್ಥಾನ ಭದ್ರವಾಗಿದೆ. ಇವರ ನಟನೆಯಲ್ಲಿ ಬಿಡುಗಡೆಯಾದ ಕೊನೆಯ ಚಿತ್ರ ‘ಅವನೇ ಶ್ರೀಮನ್ನಾರಾಯಣ’. ಅದು ಕೂಡ ಸುಮಾರು ಮೂರು ವರ್ಷಗಳ ಹಿಂದೆ, ಅಂದರೆ 2019ರಲ್ಲಿ. ಇವರ ಬಹುನಿರೀಕ್ಷಿತ ಚಿತ್ರ ‘777 ಚಾರ್ಲಿ’ ಬಿಡುಗಡೆಗೆ ಸಿದ್ದವಾಗಿ ತಿಂಗಳುಗಳೇ ಕಳೆದಿವೆ. ಆದರೆ ಬಿಡುಗಡೆಗೆ ಮುಹೂರ್ತ ಮಾತ್ರ ಕೂಡಿಬಂದಿರಲಿಲ್ಲ. ‘777 ಚಾರ್ಲಿ’ ಒಂದು ಪಾನ್-ಇಂಡಿಯನ್ ಚಿತ್ರ. ಯಾರೊಂದಿಗೂ […]
ಪಿ ಆರ್ ಕೆ ಪ್ರೊಡಕ್ಷನ್ ನಿಂದ ಹತ್ತನೇ ಸಿನಿಮಾ ಘೋಷಣೆ.. ಟೈಟಲ್ ಏನು ಗೊತ್ತಾ?

ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸು ಪಿಆರ್ ಕೆ ಪ್ರೊಡಕ್ಷನ್ ನಿಂದ ಈಗ ಹೊಸ ಸಿನಿಮಾ ಘೋಷಣೆ ಆಗಿದೆ. “ಆಚಾರ್ ಆಂಡ್ ಕೋ” ಸಿನಿಮಾ ಪಿಆರ್ ಕೆ ಪ್ರೊಡಕ್ಷನ್ ನಿಂದ ಮೂಡಿಬರುತ್ತಿರುವ ಹತ್ತನೇ ಸಿನಿಮಾ ಹೌದು. ಆಚಾರ್ ಆಂಡ್ ಕೋ ಸಿನಿಮಾ 1970ರ ದಶಕದ ಕಥೆಯನ್ನು ಹೊಂದಿದ್ದು, ಆ ಕಾಲದ ಬೆಂಗಳೂರನ್ನು ತೋರಿಸುವ, ಆಗಿನ ಮನುಷ್ಯ ಸಂಬಂಧವನ್ನು ಮತ್ತೆ ಕಟ್ಟಿ ಕೊಡುವ ಯತ್ನ ಮಾಡಲಿದೆ. ಈ ಸಿನಿಮಾದಲ್ಲಿ ಮಹಿಳೆಯರೇ ಕೆಲಸ ಮಾಡುತ್ತಿರುವುದು ವಿಶೇಷ. ಈ ಸಿನಿಮಾವನ್ನು […]
ಈ ದೇಶದಲ್ಲಿ ‘ಬೀಸ್ಟ್’ ಬ್ಯಾನ್!!!

ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ತಳಪತಿ ವಿಜಯ್ ಅವರ ಮುಂದಿನ ಚಿತ್ರ ‘ಬೀಸ್ಟ್’ ಇದೇ ಏಪ್ರಿಲ್ 13ರಿಂದ ಪ್ರಪಂಚಾದಾದ್ಯಂತ ಪ್ರದರ್ಶನ ಕಾಣಲಿದೆ.ಅಭಿಮಾನಿಗಳು ಹುಚ್ಚೆದ್ದು ಕಾಯುತ್ತಿರೋ ಈ ಚಿತ್ರದೆಡೆಗೆ ಬಿಡುಗಡೆಯಾದಂತ ಹಾಡುಗಳಿಂದ ಎತ್ತರವನೇರಿದ ನಿರೀಕ್ಷೆಗಳು ಟ್ರೈಲರ್ ತೆರೆಕಂಡಮೇಲಂತು ಮುಗಿಲು ಮುಟ್ಟಿವೆ. ಇಂತಹ ಒಂದು ಅತೀ ಪ್ರಸಿದ್ಧ, ಅತಿನಿರೀಕ್ಷಿತ ಸಿನಿಮಾ ಕುವೈತ್ ನಲ್ಲಿ ಬ್ಯಾನ್ ಆಗಿಹೋಗಿದೆ. ಚೆನ್ನೈ ನಲ್ಲಿರೋ ಮಾಲ್ ಒಂದನ್ನು ತಮ್ಮ ವಶದಲಿಟ್ಟುಕೊಳ್ಳೋ ಒಂದಷ್ಟು ಉಗ್ರಗಾಮಿಗಳು ಹಾಗು ಅದನ್ನ ನಿವಾರಿಸೋ ಪೊಲೀಸ್ ಅಧಿಕಾರಿಯ ನಡುವಿನ ಕಥೆ ಈ […]
ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಹೊಸ ಪ್ರತಿಭೆಗಳಿಗೆ ಶುಭಹಾರೈಸಿದ ಕಿಚ್ಚ

ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ಸುದೀಪ್ ಯಾವಾಗಲೂ ಮುಂದೆ ಇರುತ್ತಾರೆ. ಹಲವು ಯುವ ಪ್ರತಿಭೆಗಳಿಗೆ ಬೆಂಬಲ ನೀಡುವ ಸುದೀಪ್ ಈಗ ಬಡಿಗೇರ್ ದೇವೇಂದ್ರ ನಿರ್ದೇಶನದ “ಇನ್” ಚಿತ್ರಕ್ಕೆ ಶುಭ ಕೋರಿದ್ದಾರೆ. ಪ್ರಯೋಗಾತ್ಮಕ ಚಿತ್ರವಾಗಿರುವ” ಇನ್ ” ನ ಟೀಸರ್ ನ್ನು ಸುದೀಪ್ ಬಿಡುಗಡೆ ಮಾಡಿದ್ದು ಟೀಸರ್ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಇನ್ ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ರುದ್ರಿ ಎಂಬ ಮಹಿಳಾ ಪ್ರಧಾನ ಚಿತ್ರ […]
ಹೊಸ ಸಾಹಸಕ್ಕೆ ಮುಂದಾದ ವಸಿಷ್ಠ ಸಿಂಹ… ಏನು ಗೊತ್ತಾ?

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ವಸಿಷ್ಠ ಸಿಂಹ ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಟ, ವಿಲನ್, ಹೀರೋ ಆಗಿ ಗುರುತಿಸಿಕೊಂಡಿರುವ ವಶಿಷ್ಠ ಸಿಂಹ ತಮ್ಮದೇ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ವಿಚಾರವನ್ನು ಅವರೇ ಘೋಷಿಸಿದ್ದಾರೆ. “ಸಿಂಹ ಆಡಿಯೋ ” ಎಂಬ ಲೇಬಲ್ ನ್ನು ಆರಂಭಿಸಿರುವ ವಶಿಷ್ಠ ಸಿಂಹ ಅವರ ನಟನೆಯ ಕಾಲಚಕ್ರ ಸಿನಿಮಾದ ನೀನೇ ಬೇಕು ಹಾಡು ಅವರ ಸಿಂಹ ಆಡಿಯೋ ಮೂಲಕ ಎಪ್ರಿಲ್ 4ಕ್ಕೆ ರಿಲೀಸ್ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ […]
ಯಶ್ ಜೊತೆಗೆ ನಟಿಸಲು ಸಿಕ್ಕಿರುವುದು ನನ್ನ ಭಾಗ್ಯ ಎಂದ ಬಾಲಿವುಡ್ ಬೆಡಗಿ

ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರ ಎಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಯಶ್, ಸಂಜಯ್ ದತ್ ಹಾಗೂ ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡ ದೇಶಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ಶೂಟಿಂಗ್ ಅನುಭವಗಳನ್ನು ಕೂಡಾ ಚಿತ್ರತಂಡ ಹಂಚಿಕೊಳ್ಳುತ್ತಿದೆ. ಕೆಜಿಎಫ್ ನಾಯಕ ನಟ ಯಶ್ ಅವರನ್ನು ನಟ ಸಂಜಯ್ ದತ್ ಟ್ರೇಲರ್ ರಿಲೀಸ್ ಇವೆಂಟ್ ನಲ್ಲಿ ಹೊಗಳಿದ್ದರು. ಇದೀಗ ನಟಿ ರವೀನಾ ಟಂಡನ್ ಕೂಡಾ ಯಶ್ ಅವರ ವೃತ್ತಿ […]
“ರೆಕಾರ್ಡ್ ಮುರಿಯೋದಲ್ಲ, ಬರಿಯೋದು ನಮ್ಮ ಗುರಿ”- ಯಶ್

ಕೆಜಿಎಫ್ ಚಾಪ್ಟರ್ 2 ಚಿತ್ರ ಬೆಳ್ಳಿತೆರೆಗಳ ಮೇಲೆ ಮೂಡಿಬರಲು ಇನ್ನೇನು ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇವೆ. ಇದೇ ಏಪ್ರಿಲ್ 14ರಿಂದ ಸರ್ವಸಿನಿರಸಿಕರಿಗೂ ಚಿತ್ರಮಂದಿರಗಳಲ್ಲಿ ಕಾಣಸಿಗಲಿರೋ ಈ ಅತಿನಿರೀಕ್ಷಿತ ಸಿನಿಮಾದ ಪ್ರಚಾರದೋಟ ಅತಿ ಬಿರುಸಿನಿಂದ ಸಾಗುತ್ತಿದೆ. ಒಂದೆಡೆ ಚಿತ್ರದ ಟ್ರೈಲರ್ ಹಾಗು ಹಾಡುಗಳು ಬಿಡುಗಡೆಯಾದ ಎಲ್ಲ ಭಾಷೆಯಲ್ಲೂ ಎಲ್ಲರ ಮನಸೆಳೆಯುತ್ತಿದ್ದರೆ, ಇನ್ನೊಂದೆಡೆ ಚಿತ್ರತಂಡ ಪ್ರಚಾರ-ಪ್ರವಾಸವನ್ನ ಕೈಗೊಳ್ಳುತ್ತಿದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ತನ್ನೆಡೆಗಿರುವ ನಿರೀಕ್ಷೆಗಳ ಗೋಪುರದ ಎತ್ತರವನ್ನ ಏರಿಸುತ್ತಲೇ ಇದೆ ಕೆಜಿಎಫ್ ಚಾಪ್ಟರ್ 2. ಚಿತ್ರತಂಡದ ಪ್ರಮುಖ ವ್ಯಕ್ತಿಗಳಾದ ರಾಕಿಂಗ್ […]
ಕಾಶ್ಮೀರಿ ಮುಸ್ಲಿಂ ಹುಡುಗಿಯಾದ ಕರ್ನಾಟಕದ ಕ್ರಶ್

ದಕ್ಷಿಣ ಭಾರತದಲ್ಲಿ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿರುವ ರಶ್ಮಿಕಾ ಅವರಿಗೆ ನಿನ್ನೆ ಹುಟ್ಟುಹಬ್ಬದ ಸಂಭ್ರಮ. ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಇನ್ನು ರಶ್ಮಿಕಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರಕಿದೆ. ಹೌದು, ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದಂದು ಅವರ ಹೊಸ ಚಿತ್ರ ಘೋಷಣೆ ಆಗಿದ್ದು ಚಿತ್ರದ ಮೋಷನ್ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕಾಶ್ಮೀರಿ ಮುಸ್ಲಿಂ ಹುಡುಗಿ ಅಫ್ರೀನ್ ಆಗಿ ನಟಿಸುತ್ತಿದ್ದು […]

