‘ಸಖತ್’ ಬಂತು ಮುಂದೇನು ??

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಚಂದನವನದಲ್ಲಿ ಅತಿ ಬ್ಯುಸಿ ಆಗಿರೋ ನಟರಲ್ಲಿ ಒಬ್ಬರು. ಗಣೇಶ್ ಅವರ ಬಳಿ ಸಾಲು ಸಾಲು ಸಿನಿಮಾಗಳು ಸಾಲು ನಿಂತಿವೆ. ಇವರ ಇತ್ತೀಚಿಗಿನ ‘ಸಖತ್’ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. 2021ರ ನವೆಂಬರ್ ನಲ್ಲಿ ಬೆಳ್ಳಿತೆರೆ ಕಂಡ ಈ ಸಿನಿಮಾ ಸಿನಿರಸಿಕರಿಂದ ಒಳ್ಳೆಯ ಒಪ್ಪಿಗೆಯನ್ನ ಪಡೆದಿತ್ತು. ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳು ಕಳೆದ ಮೇಲೆ ಏಪ್ರಿಲ್ 4ರಂದು ಚಿತ್ರ ಒಟಿಟಿ ಮುಖ ಕಂಡಿದೆ. ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರ ಏಪ್ರಿಲ್ 4ರಂದು ಉದಯ […]

‘ತೂಫಾನ್’ ಎಬ್ಬಿಸಿದ ಬಳಿಕ ಕೆಜಿಎಫ್ ನಿಂದ ಎಮೋಷನಲ್ ಹಾಡು.

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ನೀಡುವುದು ಬೇಕಾಗಿಲ್ಲ. ಪ್ರತಿಯೊಬ್ಬ ಸಿನಿರಸಿಕನು ಸಹ ಕುತೂಹಲದಲ್ಲೇ ಈ ಸಿನಿಮಾದ ಬಗೆಗಿನ ಸಾಕಷ್ಟು ಮಾಹಿತಿಗಳನ್ನ ಕಲೆಹಾಕಿರುತ್ತಾನೆ. ಇನ್ನೇನು ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಟ್ರೈಲರ್ ಬಿಡುಗಡೆಗೆ ವಿಜೃಂಭಣೆಯ ಕಾರ್ಯಕ್ರಮ ನಡೆಸಿ ಪ್ರಪಂಚದ ಮೂಲೆಮೂಲೆಗೂ ಬಿಸಿ ಮುಟ್ಟಿಸಿದ್ದಾಯ್ತು. ಈಗ ಚಿತ್ರತಂಡ ತಮ್ಮ ಪ್ರಚಾರದ ಕೆಲಸಗಳನ್ನ ಬಿರುಸಿನಿಂದ ನಡೆಸುತ್ತಿದೆ. ಈ ನಡುವೆ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಎರಡನೇ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಕೆಜಿಎಫ್ ಚಿತ್ರತಂಡದಿಂದ ನಾಯಕ ರಾಕಿಂಗ್ […]

ಕೆಜಿಎಫ್ ಬಗ್ಗೆ ಅಧೀರನ ಮನದಾಳದ ಮಾತು

ಬಾಲಿವುಡ್ ನ ಮುನ್ನಾಭಾಯಿ ಸಂಜಯ್ ದತ್ ಕೆಜಿಎಫ್ -2 ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಖಳನಾಯಕನಾಗಿ ಗಮನ ಸೆಳೆದಿರುವ ಸಂಜಯ್ ಭರ್ಜರಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೂಟಿಂಗ್ ವೇಳೆ ದತ್ ಎಷ್ಟು ಕಷ್ಟಪಟ್ಟರು ಎಂದು ಹೇಳಿಕೊಂಡಿದ್ದಾರೆ. ಕೆಜಿಎಫ್ – 2 ಚಿತ್ರದಲ್ಲಿ ವಿಭಿನ್ನ ಗೆಟಪ್ ನಿಂದ ಮಿಂಚುತ್ತಿರುವ ಸಂಜಯ್ ದತ್ ಅವರನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಂಜಯ್ ಅವರು ಶೂಟಿಂಗ್ ನಿಂದ ಸ್ವಲ್ಪ […]

ರಾಜ್ ಕುಟುಂಬದ ‘ಯುವ’ಕುಡಿಗೆ ಸ್ಟಾರ್ ನಿರ್ದೇಶಕನ ಸಾಥ್.

ರಾಜ್ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ನಟ-ನಟಿಯರು ಬಂದಿದ್ದಾರೆ. ಬರುತ್ತಲಿದ್ದಾರೆ ಕೂಡ. ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಾದ ಯುವರಾಜಕುಮಾರ್ ಅವರು ಚಿತ್ರರಂಗಕ್ಕೆ ಬರುವುದು ಹಿಂದೆಯೇ ಖಾತ್ರಿಯಾಗಿತ್ತು. ಈಗ ಈ ಸುದ್ದಿಯಲ್ಲಿ ಬದಲಾವಣೆಯೊಂದಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯುವರಾಜ್ ಗೆ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಪ್ಪು ಅಗಲಿಕೆಯ ಬಳಿಕ ಅಸಂಖ್ಯ ಅಭಿಮಾನಿಗಳು ಯುವರಾಜಕುಮಾರ್ ಅವರೇ ನಮಗೆ ಮುಂದಿನ ‘ಅಪ್ಪು’ ಎಂದು ಭಾವಿಸುತ್ತಿದ್ದಾರೆ. ನಟನೆ-ನಾಟ್ಯದಲ್ಲೆಲ್ಲ ಚಿಕ್ಕಪ್ಪ ಅಪ್ಪುವನ್ನೇ ಹೋಲುವ ಯುವ ಅವರ […]

ಗೆಳೆಯ ಕಿಚ್ಚನಿಗೆ ವಿಶ್ ಮಾಡಿದ ಸೆಹ್ವಾಗ್ ಹೇಳಿದ್ದೇನು ಗೊತ್ತಾ?

ಈಗ ಸ್ಟಾರ್ ನಟರ ಚಿತ್ರಗಳದ್ದೇ ಹವಾ. ಮೊನ್ನೆಯಷ್ಟೇ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದು ಸ್ಯಾಂಡಲ್ ವುಡ್ ನಲ್ಲಿ ಸಕತ್ ಸದ್ದು ಮಾಡಿತ್ತು. ಇದೀಗ ಮತ್ತೊಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ “ವಿಕ್ರಾಂತ್ ರೋಣ” ತೆರೆಗೆ ಬರಲು ಸಜ್ಜಾಗಿದೆ. ಅಂದ ಹಾಗೇ ಯುಗಾದಿ ಹಬ್ಬದಂದು ಚಿತ್ರದ ಟೀಸರ್ ನ್ನು ಕೂಡಾ ಚಿತ್ರತಂಡ ಈಗಾಗಲೇ ರಿಲೀಸ್ ಮಾಡಿದೆ. ಇನ್ನು ಬಹುಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಈ […]

ರಗಡ್ ಅವತಾರದ ಮೂಲಕ ರಂಜಿಸಲಿದ್ದಾರೆ ಚಿನ್ನಾರಿಮುತ್ತ

ಕನ್ನಡದ ಬ್ಯುಸಿಯೆಸ್ಟ್ ನಟರಲ್ಲಿ ವಿಜಯ್ ರಾಘವೇಂದ್ರ ಕೂಡಾ ಒಬ್ಬರು. ಸಿನಿಮಾದ ಜೊತೆಗೆ ಟಿವಿ ಶೋಗಳಲ್ಲಿ ಬ್ಯುಸಿ ಇರುವ ನಟ ಈಗ “ರಾಘು” ಎಂಬ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾವನ್ನು ಆನ ಹಾಗೂ ಬ್ಯಾಂಗ್ ನಂತಹ ಚಿತ್ರಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಆನಂದ್ ರಾಜ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ನಾಯಕಿಯ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಈ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾದ ಶೀರ್ಷಿಕೆ ಹಾಗೂ ಪೋಸ್ಟರ್ ಗುರುವಾರ ಬಿಡುಗಡೆ […]

ವಿಶೇಷ ಫೋಟೋ ಹಂಚಿಕೊಂಡ ಬಿಗ್ ಬಿ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಬೇಕು ಎಂಬುದು ಎಲ್ಲರ ಕನಸು. ಮಾತ್ರವಲ್ಲ ಇದರ ಜೊತೆಗೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಹಲವರ ಆಸೆ ಆಗಿರುತ್ತದೆ. ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಈ ವಿಷಯದಲ್ಲಿ ಲಕ್ಕಿ. ಹೌದು, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಇದೀಗ ಅಮಿತಾಭ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ. ಸಂತಸದ ವಿಚಾರವೆಂದರೆ ಆ ಫೋಟೋವನ್ನು ಸ್ವತಃ ಅಮಿತಾಭ್ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈಗಾಗಲೇ ಎರಡು ಹಂತಗಳಲ್ಲಿ ಶೂಟಿಂಗ್ ಮುಗಿದಿದ್ದು ಈ […]

ಭೂಗತ ಜಗತ್ತಿನ ದೊರೆ ‘ಹಿಟ್ಲರ್’ ಈಗ ಇನ್ನೊಂದು ಅವತಾರದಲ್ಲಿ…

ಭೂಗತ ಜಗತ್ತಿನ ದೊರೆ ‘ಹಿಟ್ಲರ್’ ಆಗಿ ಬೆಳ್ಳಿತೆರೆಯನ್ನ ಆಳಿದ ಬಳಿಕ ನಾಯಕನಟ ಆರವ್ ಅವರು ಇದೀಗ ನ್ಯಾಯವಾದಿಯಾಗಲಿದ್ದಾರೆ. ಶ್ರೀಧರ್ ಕಶ್ಯಪ್ ನಿರ್ದೇಶನದ ‘ಕೇಸ್ ನಂಬರ್: 786’ ಇವರ ಮುಂದಿನ ಚಿತ್ರ. ಚಂದ್ರಮೋಹನ್ ಆರ್ ಅವರ ‘ವಿಥಿ ಸಿನಿ ಕ್ರಿಯೇಷನ್ಸ್’ ಸಂಸ್ಥೆಯಡಿಯಲ್ಲಿ ಮೂಡಿಬರುತ್ತಿರೋ ಈ ಸಿನಿಮಾದ ಫರ್ಸ್ಟ್ ಲುಕ್ ಈಗಾಗಲೇ ಅನಾವರಣಗೊಂಡಿದೆ. ಜಯಚಂದ್ರ. ಜೆ. ಡಿ ಅವರ ಕಥೆ-ಮಾತುಕತೆ ಇರೋ ಈ ಚಿತ್ರಕ್ಕೆ, ಎಂ. ಬಿ. ಅಲ್ಲಿಕಟ್ಟಿ ಅವರ ಛಾಯಾಗ್ರಾಹಣ, ಎನ್. ಎಂ. ವಿಶ್ವ ಅವರ ಸಂಕಲನ ಹಾಗು […]

ಟಾಲಿವುಡ್ ನ ಹ್ಯಾಂಡ್ ಸಮ್ ನಟನಿಗೆ ಜೋಡಿಯಾಗಲಿರುವ ನಟಿ ಇವರೇ ನೋಡಿ

ಟಾಲಿವುಡ್ ನ “ಉಪ್ಪೇನ” ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನಟಿ ಕೃತಿ ಶೆಟ್ಟಿ ಅವರಿಗೆ ನಂತರ ಹಲವು ಸಿನಿಮಾ ಆಫರ್ಸ್ ಗಳು ಬಂದಿದೆ. ಸದ್ಯ ಕೃತಿ ಕೈಯಲ್ಲಿ ಐದು ಚಿತ್ರಗಳು ಇವೆ. 18ನೇ ವಯಸ್ಸಿನಲ್ಲಿ ಸ್ಟಾರ್ ಪಟ್ಟ ಗಳಿಸಿರುವ ಕೃತಿ ಶೆಟ್ಟಿ ಈಗ ಕಾಲಿವುಡ್ ಪ್ರವೇಶಿಸುತ್ತಿದ್ದಾರೆ. ಹೌದು, ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ಅವಕಾಶ ಪಡೆದುಕೊಳ್ಳುತ್ತಿರುವ ಕರಾವಳಿ ಮೂಲಕ ಕೃತಿಗೆ ಈಗ ತಮಿಳಿನ ಖ್ಯಾತ ನಟ ಸೂರ್ಯ ಅವರೊಂದಿಗೆ ನಟಿಸುವ ಅವಕಾಶ ದೊರಕಿದೆ. ತಮಿಳಿನ ಖ್ಯಾತ […]

‘ವಿಕ್ರಾಂತ್ ರೋಣ’: ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭ..

ದಿನದಿನಕ್ಕೂ ತಮ್ಮ ಚಿತ್ರದೆಡೆಗೆ ಪ್ರೇಕ್ಷಕರಿಗಿದ್ದ ರೋಮಾಂಚನವನ್ನ ಹೆಚ್ಚಿಸುತ್ತಿದ್ದ ಚಿತ್ರತಂಡವೆಂದರೆ ಅದುವೇ ‘ವಿಕ್ರಾಂತ್ ರೋಣ’. ಸೆಟ್ಟೇರಿದಾಗಿನಿಂದ ತನ್ನಲ್ಲಿದ್ದ ಒಂದಲ್ಲ ಒಂದು ಅಂಶಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ಬಹಳ ಹಿಂದೆಯೇ ಬಿಡುಗಡೆಗೆ ಸಿದ್ದವಾಗಿದ್ದ ಚಿತ್ರ ಕೋರೋನ ಕಾರಣಗಳಿಂದ ಮುಂದೆಕ್ಕೆ ಸಾಗುತ್ತಲೇ ಇತ್ತು. ಈ ಸಂಧರ್ಭದಲ್ಲಿ ಚಿತ್ರತಂಡ ಚಿತ್ರಕ್ಕೆ ಬೇಕಾದ ಅಗತ್ಯ ಬದಲಾವನೆಗಳನ್ನು ಮಾಡಿಕೊಂಡು ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ(ಏಪ್ರಿಲ್ 2) ಸಿನಿಮಾದ ಬಿಡುಗಡೆ ದಿನಾಂಕವನ್ನ ಪ್ರೇಕ್ಷಕ ಬಂಧುಗಳಿಗೆ ತಿಳಿಸೋ ಟೀಸರ್ ಒಂದು ಬಿಡುಗಡೆಯಾಗಲಿದ್ದು ಮತ್ತೊಂದು ಅತ್ತ್ಯುತ್ತಮ […]