RRR ಬಾಕ್ಸ್ ಆಫೀಸ್: ವಿಶ್ವದಾಖಲೆಗಳೆಲ್ಲ ಪುಡಿ ಪುಡಿ.

ಭಾರತ ಚಿತ್ರರಂಗದ ‘ಬಾಹುಬಲಿ’, ಎಸ್. ಎಸ್. ರಾಜಮೌಳಿ ನಿರ್ದೇಶನದಲ್ಲಿ ಟೋಲಿವುಡ್ ನ ಹೆಸರಾಂತ ಸ್ಟಾರ್ ನಟರುಗಳಾದಂತ ಜೂನಿಯರ್ ಎನ್ಟಿಆರ್ ಹಾಗು ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರವಾಗಿದ್ದ RRR ಮಾರ್ಚ್ 25ರಿಂದ ಬೆಳ್ಳಿ ತೆರೆಗಳ ಮೇಲೆ ಅಬ್ಬರಿಸುತ್ತಿದೆ. ಪ್ರಪಂಚದಾದ್ಯಂತ ಪಂಚಭಾಷೆಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಬಿಡುಗಡೆಯಗಿರೋ ಈ ‘ದೃಶ್ಯಕಾವ್ಯ’ವನ್ನು ಕಣ್ತುಂಬಿಕೊಳ್ಳಲು ಎಲ್ಲೆಡೆಯಿಂದ ಪ್ರೇಕ್ಷಕರ ಸಾಗರವೇ ಹರಿದುಬರುತ್ತಿದೆ. ಎಲ್ಲೆಲ್ಲೂ ಹೌಸ್ ಫುಲ್ ಆಗಿ ಮೆರೆಯುತ್ತಿರುವ ಈ ಚಿತ್ರದ ಕಲೆಕ್ಷನ್ ದಾಖಲೆಗಳನ್ನ ಬರೆಯುವುದು ಅಚ್ಚರಿಯ ವಿಷಯವೇನಲ್ಲ. NRRR ಚಿತ್ರ ಇತಿಹಾಸದ ದಾಖಲೆಗಳನ್ನೆಲ್ಲ […]
ಕೆಜಿಎಫ್ ನ ಟ್ರೈಲರ್ ರಿಲೀಸ್: ಹರಿದು ಬರಲಿದೆ ತಾರಾಗಣ

ಕನ್ನಡದ ಹೆಮ್ಮೆ, ಭಾರತದ ಅತಿನಿರೀಕ್ಷಿತ ಚಿತ್ರ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಈ ಸಿನಿಮಾದ ಬಗೆಗಿನ ಸಂಪೂರ್ಣ ಮಾಹಿತಿ ಬಹುಪಾಲು ಎಲ್ಲ ಕಲಾರಸಿಕರಲ್ಲೂ ಇರುವಂತದ್ದೇ. ಸದ್ಯ ಚಿತ್ರತಂಡ ಹೇಳಿದಂತೆ ನಾಳೆ(ಮಾರ್ಚ್ 27) ಸಿನಿಮಾದ ಬಹುಬೇಡಿಕೆಯ ಟ್ರೈಲರ್ ಬಿಡುಗಡೆಯಾಗಲಿದ್ದು, ಈ ಸಂಧರ್ಭಕ್ಕಾಗಿ ವಿಜೃಂಭಣೆಯ ಕಾರ್ಯಕ್ರಮ ಒಂದನ್ನು ಚಿತ್ರತಂಡ ಆಯೋಜಿಸಿದೆ. ಮಾರ್ಚ್ 27ರಂದು ಬೆಂಗಳೂರಿನಲ್ಲೇ ನಡೆಯಲಿರೋ ಈ ಕಾರ್ಯಕ್ರಮವನ್ನ ಬಾಲಿವುಡ್ ನ ಹೆಸರಾಂತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹಾರ್ ನಡೆಸಿ ಕೊಡಲಿದ್ದಾರಂತೆ(host). ಕರಣ್ ಜೋಹಾರ್ ನಡೆಸಿಕೊಡೋ ಟಿವಿ […]
ಟಾಲಿವುಡ್ ಅಂಗಳದಲ್ಲಿ ದಾಖಲೆ ಸೃಷ್ಟಿ ಮಾಡಿದ ಕಲಾವತಿ

ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ಸರ್ಕಾರಿ ವಾರಿ ಪಾಟ ಚಿತ್ರದ ಕಲಾವತಿ ಹಾಡು ಟಾಲಿವುಡ್ ನಲ್ಲಿ ಹೊಸದಾಗಿರುವ ಹವಾ ಎಬ್ಬಿಸಿತ್ತು. ಪ್ರೇಮಿಗಳ ದಿನ ರಿಲೀಸ್ ಆದ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಮತ್ತೊಂದು ದಾಖಲೆ ಬರೆದಿದೆ. ಸಂಗೀತ ನಿರ್ದೇಶಕ ಎಸ್ ತಮನ್ ಅವರ ಮ್ಯೂಸಿಕ್ ನಲ್ಲಿ ಮೂಡಿರುವ ಈ ಹಾಡು ರಿಲೀಸ್ ಆದ 36 ದಿನಗಳಲ್ಲಿ ಹೊಸ ದಾಖಲೆ ಬರೆದಿದೆ. ಸರ್ಕಾರಿ ವಾರಿ ಪಾಟ ಚಿತ್ರದ ಎರಡು […]
‘ಜೇಮ್ಸ್’ ಪರ ನಿಂತ ಮುಖ್ಯಮಂತ್ರಿಗಳು.

‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರು ಸಂಪೂರ್ಣ ನಾಯಕರಾಗಿ ನಟಿಸಿದಂತಹ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಗೊಂಡು ಎಲ್ಲೆಡೆ ಚಿತ್ರಮಂದಿರಗಳ ಜೊತೆಗೆ ಕನ್ನಡಿಗರ ಮನಸ್ಸನ್ನು ತುಂಬುತ್ತಿದೆ. ಎಲ್ಲ ಕಡೆ ಹೌಸ್ ಫುಲ್ ಶೋಗಳನ್ನು ಪಡೆಯುತ್ತಿರೋ ಈ ಚಿತ್ರವನ್ನ ಅಲ್ಲಲ್ಲಿ ಚಿತ್ರಮಂದಿರಗಳಿಂದ ತೆಗೆಯುತ್ತಿರುವುದು ಕಂಡುಬಂದದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಈ ವಿಷಯಕ್ಕೆ ನಾಡಿನ ಮುಖ್ಯಮಂತ್ರಿಗಳೇ ಒಂದು ಮಟ್ಟಿನ ತೆರೆ ಎಳೆದಿದ್ದಾರೆ. ಭಾರತದೆಲ್ಲೆಡೆ ವಿಶೇಷ ಛಾಪು ಮೂಡಿಸುತ್ತಿರೋ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲರಿಗೂ […]
‘ಕೆಜಿಎಫ್’ ಪ್ರಚಾರಕ್ಕೆ ಈ ಬಾರಿ ಅಭಿಮಾನಿಗಳೇ ಮುಂದಾಳುಗಳು!!!

ರಾಕಿ ಭಾಯ್ ಆಳ್ವಿಕೆಯನ್ನ ಪ್ರಪಂಚಕ್ಕೆ ತಿಳಿಸಲು ಇನ್ನೇನು ಸದ್ಯದಲ್ಲೇ ಕೆಜಿಎಫ್ ಚಿತ್ರ ತೆರೆಮೇಲೆ ಬರಲಿದೆ. ಏಪ್ರಿಲ್ 14ಕ್ಕೆ ಪ್ರಪಂಚದಾದ್ಯಂತ ‘ತೂಫಾನ್’ ಹುಟ್ಟುಹಾಕಲು ಚಿತ್ರತಂಡ ಕಾಯುತ್ತಿದ್ದರೆ, ಬೆಳ್ಳಿತೆರೆಯಲ್ಲಿ ಚಿತ್ರವನ್ನ ನೋಡಿ ಆನಂದಿಸಲು ಅಭಿಮಾನಿ ಸಾಗರವೇ ಕಾಯುತ್ತಿದೆ. ಈ ಸಂಧರ್ಭದಲ್ಲಿ ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿವೆ. ‘ಹೊಂಬಾಳೆ’ ಸಂಸ್ಥೆ ಈ ಬಾರಿಯ ಪ್ರಚಾರದಲ್ಲಿ ಹೊಸ ದಾರಿಯೊಂದನ್ನ ತೆರೆದಿಟ್ಟಿದ್ದು, ಅಭಿಮಾನಿಗಳ ಆನಂದವನ್ನ ಹೆಚ್ಚಿಸಿದೆ. ಈ ಬಾರಿಯ ವಿಶೇಷತೆಯೆಂದರೆ, ಪ್ರಚಾರಕ್ಕೆಂದು ಬಳಸೋ ಪೋಸ್ಟರ್ ಗಳ ಸೃಷ್ಟಿಕರ್ತರು ಸಿನಿಮಾದ ಅಭಿಮಾನಿಗಳೇ ಆಗಿರಲಿದ್ದಾರೆ. […]
ತಂತ್ರಜ್ಞರಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ ಬಡ್ಡೀಸ್ ಸಿನಿಮಾ ತಂಡ.. ವಿಶೇಷತೆ ಏನು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕಿರಣ್ ರಾಜ್ ಅವರ ಭರ್ಜರಿ ಗಂಡು ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಇನ್ನು ಭರ್ಜರಿ ಗಂಡು ಸಿನಿಮಾದ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು. ಇದೀಗ ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಬಡ್ಡೀಸ್ ಸಿನಿಮಾದ ಶೂಟಿಂಗ್ ಕೂಡಾ ಮುಕ್ತಾಯವಾಗಿದೆ. ಮೇ ತಿಂಗಳಿನಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಪೋಸ್ಟರ್ ಒಂದು […]
‘ರಾಕಿ ಭಾಯ್’ ಜೊತೆಗೆ ಬರಲಿದ್ದಾನೆ ‘ಬೀಸ್ಟ್’!!!

ಯುದ್ಧ ಮುಗಿಸಿ ಸುಸ್ತಾಗಿ ಗನ್ ಹಿಡಿದು ಕೂತಿರುವಂತ ತಳಪತಿ ವಿಜಯ್ ಅವರನ್ನ ನೋಡಿ ಅಭಿಮಾನಿಗಳು ರೋಮಾಂಚಿತಗೊಂಡರೆ, ಅದರ ಜೊತೆಗೆ ಇದ್ದ ಸಿನಿಮಾದ ಬಿಡುಗಡೆ ದಿನಾಂಕವನ್ನ ನೋಡಿ ಅಚ್ಚರಿಗೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಮಾತುಗಳು ಆರಂಭವಾದವು ಈಗಲೂ ಆಗುತ್ತಲೇ ಇವೆ. ಯಾಕೆಂದರೆ ‘ಬೀಸ್ಟ್’ ಚಿತ್ರತಂಡ ಹೊರಕೊಟ್ಟ ಬಿಡುಗಡೆ ದಿನಾಂಕ ಏಪ್ರಿಲ್ 13. ಭಾರತದಾದ್ಯಂತ ಪ್ರತೀ ಭಾಷೆಯ ಸಿನಿರಸಿಕನು ಸಹ ಕಾಯುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯಗುವುದು ಏಪ್ರಿಲ್ 14ಕ್ಕೆ. ನರಾಚಿಯ ಬಾಗಿಲು ತೆಗೆಯೋ ಈ ದಿನಾಂಕವನ್ನ ಸುಮಾರು 7 […]
‘ಕಬ್ಜ’ ಚಿತ್ರದ ಕಲಾವಿದರ ದಂಡಿಗೆ ಎರಡು ದೊಡ್ಡ ಹೆಸರುಗಳ ಸೇರ್ಪಡೆ.

ಇಡೀ ಭಾರತದಲ್ಲೇ ಸಂಚಲನ ಸೃಷ್ಟಿಸುತ್ತಿರೋ ಕನ್ನಡದ ಹೊಸ ಪಾನ್-ಇಂಡಿಯನ್ ಸಿನಿಮಾ ‘ಕಬ್ಜ’. ಆರ್. ಚಂದ್ರು ನಿರ್ದೇಶನದ ಈ ಚಿತ್ರ ತಾನು ಬಿಡುಗಡೆಗೊಳಿಸಿದಂತ ನಿಮಿಷವನ್ನು ಮೀರದ ಟೀಸರ್ ಗಳಿಂದಲೇ ಬಹಳ ನಿರೀಕ್ಷೆಗಳನ್ನ ಹುಟ್ಟುಹಾಕುತ್ತಿದೆ. ಇನ್ನು ಇದರ ತಾರಾಗಣ ಜನರ ಆಕಾಂಕ್ಷೆಗಳನ್ನು ಮುಗಿಲಿನೆತ್ತರಕ್ಕೆ ಏರಿಸುತ್ತಲಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟರಾಗಿ ಬಣ್ಣ ಹಚ್ಚಿದರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ‘ಭಾರ್ಗವ ಭಕ್ಷಿ’ ಎಂಬ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಂಡಿರೋ ಭಾರ್ಗವ ಭಕ್ಷಿಯ ಮೊದಲ್ನೋಟದ […]
ಎಲ್ಲೆಡೆ ಧೂಳೆಬ್ಬಿಸುತ್ತಿದೆ ಕೆಜಿಎಫ್ ನ ‘ತೂಫಾನ್’.

‘ಕೆಜಿಎಫ್’ ಕನ್ನಡಿಗರ ಹೆಮ್ಮೆ, ಕನ್ನಡ ಚಿತ್ರರಂಗಕ್ಕೊಂದು ಗರಿಮೆ. ನರಾಚಿಯ ಗೇಟ್ ಗಳು ಅದ್ಯಾವಾಗ ತೆರೆಯುತ್ತವೆಯೋ, ರಾಕಿ ಭಾಯ್ ಆಳ್ವಿಕೆಯನ್ನ ಯಾವಾಗ ನೋಡುತ್ತೇವೋ ಅಂತ ಕನ್ನಡಿಗರಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಎಲ್ಲ ಭಾಷಿಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇನ್ನೇನು ಎರಡು ವಾರಗಳಲ್ಲಿ ಸಿನಿಮಾ ಬೆಳ್ಳಿತೆರೆಗಳ ಮೇಲೆ ರಾರಾಜಿಸಲಿದೆ. ಮಾರ್ಚ್ 27ಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ಈ ಅತಿನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಜನರಿಗರ್ಪಿಸಲಿರೋ ಚಿತ್ರತಂಡ ಇಂದು ಅಂದರೆ ಮಾರ್ಚ್ 21ರ ಬೆಳಿಗ್ಗೆ 11:07ಕ್ಕೆ ಸರಿಯಾಗಿ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಮೊದಲ […]
ಬಾಲ್ಯದ ಕಥೆ ಹೇಳಲು ಬರುತ್ತಿದೆ ‘ಸ್ಕೂಲ್ ಲವ್ ಸ್ಟೋರಿ’

ಕನ್ನಡ ಚಿತ್ರರಂಗ ಒಂದು ಅಗಾಧ ಆಕಾಶದಂತೆ. ಇಲ್ಲಿ ಬರೋ ಚಿತ್ರಗಳ ವಿವಿಧತೆಯನ್ನ ಎಣಿಸಿಡಲು ಸಾಧ್ಯವಿಲ್ಲ. ಸಂಪೂರ್ಣ ಕಮರ್ಷಿಯಲ್ ಆಕ್ಷನ್ ಸಿನಿಮಾದಿಂದ ಹಿಡಿದು ಮನಸ್ಸಿಗೆ ಮುದ ನೀಡೋ ಒಂದೊಳ್ಳೆ ಕಥೆಯವರೆಗೆ ಇಲ್ಲಿ ಎಲ್ಲವೂ ಲಭ್ಯ. ಈಗ ಇದೇ ರೀತಿಯ ಹೊಸ ಕಥೆಯೊಂದು ಬರಲು ಸಜ್ಜಾಗಿದೆ, ಅದುವೇ ‘ಸ್ಕೂಲ್ ಲವ್ ಸ್ಟೋರಿ’. ಹೆಸರಲ್ಲಿರುವಂತೆ ಇದು ಶಾಲೆಯಲ್ಲಿ ನಡೆಯೋ ಪ್ರೇಮಕತೆಯಷ್ಟೇ ಅಲ್ಲ. ಶಾಲೆಯೊಂದಿಗೆ ಮಕ್ಕಳ ಪ್ರೇಮಕತೆ. ಹಳ್ಳಿಮಕ್ಕಳ ವಿದ್ಯಾಭ್ಯಾಸ, ಅಲ್ಲಿನ ಭೇಧಭಾವಗಳು, ಬಡವ-ಶ್ರೀಮಂತ, ಬಡವಿದ್ಯಾರ್ಥಿಗಳ ಬಾಳಲ್ಲಿನ ಕಷ್ಟಗಳು ಕೊನೆಗೆ ಅವರಿಂದಾಗೊ ಸಾಧನೆಗಳು […]

