ಒಟಿಟಿಗೆ ಕಾಲಿಡಲಿರುವ ವರಣ್ ಧವನ್ ಗೆ ಒಟಿಟಿ ಫ್ಲಾಟ್ ಫಾರ್ಮ್ ಇಷ್ಟ

ಒಟಿಟಿ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ಹೀಗಾಗಿ ತಾರೆಯರು ಈಗ ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಪಟ್ಟಿಗೆ ನಟ ವರುಣ್ ಧವನ್ ಸೇರ್ಪಡೆಯಾಗಿದೆ. ದೊಡ್ಡ ವೆಬ್ ಸಿರೀಸ್ ನಲ್ಲಿ ನಟಿಸಲಿರುವ ವರುಣ್ ಪ್ರಿಯಾಂಕ ಚೋಪ್ರ ಅಥವಾ ಸಮಂತಾ ಅವರೊಂದಿಗೆ ಒಟಿಟಿಯಲ್ಲಿ ಡೆಬ್ಯುಟ್ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ವರುಣ್ ಕೂಡಾ ತಾನು ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬ ಸುಳಿವು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ವರುಣ್ ” ನನಗೆ ಒಟಿಟಿ ಪ್ಲಾಟ್ ಫಾರ್ಮ್ ಇಷ್ಟ. ಸದ್ಯದಲ್ಲಿಯೇ […]
ರಣ್ಬೀರ್ ಪತ್ನಿಯಾಗಿ ರಶ್ಮಿಕಾ??

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಭಾರತದಾದ್ಯಂತ ವಿವಿಧ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಮುಗಿಸಿ ಸದ್ಯ ಬಾಲಿವುಡ್ ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ ರಶ್ಮಿಕಾ. ‘ನ್ಯಾಷನಲ್ ಕ್ರಶ್’ ಎಂದೇ ಖ್ಯಾತಾರಾಗಿದ್ದ ಇವರು ಇದೀಗ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಇವರ ಮುಂದಿನ ಚಿತ್ರ ಬಾಲಿವುಡ್ ನ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆಗೆ ಎನ್ನಲಾಗುತ್ತಿದೆ. ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಇವರು ತದನಂತರ ಹಿಂತಿರುಗಿ ನೋಡಲೇ ಇಲ್ಲ. ಟಾಲಿವುಡ್ ಕೊಲಿವುಡ್ ಎಲ್ಲದರಲ್ಲೂ ಸೈ […]
‘ಏಕ್ ಲವ್ ಯಾ’ ಇನ್ನು ನಿಮಗೆ ಲಭ್ಯ..

ದಶಕಗಳಿಂದ ಕನ್ನಡಿಗರ ಮನದಲ್ಲಿ ಮನೆಮಾಡಿರೋ ಹೆಸರಾಂತ ನಿರ್ದೇಶಕ ‘ಜೋಗಿ’ ಪ್ರೇಮ್ ಅವರ ಇತೀಚಿಗಿನ ಚಿತ್ರ ‘ಏಕ್ ಲವ್ ಯಾ’. ‘ದಿ ವಿಲನ್’ ನಂತರ ಒಂದಷ್ಟು ಸಮಯ ಕಳೆದು ಪ್ರೇಮ್ ಈ ಸಿನಿಮಾ ಮಾಡಿದ್ದರಿಂದ ನಿರೀಕ್ಷೆಗಳು ಹೆಚ್ಚೇ ಇತ್ತು. ಅಂತೆಯೇ ಚಿತ್ರಮಂದಿರಗಳತ್ತ ಜನರನ್ನ ಸೆಳೆಯುವಲ್ಲೂ ಸಿನಿಮಾ ಯಶಸ್ವಿಯಾಗಿತ್ತು. ಈಗ ಚಿತ್ರ ಪ್ರೇಕ್ಷಕರ ಮನೆ-ಮನೆಗಳಲ್ಲಿ ಲಭ್ಯವಾಗಲಿದೆ. ಅದ್ಹೇಗೆ ಅಂದರೆ, ಸಾಮಾನ್ಯ ಉತ್ತರ.. ಒಟಿಟಿ. ಇತ್ತೀಚೆಗೆ ಅತಿ ಹೆಚ್ಚು ಕನ್ನಡ ಸಿನಿಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಸಂಸ್ಥೆ ‘zee5’. ‘ಏಕ್ ಲವ್ […]
‘ಜೇಮ್ಸ್’ ಜೈಕಾರ ಇನ್ಮುಂದೆ ಒಟಿಟಿಯಲ್ಲಿ

ಕರುನಾಡ ಜನತೆಯ ಮನಗೆದ್ದ ‘ಜೇಮ್ಸ್’ ಚಿತ್ರ ಈಗಲೂ ಚಿತ್ರಮಂದಿರಗಳನ್ನ ಜನರಿಂದ ತುಂಬಿಸುತ್ತಿದೆ. ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ಪರಿಪೂರ್ಣ ನಾಯಕನಟನಾಗಿ ಕಣ್ತುಂಬಿಕೊಳ್ಳಲು ರಾಜ್ಯದ ಎಲ್ಲ ಭಾಗಗಳಲ್ಲೂ ಜನರು ಸಾಲುಗಟ್ಟಿ ಚಿತ್ರಮಂದಿರಗಳನ್ನ ಸೇರಿದ್ದರು. ಈಗಲೂ ಸೇರುತ್ತಿದ್ದಾರೆ ಕೂಡ. ಅಪ್ಪು ಅಭಿನಯವನ್ನ, ಆಕ್ಷನ್-ಡಾನ್ಸ್ ಅನ್ನು ಅಪ್ಪಿಕೊಳ್ಳದವರೇ ಇರಲಿಲ್ಲ. ಈಗ ಚಿತ್ರತಂಡ ಸಿನಿಮಾದ ಒಟಿಟಿ ಬಿಡುಗಡೆಯ ವಿಚಾರವನ್ನ ಹೊರಹಾಕಿದೆ. ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ ಸಂಪೂರ್ಣ ಚಿತ್ರೀಕರಣಕ್ಕೂ […]
ಮತ್ತೆ ನೈಜ ಘಟನೆಯತ್ತ ಮಂಸೋರೆ ಚಿತ್ತ.

‘ನಾತಿಚರಾಮಿ’, ‘ಹರಿವು’, ಹಾಗು ಇತ್ತೀಚಿಗಿನ ‘ಆಕ್ಟ್ 1978’ ಗಳಂತಹ ಮನಕಲುಕುವ ಚಿತ್ರಗಳಿಂದ ಸಮಾಜಕ್ಕೆ ವಿಶೇಷ ಸಂದೇಶಗಳನ್ನು ನೀಡಿದ ನಿರ್ದೇಶಕರು ಮಂಸೋರೆ ಅವರು. ನೈಜ ಹಾಗು ನೈಜತೆಗೆ ಹತ್ತಿರವಾದ ಕಥೆಗಳನ್ನ ತೆಗೆದುಕೊಂಡು, ತನ್ನದೇ ನಿರ್ಲಿಪ್ತ ರೀತಿಯಲ್ಲಿ ಜನರೆದುರಿಗೆ ಅದನ್ನ ಇರಿಸಿ, ಸೈ ಎನಿಸಿಕೊಂಡವರಿವರು. ಎರಡೆರಡು ಬಾರಿ ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಕನ್ನಡದ ಹೆಮ್ಮೆಯ ಈ ನಿರ್ದೇಶಕರು ಈಗ ಹೊಸತೊಂದು ಚಿತ್ರವನ್ನ ಆರಂಭಿಸಲಿದ್ದಾರೆ. ವಿಶೇಷವೆಂದರೆ ಈ ಬಾರಿಯು ಕೂಡ ಮಂಸೋರೆ ತೆಕ್ಕೆಯಲ್ಲಿರೋದು ಒಂದು ನೈಜ ಕಥೆಯೇ ಅಂತೆ. ಕೋರೋನ ಲಾಕ್ಡೌನ್ […]
ದಶಕದ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಜೊತೆ ನಟಿಸುವುದು ಖುಷೊ ತಂದಿದೆ – ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆಗೆ ಈ ವರ್ಷ ಹರುಷವೇ ಸರಿ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿ “ದಸರಾ” ಚಿತ್ರವನ್ನು ನಿರ್ಮಾಣ ಮಾಡುವುದರೊಂದಿಗೆ ನಾಯಕಿಯಾಗಿ ಸತೀಶ್ ನೀನಾಸಂ ಜೊತೆ ನಟಿಸುತ್ತಿದ್ದಾರೆ. ಗಾಳಿಪಟ 2 ಚಿತ್ರದಲ್ಲಿ ನಟಿಸುತ್ತಿರುವ ಶರ್ಮಿಳಾ ಮಾಂಡ್ರೆ ಅವರಿಗೆ ಇದೇ ತರದ ಪಾತ್ರ ಗಾಳಿಪಟ ಚಿತ್ರದ ಮೊದಲ ಭಾಗದಲ್ಲಿ ನಟಿಸಲು 2008ರಲ್ಲಿ ಆಫರ್ ದೊರಕಿತ್ತು. “ಹೆಚ್ಚಿನವರಿಗೆ ಈ ವಿಷಯದ ಬಗ್ಗೆ ತಿಳಿದಿಲ್ಲ. ಯೋಗರಾಜ್ ಭಟ್ ಸರ್ ಗಾಳಿಪಟ ಚಿತ್ರಕ್ಕೆ ನನಗೆ […]
ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಕನಸಿನ ರಾಣಿ

ಕನ್ನಡದ ಸಿನಿಮಾ ರಂಗದ ಖ್ಯಾತ ನಟಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.ಪತಿ ರಾಮು ನಿಧನದ ನಂತರ ಒಪ್ಪಿಕೊಂಡಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶನ ಮಾಡಲಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಮಾಲಾಶ್ರೀ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಇದೀಗ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗದತ್ತ ಮರಳಿರುವ ಮಾಲಾಶ್ರೀ ಈ ಸಿನಿಮಾದಲ್ಲಿ ಸೇನಾ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆಯ ಪಾತ್ರ ನಿರ್ವಹಿಸಲಿದ್ದಾರೆ. ಅವರ ಕೆರಿಯರ್ ನಲ್ಲಿ ಎರಡನೇ ಬಾರಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ […]
ಕೊನೆಗೂ ಬಿಡುಗಡೆಗೆ ಮುಹೂರ್ತವಿಟ್ಟ ‘ವಿಕ್ರಾಂತ್ ರೋಣ’

ಮಾಡಿರೋ ಎರಡೇ ಚಿತ್ರಗಳಿಂದ ಜನರಲ್ಲಿ ತನ್ನ ಬಗ್ಗೆ ಹೊಸದೊಂದು ಭರವಸೆ ಹುಟ್ಟಿಸಿರೋ ನಿರ್ದೇಶಕರು ಅನೂಪ್ ಭಂಡಾರಿ. ದಶಕಗಳಿಂದ ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಆಗಿರೋ ಬಾದ್ಶಾಹ್ ಕಿಚ್ಚ ಸುದೀಪ. ಇವರಿಬ್ಬರು ಜೊತೆಯಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ‘ರಂಗಿತರಂಗ’, ‘ರಾಜರಥ’ದಂತಹ ಚಿತ್ರಗಳಿಂದ ಜನರ ಮನಸೆಳೆದ ನಿರೂಪ್ ಭಂಡಾರಿ ಅವರ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ಚಿತ್ರ ಸದ್ಯ ಭಾರತದಾದ್ಯಂತ ಬಹುನಿರೀಕ್ಷಿತ ಚಿತ್ರವಾಗಿದೆ. ಬಹುಕಾಲದ ಹಿಂದೆಯೇ ಸೆಟ್ಟೇರಿದ್ದ ಈ ಸಿನಿಮಾ ಕೊನೆಗೂ ಬೆಳ್ಳಿತೆರೆ ಏರುವ […]
‘ರಾಧೆ ಶ್ಯಾಮ್’ ಚಿತ್ರತಂಡದಿಂದ ಗುಡ್ ನ್ಯೂಸ್

ತೆಲುಗು ಚಿತ್ರರಂಗದ ‘ಡಾರ್ಲಿಂಗ್’ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಅತ್ಯಂತ ನಿರೀಕ್ಷೆಗಳನ್ನ ಬೆನ್ನಿಗಂಟಿಸಿಕೊಂಡಿದ್ದ ಚಿತ್ರ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ಬೆಳ್ಳಿತೆರೆ ಕಂಡದ್ದು ಎಲ್ಲರಿಗೂ ಗೊತ್ತಿರೋ ವಿಷಯ. ರಾಧಾಕೃಷ್ಣ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಬಹುಪಾಲು ಪ್ರೇಕ್ಷಕರ ಮನಸೆಳೆಯುವಲ್ಲಿ ವಿಫಲವಾಗಿತ್ತು. ಚಿತ್ರಮಂದಿರಗಳನ್ನ ಜನರಿಂದ ತುಂಬಿಸಲು ಈ ಸಿನಿಮಾಗೆ ಸಾಧ್ಯವಾಗಲಿಲ್ಲ. ನಿರೀಕ್ಷೆಗಳ ಸಾಗರವನ್ನೇ ಹೊತ್ತುಬಂದಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೋತಿದ್ದು ಹಲವಾರು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿತ್ತು. ಸದ್ಯ ಈ ಸಿನಿಮಾ ಒಟಿಟಿ ಕಡೆಗೆ ಮುಖಮಾಡಿದೆ. ಪ್ರಭಾಸ್ […]
ಕೆಜಿಎಫ್ ಟ್ರೈಲರ್ ಲಾಂಚ್: ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ರೋಮಾಂಚನ.

ಏಪ್ರಿಲ್ 14ರಂದು ಪ್ರಪಂಚಾದಾದ್ಯಂತ ತೆರೆಕಾಣುತ್ತಿರೋ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಾಕಿ ಭಾಯ್ ನಾಯಕತ್ವದ ನರಾಚಿಯ ತುಣುಕೊಂದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಅತಿನಿರೀಕ್ಷಿತರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರೋ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ತಯಾರಿಗಳು ಭರದಿಂದ ಸಾಗುತ್ತಿವೆ. ಈಗಾಗಲೇ ತಿಳಿದಿರುವ ಹಾಗೆ ಭಾರತದ ಅತ್ಯಂತ ವಿಜೃಂಭಣೆಯ ಈ ಟ್ರೈಲರ್ ರಿಲೀಸ್ ಇವೆಂಟ್ ಅನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ ನಿರ್ಮಾಪಕರಾದಂತ ಕರಣ್ ಜೋಹಾರ್ ನಡೆಸಿಕೊಡಲಿದ್ದು, ಕರುನಾಡ ಚಕ್ರವರ್ತಿ ಶಿವಣ್ಣ ಮುಖ್ಯ ಅತಿಥಿಯಾಗಲಿದ್ದಾರೆ. ಬೇರೆ ಬೇರೆ ಭಾಷೆಯ […]

